ಹಣಮಂತು ಮೀದಿಗಡ್ಡ ಅಧ್ಯಕ್ಷತೆಯಲ್ಲಿ ಕಾಕಲವಾರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ..
ಗುರುಮಠಕಲ್ : 2024-25ರ 15 ನೇ ಹಣಕಾಸು ಯೋಜನೆಯಡಿ ಕಾಮಗಾರಿ ಅನುಷ್ಠಾನಗೊಳಿಸಲು ಅಂದಾಜು 42 ಲಕ್ಷ ರೂಪಾಯಿಯ ಕ್ರೀಯಾ ಯೋಜನೆ ರೂಪಿಸಲು ಚರ್ಚಿಸಲಾಯಿತು ಎಂದು ಗ್ರಾ.ಪಂ. ಅಧ್ಯಕ್ಷ ಹಣಮಂತು ಮೀದಿಗಡ್ಡ ಹೇಳಿದರು.
ತಾಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿಯಲ್ಲಿ ಜರುಗಿದ ಸಾಮಾನ್ಯ ಸಭೆಯ ಬಳಿಕ ಮಾತನಾಡಿದ ಅವರು, ಎಸ್‌ಬಿಎಂ ಪ್ರಗತಿಯ ಕುರಿತು ಮಾಹಿತಿ ಪಡೆಯಲಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಕರ ವಸೂಲಿ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.
25-26 ನೇ ಸಾಲಿನ ನರೇಗಾ ಯೋಜನೆಯಡಿ ಕೈಗೊಳ್ಳಬೇಕಿರುವ ಕಾಮಗಾರಿಗಳ ಕುರಿತು ಸದಸ್ಯರೊಂದಿಗೆ ಚರ್ಚಿಸಲಾಯಿತು, ವೈಯಕ್ತಿಕ ಕಾಮಗಾರಿಗಳು ನಿರ್ವಹಿಸುವ ಕುರಿತು ನಿರ್ಧಾರ ಮಾಡಲಾಯಿತು.
ಸದಸ್ಯ ರಮೇಶ ಪವಾರ್ ಮಾತನಾಡಿ, ಬೋರಬಂಡಾ ಗ್ರಾಮದಲ್ಲಿ ಸ್ವಚ್ಛತೆ ಕುರಿತು ಆದ್ಯತೆ ನೀಡಬೇಕು ಎಂದರು.
ಅಧ್ಯಕ್ಷರು ಪ್ರತಿಕ್ರಿಯಿಸಿ, ಎಲ್ಲಾ ಗ್ರಾಮಗಳಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಲು ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ಶುಚಿತ್ವಕ್ಕೆ ಆದ್ಯತೆ ನೀಡಲು ಸೂಚಿಸಲಾಯಿತು.
ಸೇವಾ ನಿವೃತ್ತ ಬ್ರಹ್ಮಯ್ಯ ಅವರಿಗೆ ಸನ್ಮಾನ : ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ವಿಷಯ ನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಬ್ರಹ್ಮಯ್ಯ ಅವರಿಗೆ ಕಾಕಲವಾರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸಾರ್ವಜನಿಕರು ಸನ್ಮಾನಿಸಿದರು.
ಬ್ರಹ್ಮಯ್ಯ ಅವರು ಈ ಹಿಂದೆ ಸುಮಾರು ವರ್ಷಗಳ ಕಾಲ ಪಂಚಾಯಿತಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ಹಾಗಾಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಈ ವೇಳೆ ಪಂಚಾಯಿತಿ ಅಭಿವೃದ್ಧಿ ಮಲ್ಲಾರೆಡ್ಡಿ ಪಾಟೀಲ್, ಕಾರ್ಯದರ್ಶಿ ಸೂರ್ಯಕಾಂತ, ಉಪಾಧ್ಯಕ್ಷೆ ವಸಂತಾ, ಪಟೇಲಪ್ಪ, ವಿಶ್ವನಾಥರೆಡ್ಡಿ, ವೀರೇಶ, ಭೀಮಾಶಂಕರ, ಬಸಯ್ಯ, ಭಾಗ್ಯಮ್ಮ, ಶಾಣಿಬಾಯಿ, ನರಸಮ್ಮ, ಯಲ್ಲಮ್ಮ, ಮಹಾದೇವಮ್ಮ, ಗಂಗಮ್ಮ ಸೇರಿದಂಗತೆ ಡಿಇಓ ಕಾಂತಪ್ಪ ಸೇರಿದಂತೆ ಸಾರ್ವಜನಿಕರು ಇದ್ದರು.