ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ: ಜಿದ್ದಾಜಿದ್ದಿನ ಸ್ಪರ್ಧೆ
ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.20 ರಂದು ವಿಧಾನಸಭೆ ಚುನಾವಣೆ ನಡೆಯುತ್ತಿದೆ.
288 ಕ್ಷೇತ್ರಗಳಿಗೆ 4140 ಅಭ್ಯರ್ಥಿಗಳು ಕಣದಲ್ಲಿದ್ದು ಅಂದಾಜು 9.6 ಕೋಟಿಗೂ ಹೆಚ್ಚು ಮತದಾರರು ಮತದಾನ ಮಾಡಲಿದ್ದಾರೆ.
ಎನ್ಡಿಎ ಮತ್ತು ಇಂಡಿಯಾ ಒಕ್ಕೂಟದ ಮಧ್ಯೆ ಜಿದ್ದಾಜಿದ್ದಿನ ಕಣ ಏರ್ಪಟ್ಟಿದ್ದು, ಶಿವಸೇನೆ ಶಿಂಧೆ ಬಣ, ಎನ್ಸಿಪಿ ಅಜಿತ್ ಪವಾರ್ ಒಂದು ಕೂಟ ಮಹಾಯುತಿ ಒಕ್ಕೂಟವು ಬಿಜೆಪಿ ಮುನ್ನಡೆಸುತ್ತಿದ್ದರೆ, ಕಾಂಗ್ರೆಸ್, ಉದ್ದವ್ ಶಿವಸೇನೆ, ಶರತ್ ಪವಾರ್ ಎನ್ ಸಿಪಿಯ ಮಹಾಘಡಿ ಒಕ್ಕೂಟದ ಸಾರಥ್ಯವನ್ನು ಕಾಂಗ್ರೆಸ್ ವಹಿಸಿದೆ.
ಮಧ್ಯಾಹ್ನ 1 ಗಂಟೆ ವರೆಗೆ ಮುಂಬೈ ಮಹಾನಗರದಲ್ಲಿ ಕೇವಲ 27.73% ಮತದಾನವಾಗಿದ್ದರೆ ಮಹಾರಾಷ್ಟ್ರದಲ್ಲಿ 32.18 ಪ್ರತಿಶತ ಮತದಾನವಾಗಿರುವುದು ವರದಿಯಾಗಿತ್ತು. ಇದೀಗ 3 ಗಂಟೆ ವರೆಗೆ 45.4% ಮತದಾನವಾಗಿದೆ.
ಮಹಾರಾಷ್ಟ್ರದ ಭೀವಂಡಿ ಸೇರಿದಂತೆ ಹಲವೆಡೆ ಬಹುತೇಕ ಕಾರ್ಮಿಕ ವರ್ಗವೇ ಹೆಚ್ಚಿದ್ದು, ಮಹಿಳೆಯರು ಮತದಾನಕ್ಕೆ ಹೆಚ್ಚಿನ ಒಲವು ತೋರಿದ್ದು ಕಂಡು ಬಂತು.
ಇನ್ನು ನವೆಂಬರ್ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತದಾರ ಯಾರತ್ತ ಒಲಿದಿದ್ದಾನೆ ಎನ್ನುವ ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ.