ನೂರು ದಿನಗಳ ಅಭಿಯಾನ | ಕ್ಷಯರೋಗ ಪತ್ತೆ ಸಮೀಕ್ಷೆ | ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಅವರಿಂದ ಚಾಲನೆ

ಯಾದಗಿರಿ: ಇದೇ ಡಿಸೆಂಬರ್ 7 ರಿಂದ ಮಾರ್ಚ್ 24 ರವರೆಗೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ ಅಂಗವಾಗಿ ಕ್ಷಯರೋಗ ಪತ್ತೆ ಸಮೀಕ್ಷೆ ನಡೆಯಲಿದ್ದು, ಸಂಶಯಾಸ್ಪದ ರೋಗಿಗಳ ಎಕ್ಸ್ ರೇ , ಕಫ ಪರೀಕ್ಷೆ ಮಾಡಲು ಹಾಗೂ ಈ ಕುರಿತು ಅರಿವು ಮೂಡಿಸುವ ವಾಹನಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಇಂದಿನಿಂದ ನೂರು ದಿನಗಳ ಕಾಲ ನಡೆಯುವ ಈ ಅಭಿಯಾನ ಅಂಗವಾಗಿ ಜಿಲ್ಲೆಯಲ್ಲಿ ಗ್ರಾಮವಾರು ಕ್ಷಯರೋಗದ ಬಗ್ಗೆ ಪರಿಣಾಮಕಾರಿ ಜಾಗೃತಿ ಮೂಡಿಸಲಾಗುತ್ತದೆ.

ಈ ಅಭಿಯಾನ ಅಂಗವಾಗಿ ಮನೆ ಮನೆ ಕ್ಷಯರೋಗಿಗಳ ಸರ್ವೆ ಕಾರ್ಯದ ಜೊತೆಗೆ ಸಂಶಯಾಸ್ಪದ ರೋಗಿಗಳ ಎಕ್ಸ್ ರೇ, ಕಫ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸಾ ವಿಧಾನಗಳ ಬಗ್ಗೆ ಸಲಹೆ ನೀಡಲಾಗುತ್ತದೆ.

ಕ್ಷಯರೋಗ ಮುನ್ನೆಚ್ಚರಿಕಾ ಕ್ರಮಗಳ , ಚಿಕಿತ್ಸಾ ವಿಧಾನಗಳ ಬಗ್ಗೆ ಅರಿವು ಜೊತೆಗೆ ಕ್ಷಯರೋಗಿಗಳಿಗೆ ಬೆಂಬಲ, ದತ್ತು ಪಡೆಯುವ ಕಾರ್ಯಕ್ರಮ ಸಹ ಒಳಗೊಂಡಿದೆ.

ಈ ಸಂದರ್ಭದಲ್ಲಿ ಡಿಹೆಚ್ಓ ಡಾ.ಮಹೇಶ ಬಿರಾದಾರ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಸಂಜೀವ ಕುಮಾರ್ ರಾಯಚೂರಕರ್, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಹಣಮಂತರೆಡ್ಡಿ, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನಿತಾ ಗಿಲ್, ಎನ್.ಟಿ.ಇ.ಪಿ ಕಾರ್ಯಕ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!