ಜಿಲ್ಲೆಯಲ್ಲಿ 102744 ಹೆ. ಭತ್ತ ಬೆಳೆದ ರೈತರು | ಕಟಾವಿಗೆ ದರ ನಿಗದಿ
ಯಾದಗಿರಿ: ಜಿಲ್ಲೆಯಲ್ಲಿ ಭತ್ತ ಕಟಾವಿಗೆ ಪ್ರತಿ ಗಂಟೆಗೆ ರೂ. 2400 ಮೀರದಂತೆ ಬಾಡಿಗೆಯನ್ನು ನಿಗದಿ ಪಡಿಸಲಾಗಿದ್ದು, ಹೆಚ್ಚಿನ ದರ ಪಡೆಯಲು ಮುಂದಾದರೆ ಅಂತವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರು ಎಚ್ಚರಿಸಿದ್ದಾರೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 1,02,744 ಹೇಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಈಗಾಗಲೇ ಹಲವು ಕಡೆ ಕಟಾವು ಪ್ರಾರಂಭವಾಗಿದೆ. ರೈತರು ಬೆಳೆಯನ್ನು ಭತ್ತ ಕಟಾವು ಯಂತ್ರಗಳ ಮೂಲಕ ಮಾಡುತ್ತಿದ್ದು, ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲದ ಕಾರಣ ರೈತರು ಸಂಕಷ್ಟದಲ್ಲಿರುವಾಗ ಹೆಚ್ಚಿನ ದರದಲ್ಲಿ ಯಂತ್ರದ ಮಾಲೀಕರು ಬಾಡಿಗೆಯನ್ನು ಪಡೆದರೆ ರೈತರಿಗೆ ತೊಂದರೆಯಾಗುತ್ತದೆ.
ಈ ಕುರಿತು ಈಗಾಗಲೇ ರೈತ ಮುಖಂಡರಿಂದ ದೂರುಗಳು ಬಂದಿದ್ದು, ಹಾಗಾಗಿ ಜಿಲ್ಲೆಯಲ್ಲಿರುವ ಭತ್ತ ಕಟಾವು ಯಂತ್ರಗಳ ಮಾಲೀಕರು ರೂ. 2300 ಪ್ರತಿ ಗಂಟೆಗೆ ಬಾಡಿಗೆ ಪಡೆಯಬೇಕೆಂದು ಸೂಚಿಸಲಾಗಿದೆ. ಹೆಚ್ಚಿನ ದರ ಪಡೆದಲ್ಲಿ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.