ಯಾದಗಿರಿಯಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ – ಮಾರಾಟ ಮೇಳ, ಖಾದಿ ಉತ್ಸವ ಉದ್ಘಾಟನೆ

ಯಾದಗಿರಿ: ನಗರದ ಶುಭಂ ಪೆಟ್ರೋಲ್ ಬಂಕ್ ಹತ್ತಿರ, ತುನ್ನೂರ ಕಾಂಪೌಂಡ್, ಹೈದರಾಬಾದ್ ರಸ್ತೆಯಲ್ಲಿ ನ.26ರಿಂದ ಡಿ.10 ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಆಯೋಜಿಸಲಾದ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು.

ಇಂದು ಸಂವಿಧಾನದ ದಿನಾಚರಣೆ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪನೆ ಮಾಡಿ ಗೌರವ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನ ಮಾರಾಟ ಮೇಳ ದೀಪ ಬೆಳಗಾವಿ ಉದ್ಘಾಟಸಿದರು.ಅದರಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಗ್ರಾಮೋದ್ಯೋಗ ಸಂಘ ಸಂಸ್ಥೆಗಳಿಂದ ಸ್ಥಾಪಿಸಲಾದ ವಸ್ತು ಪ್ರದರ್ಶನ ಮಳಿಗೆ ಗಳನ್ನು ಉದ್ಘಾಟಸಿದರು.ಚರಖ ನೂಲುವ ಮೂಲಕ ಕುಶಲಕರ್ಮಿಗಳಿಗೆ ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶಾಸಕ  ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಮಾತನಾಡಿ, ಬಾಪುಜಿ ಅವರು ಖಾದಿ ವಸ್ತುಗಳ ಬಳಕೆ ಮೂಲಕ ಸ್ವದೇಶಿ ಆಂದೋಲನದ ಮೂಲಕ ಭಾರತೀಯರನ್ನು ಪ್ರೋತ್ಸಾಹಿಸಿದ್ದರು. ಅವರ ಕನಸು ನನಸಾಗಿಸಲು ಖಾದಿ ವಸ್ತು ಬಳಸಿ,ಖರೀದಿಸಿ ಉತ್ಪಾದಕರಿಗೂ ಉತ್ತೇಜಿಸಬೇಕು.

ಖಾದಿ ಬಟ್ಟೆ ತೊಡುವದರಿಂದ ಮನಸ್ಸು ಸಹ ಉಲ್ಲಾಸ ಭರಿತವಾಗುತ್ತದೆ. ನೋಡಲು ಸಹ ಆಕರ್ಷಕ ವಾಗಿರು ವದರಿಂದ ಖಾದಿ ಪ್ರೀಯರು ಈ ಬಟ್ಟೆಗಳನ್ನು ಖರೀದಿಸಿ ಉತ್ಪಾದಕರಿಗೆ ಪ್ರೋತ್ಸಾಹಿಸಬೇಕು ಸಲಹೆ ನೀಡಿದರು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಿಇಓ ಶ್ರೀ ವಿ.ಕೆ.ವೆಂಕಟೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಖಾದಿ ಕುಶಲ ಕರ್ಮಿಗಳಿಗೆ ಸರ್ಕಾರ ಹಲವು ರೀತಿಯಲ್ಲಿ ನೆರವಾಗುತ್ತಿದೆ. ರಾಜ್ಯದಲ್ಲಿ ವಾರ್ಷಿಕ 300 ಕೋ.ರೂಗಳ ಉತ್ಪಾದನೆ ಮತ್ತು ವ್ಯವಹಾರ ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರಾಣೇಶ್ ಆಚಾರ್ಯ ಅವರು ಸಂವಿಧಾನದ ಪೀಠಿಕೆ ಓದಿದರು. ಖಾದಿ, ಚರಖ ನೂಲು ಹಾಗೂ ನೇಯ್ಗೆ ಕುಶಲಕರ್ಮಿಗಳಾದ ಬಸಮ್ಮ ಅವರಿಗೆ ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ. , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಲವೀಶ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್, ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕರು ಬಿ.ಸತೀಶ್ ಕುಮಾರ್, ತಹಸೀಲ್ದಾರ ಸುರೇಶ್, ರಾಯಚೂರು ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಸದಸ್ಯರು ಮಲ್ಲಿಕಾರ್ಜುನ ನಾಗಪ್ಪ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಮನೀಶ ಸಿ.ಹೆಚ್,ಸಾವಿತ್ರಿ ದಳವಾಯಿ, ಉಪಸ್ಥಿತರಿದ್ದರು. ರಾಯಣ್ಣ ಕಾರ್ಯಕ್ರಮ ನಿರ್ವಹಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!