ನ. 25 ರಂದು ಸಂವಾದ | ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ ಪ್ರತಿನಿಧಿಗಳಾಗಿ ಭಾಗಿ
ಯಾದಗಿರಿ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಜಿಲ್ಲಾ ಮಟ್ಟದ ಮಕ್ಕಳ ಸಂಸತ್ ನಿಂ ರಾಜ್ಯ ಮಟ್ಟದ ಸಂಸತ್ ಗೆ ಆಯ್ಕೆಯಾಗಿದ್ದಾರೆ.
ಗುರುಮಠಕಲ್ ತಾಲೂಕಿನ ಯಲ್ಹೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 10 ನೇ ತರಗತಿಯ ಸಣ್ಣಾಮೀರ ಸಾಬಣ್ಣಾ ಕಟಗಿ ಶಾಹಪುರ ಹಾಗೂ ಹತ್ತಿಗೂಡುರ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿಯ ಭಾಗ್ಯ ಶ್ರೀ ಭೀಮರಾಯ ಯಕ್ಷಂತಿ ಯಾದಗಿರಿ ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಸಭೆಯಿಂದ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಗೆ ಆಯ್ಕೆಯಾಗಿದ್ದಾರೆ.
ಇದೇ ನ. 25 ರಂದು ಕರ್ನಾಟಕ ರಾಜ್ಯ ದ ಸನ್ಮಾನ್ಯ ಮುಖ್ಯ ಮಂತ್ರಿಗಳ ಜೊತೆ ನಡೆಯುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ಯಾದಗಿರಿ ಜಿಲ್ಲಾ ಸಂಘಟಕರು ಹಾಗೂ ಅನಂತ ಸೇವಾ ಟ್ರಸ್ಟ ನ ನಿರ್ದೇಶಕರಾದ ಶರಣಪ್ಪ ಎಸ್. ಕಂದಕೂರ ತಿಳಿಸಿದ್ದಾರೆ.
ಮಕ್ಕಳು ಯಾದಗಿರಿ ಜಿಲ್ಲೆಯ ಮಕ್ಕಳ ಸಮಸ್ಯೆಗಳು ಅವರ ಅಭಿಪ್ರಾಯಗಳು ಮತ್ತು ಅವರ ಪ್ರಶ್ನೆಗಳಿಗೆ ಈ ಜಿಲ್ಲೆಯ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದು ಈ ವಿದ್ಯಾರ್ಥಿಗಳ ಸಾಧನೆ ಗೆ ಶಾಲೆಯ ಮುಖ್ಯ ಶಿಕ್ಷಕರು, ಸರ್ವ ಸಿಬ್ಬಂದಿ, ಎಸ್ ಡಿ ಎಮ್ ಸಿ ಹಾಗೂ ಎಲ್ಹೇರಿ, ಗೋಪಾಳಪುರ, ಕಟಗಿ ಶಹಾಪುರ, ಯಕ್ಷಿಂತಿ, ಹತ್ತಿಗೂಡುರ್ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ನಗರ ಮತ್ತು ಗ್ರಾಮೀಣ ಪ್ರದೇಶದ ಬಡ ಮತ್ತು ಪ್ರತಿಭಾವಂತ ಮಕ್ಕಳು ಇರುವದನ್ನು ಅನಂತ ಸೇವಾ ಟ್ರಸ್ಟ ಗುರುತಿಸುತ್ತಿದ್ದು ಇದೇ ತರಹ ಹೆಚ್ಚಿನ ಅವಕಾಶ ಗಳು ಬಡ ವಿದ್ಯಾರ್ಥಿಗಳಿಗೆ ಸಿಗಲೀ ಎಂದು ಸಂಸ್ಥೆಯ ಸಂಯೋಜಕರು ಆನಂದಕುಮಾರ ಬೂದಿ ಹಾರೈಸಿದ್ದಾರೆ.