ವಿಶ್ವ ಹಿಂದೂ ಪರಿಷತ್, ಬಜರಂಗದಳ ದಿಂದ ಹನುಮಾನ್ ಚಾಲಿಸ ಪಠನೆ
ಗುರುಮಠಕಲ್: ಹಿಂದುಗಳು ಜಾಗೃತರಾಗಬೇಕು, ನಮ್ಮ ಸಂಸ್ಕೃತಿ, ಸಂಸ್ಕಾರದಡಿ ಮಕ್ಕಳನ್ನು ನಡೆಸಬೇಕು ಎಂದು ವಿ.ಹೆಚ್.ಪಿ.ಯ ಶ್ರೀನಿವಾಸ ಯಾದವ್ ಹೇಳಿದರು.
ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲಿಸ ಪಠನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಮಾರು ತಿಂಗಳ ಹಿಂದೆಯೇ ಚಾಲಿಸಾ ಪಟನೆ ಆರಂಭಿಸಲಾಗಿದ್ದು, 17 ನೇ ವಾರದ ಕಾರ್ಯಕ್ರಮ ಎಂದು ತಿಳಿಸಿದರು.
ಹನುಮಾನ್ ಮಾಲಾ ಧರಿಸುವ ಕಾರ್ಯಕ್ರಮ ಆಯೋಜಿಸ ಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಾಲೆ ಧರಿಸಬೇಕು ಎಂದು ಮನವಿ ಮಾಡಿದರು.
11 ದಿನದ ಮಾಲೆ ಧರಿಸಲಿರುವ ಭಕ್ತರು ಡಿ. 3 ರಿಂದ, 9 ದಿನ ಮಾಲೆ ಧರಿಸುವವರು ಡಿ.5 ಮತ್ತು 7 ದಿನದ ಮಾಲೆ ಧರಿಸುವವರು ಡಿ.7 ಹಾಗೂ 5 ದಿನ ಧರಿಸುವ ಭಕ್ತರು ಡಿ.9 ರಂದು ಧರಿಸಬೇಕಿದೆ. ಇಚ್ಚಿಸಿದವರು ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರಮುಖರನ್ನು ಸಂಪರ್ಕಿಸಲು ಕೋರಿದರು.
ಡಿ.13 ರಂದು ಅಂಜನಾದ್ರಿ ಬೆಟ್ಟದ ಆಂಜನೇಯ ದರ್ಶನ ಪಡೆದು ಮಾಲೆ ವಿಸರ್ಜನೆ ನಡೆಯಲಿದೆ ಎಂದು ತಿಳಿಸಿದರು.
ಈ ವೇಳೆ ಸೂರ್ಯನಾರಾಯಣ ನೀರೆಟಿ, ಬಸಣ್ಣ ಅರಬಿಂಜರ್ , ಶ್ರೀನಿವಾಸ ಯಾದವ್, ಅರುಣ ಕುಮಾರ್, ಬಸವರಾಜ, ರವಿ ಕುಮಾರ್, ಆಕಾಶ, ಹರ್ಷವರ್ಧನ್, ಈರಣ್ಣ ಬಾಗೋಜಿ ಸೇರಿ ಗಣ್ಯರು, ಯುವಕರು, ಮಕ್ಕಳು ಇದ್ದರು.