ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು…!
ಶಹಾಪುರ: ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಿಂಚಿದ ಗೋಗಿ ಪಿಯು ಕಾಲೇಜ್ ವಿದ್ಯಾರ್ಥಿಗಳು ಇತ್ತೀಚೆಗೆ ಯಾದಗಿರಿಯ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಸಪ್ರಶ್ನೆ ವಿಭಾಗದಲ್ಲಿ ಕುಮಾರ್ ಅಂಬರೀಶ್ ಮತ್ತು ಶಿವರಾಜ್ ದ್ವೀತಿಯ ಸ್ಥಾನದಲ್ಲಿ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿನೋದ್ ಚಂದ್ರಪ್ಪ ದ್ವೀತಿಯ ಸ್ಥಾನದಲ್ಲಿ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಶ್ವೇತಾ ತೃತೀಯ ಸ್ಥಾನ ಪಡೆದಿದ್ದಾರೆ.
ದ್ವಿತೀಯ ಪಿಯುಸಿ ವಿಭಾಗದ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಾಂತ ಪ್ರಥಮ ಸ್ಥಾನದಲ್ಲಿ, ಭಕ್ತಿ ಗೀತೆ ಸ್ಪರ್ಧೆಯಲ್ಲಿ ಪುಷ್ಪಾ ಪ್ರಥಮ ಸ್ಥಾನದಲ್ಲಿ, ಚರ್ಚಾ ಸ್ಪರ್ಧೆಯಲ್ಲಿ ಭೂಮಿಕಾ, ತೃತೀಯ ಸ್ಥಾನದಲ್ಲಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ಹನುಮಂತ್ ಮತ್ತು ರಾಹುಲ್ ತೃತೀಯ ಸ್ಥಾನದಲ್ಲಿ ಸಾಧನೆಯನ್ನು ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಗುರುಲಿಂಗಪ್ಪ ಸಾಗರ್, ಉಪನ್ಯಾಸಕರಾದ ಕಾಮಣ್ಣ ಜೆ.ಕೆ, ಹೊನ್ನಪ್ಪ ಎಂ. ಪಿ ಮತ್ತು ಶ್ರೀಮತಿ ಮೆಹಬೂಬಿ, ಶರಣಪ್ಪ ಹೊಸಮನಿ, ನಿಂಗಣ್ಣ,ಕವಿತಾ ವರ್ಷವನ್ನು ವ್ಯಕ್ತಪಡಿಸಿದರು.