ಗುರುಮಠಕಲ್: ತಾಲೂಕಿನ ಅಮ್ಮಾಪಲ್ಲಿಯಲ್ಲಿ ಅನಾರೋಗ್ಯದಿಂದ ಇತ್ತೀಚೆಗೆ ಸಾವನ್ನಪ್ಪಿದ ಹಿರಿಯ ಮುಖಂಡ ಶರಣರೆಡ್ಡಿ ಕುಟುಂಬದವರನ್ನು ಭೇಟಿಯಾಗಿ ಶಾಸಕ ಶರಣಗೌಡ ಕಂದಕೂರ ಸಾಂತ್ವನ ಹೇಳಿದರು.
ಕುಟುಂಬದವರಿಗೆ ಧೈರ್ಯ ಹೇಳಿದ ಶಾಸಕರು, ಯಾವುದಕ್ಕೂ ತಮ್ಮ ಜೊತೆಗೆ ಇರುವುದಾಗಿ ಹೇಳಿದರು. ಈ ವೇಳೆ ಶುಭಾಷ್ಚಂದ್ರ ಕಟಕಟೆ, ಶರಣು ಆವಂಟಿ, ಜ್ಞಾನೇಶ್ವರರೆಡ್ಡಿ, ಪ್ರಭು ಗಾಜರಕೋಟ, ರಾಜೇಶ ಮಿನಾಸಪುರ, ಮೋಹನರೆಡ್ಡಿ ಇತರರು ಇದ್ದರು.