ಎಲ್ಲೆಡೆ ಸಹಸ್ತ್ರಾರ್ಜುನ ಮಹಾರಾಜರ ಭವ್ಯ ಜಯಂತಿ ಆಚರಣೆಗೆ ಸಿದ್ಧತೆ…
ಹುಬ್ಬಳ್ಳಿ: ನ.8 ರಂದು ದೇಶದಾದ್ಯಂತ ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಆಚರಿಸಲಾಗುತ್ತಿದ್ದು, ಇದರ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸೋಮವಂಶೀಯ ಸಹಸ್ತ್ರಾರ್ಜುನ ಕ್ಷತ್ರಿಯ ಸುಮಾಜದಿಂದ ಬೃಹತ್ ಮಟ್ಟದ ಬೈಕ್ ರ್ಯಾಲಿ ನಡೆಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಸಮಾಜದ ಮುಖಂಡರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಯುವಕರು ಪಾಲ್ಗೊಂಡು ಸಂಭ್ರಮಿಸಿದರು.
ರಾಜ್ಯದಲ್ಲಿ ಸಂಭ್ರಮದ ಜಯಂತಿ: ರಾಜ್ಯದಾದ್ಯಂತ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ವಿಜೃಂಭಣೆಯಿಂದ ಆಚರಿಸಲು ವಿವಿಧ ಜಿಲ್ಲೆಗಳಲ್ಲಿ ಸಮಾಜದವರು ತಯಾರಿ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಮಹಾರಾಜರ ಪೂಜೆ, ಭವ್ಯ ಶೋಭಾಯಾತ್ರೆ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿವೆ.