ಖಾಸಾಮಠಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಸಹಸ್ರ ಬಿಲ್ವಾರ್ಚನೆ |  ಧಾರ್ಮಿಕ ಸಭೆ| ಶಾಸಕರು, ಪೂಜ್ಯರು ಭಾಗಿ

ಗುರುಮಠಕಲ್: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯ ಶ್ಲಾಘನೀಯ. ಸರ್ಕಾರವೇ ಮಾಡದ ಕೆಲಸವನ್ನು ಪೂಜ್ಯ ಹೆಗ್ಗಡೆ ಮಾಡುತ್ತಿರುವುದು ಜಿಲ್ಲೆ ಮತ್ತು ಕ್ಷೇತ್ರದಲ್ಲಾಗುವ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಇಲ್ಲಿನ ಖಾಸಾಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗುರುಮಠಕಲ್ ವಲಯದಿಂದ ಸಹಸ್ರ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳದ ಪೀಠಾಧಿಪತಿ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಮಾಡುವ ಕಾರ್ಯ ನಡೆಯುತ್ತಿದೆ, ಆದರೆ ಅದಕ್ಕೆ ಕಿವಿಗೊಡದೇ ವೀರೇಂದ್ರ ಹೆಗ್ಗಡೆ ಅವರು ಕಾಯಕವೇ ಕೈಲಾಸ ಎನ್ನುವ ಮಾರ್ಗದಲ್ಲಿ ಸಾಗಿದ್ದಾರೆ ಎಲ್ಲರೂ ಯೋಜನೆಗಳ ಸದುಪಯೋಗ ಪಡೆಯಬೇಕು. ಪೂಜ್ಯ ಹೆಗ್ಗಡೆ ಅವರ ಕಾಳಜಿ ಅಪಾರವಾಗಿದೆ. ಸಾಕಷ್ಟು ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದರು.

ಶಾಸಕರ ಅನುದಾನದಲ್ಲಿ ದೇವಸ್ಥಾನಗಳ ಜೀಣೋದ್ಧಾರ ಮಾಡುವುದು ಕಷ್ಟ. ಅಂತದ್ದರಲ್ಲಿ ಧರ್ಮಸ್ಥಳ ಸಂಸ್ಥೆಯಿAದ ದೇವಸ್ಥಾನ ಜೀರ್ಣೋದ್ಧಾರ ಹೆಗ್ಗಡೆ ಅವರ ರೂಪದಲ್ಲಿ ದೇವರು ನಮ್ಮ ಭಾಗಕ್ಕೆ ಬಂದಿದ್ದಾನೆ. ನಮ್ಮ ಭಾಗದಲ್ಲಿ ಬಸವರಾಜ ಪಾಟೀಲ ಸೇಡಂ ಅವರು ನಿಸ್ವಾರ್ಥ ಸೇವೆ ಮಾಡಿದ್ದಾರೆ ಅವರು ಕಾರ್ಯಗಳನ್ನೇ ಸರ್ಕಾರ ತನಿಖೆ ಮಾಡಲು ಹೊರಟಿರುವುದು ದುರ್ಭಾಗ್ಯ ಎಂದರು.

ಪಾಶ್ಚಿಮಾದ್ರಿ ವಿರಕ್ತ ಮಠ ನೇರಡಗಮ್, ಬೋರಬಂಡಾ ಪಂಚಮ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪವಿತ್ರ ಕಾರ್ತೀಕ ಮಾಸದಲ್ಲಿ ಶಿವನ ಸಹಸ್ರ ಬಿಲ್ವಾರ್ಚನೆ ಪುಣ್ಯ ಪ್ರಾಪ್ತಿ. ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದರಿಂ ಪಾಪ ಮುಕ್ತಿಯಾಗಲಿದೆ ಎಂದರು.

ಪ್ರತಿ ಹಳ್ಳಿಯಲ್ಲಿಯೂ ಸಂಸ್ಥೆ ಮಹಿಳೆಯರು ಸ್ವಾವಲಂಬನೆ ಜೀವನ ಸಾಗಿಸುವ ಕಾರ್ಯ ಮಾಡುತ್ತಿದೆ. ಪ್ರಾಚೀನ ದೇವಸ್ಥಾನ, ಸಂಸ್ಕೃತಿ ಸಂಸ್ಕಾರವನ್ನು ಉಳಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಧರ್ಮ ಎತ್ತ ಸಾಗುತ್ತಿದೆ ಎನ್ನುವುದು ಅರಿಯಬೇಕಿದೆ. ಮಕ್ಕಳಿಗೆ ಸಂಸ್ಕಾರ ಕೊರತೆಯಿಂದ ಅನಾಚಾರ ನಡೆಯುತ್ತಿದ್ದು, ಸಂಸ್ಕಾರ ಸಹಿತ ಶಿಕ್ಷಣ ನೀಡಲು ಹೇಳಿದರು. ಮಠದ ಅನಾಥ ಆಶ್ರಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 10 ಲಕ್ಷ ಮಂಜೂರು ಆಗಿದೆ ಎಂದು ತಿಳಿಸಿದರು.

ಕ್ಷೇತ್ರಕ್ಕೆ ಒಳ್ಳೆಯ ಶಾಸಕರು ಸಿಕ್ಕಿದ್ದಾರೆ. ರಾಜ್ಯವೇ ಇತ್ತ ನೋಡುತ್ತಿದೆ. ವಿಧಾನಸಭೆಯಲ್ಲಿಯೂ ನಮ್ಮ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಶ್ಲಾಘನೆ ವ್ಯಕ್ತಪಡಿಸಿದರು. ಹೈದರಾಬಾದ್ ನವಾಬ ಆಳ್ವಿಕೆಯಲ್ಲಿ ಶಕ್ತಿ ಉಳಿಸಿಕೊಂಡ ಮಠದ ಕೊಡುಗೆ ನೀಡಿದ ಖಾಸಾಮಠ ಅವಿಸ್ಮರಣೀಯ ಎಂದರು.

ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ಪ್ರಾಸ್ತಾವಿಕ ಮಾತನಾಡಿ, ಕಳೆದ ೮ ವರ್ಷಗಳಿಂದ ತಾಲೂಕಿನಲ್ಲಿ ಕಾರ್ಯ, ಮನೆ-ಕುಟುಂಬ ಸಮೃದ್ಧವಾಗಲು ಹೆಗ್ಗಡೆ ಅವರ ಆಶಯ. ಕೆರೆ ಹೂಳು, ನಿರ್ಗತಿಕ ಮಾಶಾಸನ, ಕೃಷಿ, ಸಮುದಾಯ ಭವನ, ಶೌಚಾಲಯ, ಶೈಕ್ಷಣಿಕ ಜ್ಞಾನದೀಪ, ಧಾರ್ಮಿಕ ಕಾರ್ಯಕ್ರಮ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯ ಮಾಡುತ್ತಿದೆ ಎಂದರು.

ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಿಲ್ಲಾ ನಿರ್ದೇಶಕ ಶ್ರೀಯುತ ಕಮಲಾಕ್ಷ, ಪಿ.ಐ ದೇವಿಂದ್ರಪ್ಪ ಧೂಳಖೇಡ, ನಾಗಭೂಷಣ ಆವಂಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ನರಸರೆಡ್ಡಿ ಗಡ್ಡೆಸೂಗೂರ ವೇದಿಕೆ ಮೇಲಿದ್ದರು. ಕ್ಷೇತ್ರ ಯೋಜನಾಧಿಕಾರಿ ಮಂಜುನಾಥ ಎಚ್ ಸ್ವಾಗತಿಸಿದರು.

ಇದೇ ವೇಳೆ ಜನಮಂಗಲ ಕಾರ್ಯಕ್ರಮ ಅಂಗವಾಗಿ ವಿಕಲಚೇತನ ಫಲಾನುಭವಿಗೆ ವೀಲ್ ಚೇರ್, ವಾಟರ್ ಬೆಡ್ ವಿತರಣೆ ಮಾಡಲಾಯಿತು.

ಧರ್ಮಸ್ಥಳ ಸಂಘದ ಅವಂತಿಕಾ ಆವಂಟಿ ಪ್ರಮುಖರಾದ ಶರಣು ಆವಂಟಿ, ಪಾಪಾಣ್ಣ ಮನ್ನೆ, ಬಸಣ್ಣ ದೇವರಹಳ್ಳಿ, ಸಿರಾಜುದ್ದೀನ್ ಚಿಂತಕುಂಟಿ, ಅಶೋಕ ಕಲಾಲ್, ಬಾಲು ದಾಸರಿ, ರವಿ ಗೋವಿನೋಳ, ಸಂತೋಷ ಗೌಡ, ಗುರು ತಲಾರಿ ಇತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!