ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದ ಘಟನೆ | ಟೈರ್ ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ
ಕಲಬುರಗಿ: 5 ನೇ ತರಗತಿ ಓದುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಖಾಸಗಿ ಶಾಲೆ ಶಿಕ್ಷಕನನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಿಕ್ಷಕ, ತರಗತಿ ಬಳಿಕ ಟ್ಯೂಶನ್ ಕ್ಲಾಸ್ ಮಾಡುವುದಾಗಿ ಕೆಲವು ಮಕ್ಕಳನ್ನು ಉಳಿಸಿಕೊಂಡು ಬೆಳಿಗ್ಗೆ ಮನೆಗೆ ಕಳಿಸುತ್ತಿದ್ದ ಎನ್ನಲಾಗಿದೆ.
ಮೇ ತಿಂಗಳಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಿಕ್ಷಕ ಹಾಜಿಮಲಂಗ ಹೆಚ್ಚಿನ ಅಂಕದ ಆಮಿಷವೊಡ್ಡಿ, ಜೀವ ಬೆದರಿಕೆ ಹಾಕಿ ಹಲವು ಬಾರಿ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ.
ಮನೆಯಲ್ಲಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ನ.29 ರ ರಾತ್ರಿ ಸಿಬ್ಬಂದಿ ಕೋಣೆಗೆ ಕರೆದ್ಯೊದು ಮತ್ತೊಮ್ಮೆ ದುಷ್ಕೃತ್ಯ ಎಸಗಿದ್ದ ಎನ್ನುವ ಅಂಶ ಪಾಲಕರಿಗೆ ತಿಳಿದು ಬೆಳಕಿಗೆ ಬಂದಿದೆ.
ಘಟನೆ ಖಂಡಿಸಿ ಪ್ರತಿಭಟನೆ: ಶಿಕ್ಷಕನ ದುಷ್ಕೃತ್ಯ ಖಂಡಿಸಿ, ಸ್ಥಳೀಯರು ಪ್ರತಿಭಟನೆ ನಡೆಸಿದರು. ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಬಿಜೆಪಿ ಮುಖಂಡ ಮಣಿಕಂಠ ರಾಠೋಡ, ಕರವೇ ಅಧ್ಯಕ್ಷ ವಿಶ್ವನಾಥ ಜಿ.ಪಾಟೀಲ್, ಅಮರನಾಥ ಸಾಹು, ಸಿದ್ದು ಹಂಗರಗಿ, ಸಾಹೇಬ ಗೌಡ ಸೇರಿ ನೂರಾರು ಜನ ಭಾಗವಹಿಸಿದ್ದರು.