ಕನಕ ವೃತ್ತ, ಪುರಸಭೆ, ತಹಸೀಲ್ದಾರ್ ಕಚೇರಿಯಲ್ಲಿ ಜಯಂತಿ ಆಚರಣೆ
ಗುರುಮಠಕಲ್: ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸುವಲ್ಲಿ ದಾಸ ಶ್ರೇಷ್ಠ ಕನಕ ದಾಸರು ಕೀರ್ತನೆಗಳ ಮೂಲಕ ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಹಾಲುಮತ ಸಮಾಜದ ಯುವ ಮುಖಂಡ ಲಿಂಗಪ್ಪ ತಾಂಡೂರಕರ್ ಹೇಳಿದರು.
ಪಟ್ಟಣದ ಕನಕ ವೃತ್ತದಲ್ಲಿ ಕನಕ ದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕರ್ನಾಟಕ ಪ್ರದೇಶ ಕುರುಬ ಸಂಘದ ತಾಲೂಕು ಅಧ್ಯಕ್ಷ ಮಲ್ಲು ತೋರಣತಿಪ್ಪ, ಸಾಬರಡ್ಡಿ ಯದ್ಲಾಪುರ, ಕಿಷ್ಟಪ್ಪ ಇಮಲಾಪುರ್, ವೆಂಕಟೇಶ್ ಕೊಂಕಲ್, ಯಂಕೋಬಾ ತುರಕನದೊಡ್ಡಿ, ಹಣಮಂತ ಎಲ್ಲೇರಿ , ಈರಣ್ಣ ಮದ್ವಾರ್, ಬಸರಡ್ಡಿ MT ಪಲ್ಲಿ, ಶಂಕರ ಕಾಕಲವರ್ , ಯಲ್ಲಾಲಿಂಗ , ಹಣಮಂತ, DDS ತಾಲೂಕು ಅಧ್ಯಕ್ಷ ಲಾಲಪ್ಪ ತಲಾರಿ, ಶರಣು ಅವಂಟಿ, ಭೀಮಶಪ್ಪ ಗುಡ್ಸೆ, ರವಿ ಕೋಟಕೊಂಡಿ, ಆಶನ್ನ ಬುದ್ಧ, ಶರಣಪ್ಪ ಯದ್ಲಾಪುರ,ಅನಂತಪ್ಪ ಯದ್ಲಾಪುರ, ಹಣಮಂತ, ಸಿದ್ದು ಪೂಜಾರಿ, ಕರ್ನಾಟಕ ಅಹಿಂದ ಯುವ ಘಟಕ ಜಿಲ್ಲಾ ಅಧ್ಯಕ್ಷ ಜಗದೀಶ್ ಪೂಜಾರಿ, ತಾಲೂಕು ಅಧ್ಯಕ್ಷ ನಾಗಪ್ಪ ಕೆ. ಬೋಯಿನ್, ಉಪಾಧ್ಯಕ್ಷ ಭೀಮರಾಯ ಕೋಟಗೇರಾ, ಜಿಲ್ಲಾ ಉಪಾಧ್ಯಕ್ಷ ನರಸಪ್ಪ ಶೀಪಕ್, ಮಲ್ಲು ರಾಮಾಪುರ್, ಅಶೋಕ್ ಬುದುರ್, ಗುರುನಾಥ ಕುಂಬಾರ್, ಇನ್ನಿತರು ಉಪಸ್ಥಿತರಿದ್ದರು.
ಪುರಸಭೆ ಕಾರ್ಯಾಲಯ : ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಕನಕದಾಸರ ಜಯಂತಿ ಆಚರಣೆ ಮಾಡಲಾಯಿತು. ವ್ಯವಸ್ಥಾಪಕ ಮಲ್ಲಿಕಾರ್ಜುನ ಸುಂಗಲಕರ್ ದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಪುರಸಭೆಯ ಸದಸ್ಯರು, ಸಿಬ್ಬಂದಿಗಳು ಇದ್ದರು.