ಯಾದಗಿರಿ: ನಗರದ ಕರವೇ ಕಾರ್ಯಾಲಯದಲ್ಲಿ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾದ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 537 ನೇ ಜಯಂತಿಯನ್ನು ಸಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತ್ಯೋತ್ಸವವನ್ನು ಆಚರಣೆ ಮಾಡಲಾಯಿತು.

ಕರವೇ ಜಿಲ್ಲಾಧ್ಯಕ್ಷರಾದ ಟಿ. ಎನ್. ಭೀಮುನಾಯಕ ಮಾತನಾಡಿ,  ಕರ್ನಾಟಕದಲ್ಲಿ ಸುಮಾರು ೧೫-೧೬ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು ದೇಶಕಂಡ ಮಹಾನ್ ಸಂತ,ದಾಸ ಪರಂಪರೆಯಲ್ಲಿ ಬರುವ ೨೫೦ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು ಎಂದರು.

ಕನಕದಾಸರು ಕೇವಲ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ. ಎಲ್ಲಾ ವರ್ಗದ ಜಾತಿಗಳಿಗೆ ಬೇಕಾದದವರು ೧೬ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತರೆಂದರೆ ತಪ್ಪಾಗಲಾರದು ಎಂದು ತಿಳಿಸಿದರು.

ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ವರ್ಣಿಸಲಾಗುವುದು. ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತರಾದರೆಂಬ ವಾಡಿಕೆಯಲ್ಲಿದೆ. ಈ ಒಂದು ಜಯಂತಿಯನ್ನು ಪ್ರತಿಯೋಬ್ಬ ನಾಗರಿಕನು ಆಚರಣೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸಂತೋಷ ನಿರ್ಮಲಕರ್, ಸಾಹೇಬಗೌಡನಾಯಕ ಗೌಡಗೇರಾ, ಶರಣಬಸಪ್ಪ ಎಲ್ಹೇರಿ, ಹಣಮಂತ ಅಚ್ಚೋಲಾ, ವಿಶ್ವರಾಜ ಹೊನಗೇರಾ, ಅಬ್ದುಲ್ ಚಿಗನೂರ್, ಸಿದ್ದಲಿಲಂಗರೆಡ್ಡಿ ಮುನಗಲ್, ಅಬ್ದುಲ್ ರೀಯಾಜ್, ಬಸ್ಸುನಾಯಕ ಸೈದಾಪೂರ, ಮಲ್ಲು ಬಾಡಿಯಾಳ, ಕಾಶಿನಾಥ ನಾನೇಕ್, ಹುಲುಗಪ್ಪ ಭಜಂತ್ರಿ, ಯಲ್ಲಾಲಿಂಗ ಚಾಮನಳ್ಳಿ, ನಾಗರಾಜ ಶೆಟ್ಟಗೇರಾ, ಅಂಬುನಾಯಕ ಹತ್ತಿಕುಣಿ, ಇನ್ನಿತರರು ಭಾಗಿಯಾಗಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!