ಗುರುಮಠಕಲ್: 1984-85 ಸಾಲಿನ ವಿದ್ಯಾರ್ಥಿಗಳು ಅಂದಿನ ಗುರುಗಳಿಗೆ ಸತ್ಕರಿಸಿ, ವಂದನೆ ಸಲ್ಲಿಸುವುದು ಅವರ ಖುಣ ತೀರಿಸಿದಂತಾಗಿದೆ ಎಂದು ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಿಂದೆ ಗುರುಶಿಷ್ಯರು ಅವಿನಾಭಾವ ಸಂಬಂಧ ಹೊಂದಿದ್ದರು, ಸದ್ಯದ ಪರಿಸ್ಥಿತಿಯಲ್ಲಿ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿದ್ದು, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವುದು ಎಲ್ಲರ ಜವಾಬ್ದಾರಿ ಎಂದರು.
ಪ್ರಾಸ್ತಾವಿಕವಾಗಿ ಆಶಪ್ಪ ಗಾಜರಕೋಟ ಮಾತನಾಡಿ, ಹಳೆಯ ವಿದ್ಯಾರ್ಥಿಗಳೆಲ್ಲ ಒಟ್ಟಗೂಡಿ ಕಾರ್ಯಕ್ರಮದ ರೂಪರೇಷೆ ತಯಾರಿಸಲಾಗಿದೆ. ಗುರುಗಳಿಂದ ಸಾಕಷ್ಟು ಕಲಿತು ವಿದ್ಯಾವಂತಾಗಿದ್ದೇವೆ. ಇಂದು ಹಲವರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅಂದು ಅವರು ನಮಗೆ ನೀಡಿದ ವಿದ್ಯಾದಾನದಿಂದಲೇ ಎನ್ನುವುದನ್ನು ಎಂದಿಗೂ ಮರೆಯಲ್ಲ. ಗುರುಗಳನ್ನು ಸತ್ಕರಿಸುವ ಸೌಭಾಗ್ಯ ನಮಗೆ ಸಿಕ್ಕಿರುವುದು ಜೀವವನದಲ್ಲಿ ಇದಕ್ಕಿಂತ ಮುಖ್ಯ ಏನು ಇಲ್ಲ ಎಂದು ಹೇಳಿದರು.
ಈ ವೇಳೆ ನಿವೃತ್ತ ಗುರುಗಳಾದ ಬಸವರಾಜ ಬೂದಿ, ಆಶಿರೆಡ್ಡಿ ಇಟಕಾಲ್, ಶಿವಶರಣಪ್ಪ ಚಂದಾಪುರ, ಸಿದ್ದಾರೆಡ್ಡಿ ಇಮ್ಲಾಪೂರ, ಈರಣ್ಣ ಮಸಾನಿ, ಅಖಂಡೇಶ್ವರಯ್ಯ ಹಿರೇಮಠ, ರಿಯಾಜ್ ಅಹ್ಮದ್, ಹಣಮಂತ ಪ್ಪ ಸಿರವಾಳ, ವಿಶ್ವನಾಥ ಕೆ., ಡಿ.ಜಿ.ಬಳ್ಳೂರಗಿ, ಎಂ.ಪಿ.ಸಾಸನೂರ, ಬಿ.ಎಸ್.ಪಾಟೀಲ್, ಜಯರಾವ ದೇಶಪಾಂಡೆ, ನಾಗರಾಜ, ಸುಭಾಷ ನೀಲಗಾರ, ಪಟ್ಟಣಶೆಟ್ಟಿ, ವೈ.ಎಂ.ವೀರೇಶ, ಐರೆಡ್ಡಿ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್ ಟಿ ಮಂಜುನಾಥ ಉದ್ಘಾಟಿಸಿದರು. ಪಿಐ ದೇವಿಂದ್ರಪ್ಪ ಧೂಳಖೇಡ, ಹಣಮಂತ ಹಂದರಕಿ, ಮಲ್ಲಿಕಾರ್ಜುನ ಪೂಜಾರಿ, ಕೃಷ್ಣಾರೆಡ್ಡಿ ಇದ್ದರು. ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದೇವಿಂದ್ರಪ್ಪ ಬಿ. ನಾಗೇಶ್ ಮಿಟ್ಟಿ, ಈಶ್ವರಲಾಲ ಸೇಡಂಕರ್ ನಿರೂಪಿಸಿದರು. ಚಂದ್ರಶೇಖರ ಗೋಗಿ ತಂಡದವರು ಸಂಗೀತ ಸೇವೆ ನೀಡಿದರು. ಚಂದ್ರಕಾಂತ ಚಂದಾಪುರ ವಂದಿಸಿದರು.
ಹಳೆಯ ವಿದ್ಯಾರ್ಥಿಗಳಾದ ವೆಂಕಟಪ್ಪ ಕಲಾಲ್, ಗುರು ಮುತ್ತಗಿ, ಶಿವಾನಂದ ಬೂದಿ, ಮುಕೇಶ ಪತಂಗೆ, ವೆಂಕಟರಾಮುಲು, ಪಾಂಡುರಂಗ ಮೇದಾ, ಶಂಕ್ರಯ್ಯ ಸ್ವಾಮಿ, ವೆಂಕಟರೆಡ್ಡಿ ಮುಸ್ಲೇಪಲ್ಲಿ, ಸುದರ್ಶನರೆಡ್ಡಿ, ಲಕ್ಷ್ಮೀಕಾಂತರೆಡ್ಡಿ ಇತರರು ಇದ್ದರು.