ಶಹಾಪುರ: ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳ್ಳೊರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನಕನಹಳ್ಳಿ ಜೆ ಗ್ರಾಮದಲ್ಲಿ ಜುಲೈ ಜೀವನ ಮೀಷನ ಕಾಮಗಾರಿ ಕಳಪೆಯಾಗಿದೆ ಎಂದು ಕನ್ನಡಾಂಬೆ ವಿದ್ಯಾವರ್ಧಕ ಮತ್ತು ಗ್ರಾಮಾಭಿವೃದ್ಧಿ ಸಂಸ್ಥೆಯ ರಾಘವೇಂದ್ರ ಹೊಸಮನಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಜಲ ಜೀವನ ಮಿಷನ್ ಮನೆ ಮನೆಗೆ ಗಂಗೆ ಯೊಜನೆಯಡಿ ಮಾಡಿರುವ ಕೆಲಸ ಕಳಪೆ ಕಾಮಗಾರಿ ಎಂದು ಗೊತ್ತಿದ್ದರು ಜೆಇ ಚೆನ್ನವೀರಯ್ಯ ಕಾಮಗಾರಿ ವೀಕ್ಷಣೆ ಮಾಡದೆ, ಗ್ರಾಮದಲ್ಲಿ ಇನ್ನು ಕೆಲಸ ಬಾಕಿ ಇದ್ದರು ಬಿಲ್ ಪಾಸ್ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕನ್ಯಾಕೋಳ್ಳೂರ ಪಂಚಾಯತಿ ವ್ಯಾಪ್ತಿಯ ಬರುವ ಜಾಪಾ ನಾಯಕ ತಾಂಡಾ, ಗಂಗಾರಾಮ ತಾಂಡಾ. ಕನ್ಯಾಕೋಳ್ಳುರ, ತಿಪ್ಪನಳ್ಳಿ ಗಳಲ್ಲಿ ಕಾಮಗಾರಿ ಪೂರ್ಣಗೊಂಡು ಪಂಚಾಯತಿಗೆ ಹಸ್ತಾಂತರ ಮಾಡಿ ಗ್ರಾಮದ ಜನರು ಶುದ್ಧ ನೀರನ್ನು ಕುಡಿಯುತ್ತಿದ್ದಾರೆ.
ಆದರೆ ಗ್ರಾಮದ ಜನರು ನೀರು ಬಾರದ ನಲ್ಲಿಗಳನ್ನು ಮನೆಯ ಮುಂದೆ ಇಟ್ಟುಕೊಂಡು ಕನಸು ಕಾಣುತ್ತಿದ್ದಾರೆ. ಮತ್ತು ನೀರಿನ ಟ್ಯಾಂಕರಗೆ ಮೆಟ್ಟಿಲು ಮಾಡಿಸಿಲ್ಲ ಎಂದಿದ್ದಾರೆ.
ರೊಡಿನ ಒಂದು ಬದಿಯಲ್ಲಿ ಕೊಳವೆಬಾವಿ ಇನ್ನೊಂದು ಬದಿಯಲ್ಲಿ ಸ್ಟಾಟರ್ ರೂಂ ಮಾಡಿದ್ದು, ಗ್ರಾಮದಲ್ಲಿ ಪೈಪ ಲೈನ್ ಮಾಡಿ ನಲ್ಲಿ ಅಳವಡಿಸಿರುವದಿಲ್ಲ.
ನೀರಿನ ಟ್ಯಾಂಕರ ಸುತ್ತಲು ಸ್ವಚ್ಚತೆಯಿಲ್ಲ. ಸರ್ವೆ ನಂ 159 ರಲ್ಲಿ ಸುಮಾರು ಮನೆಗಳಿದ್ದು ಹೆಚ್ಚುವರಿ ಕೆಲಸ ಮಂಜೂರು ಆಗಿದ್ದು, ಕೆಲಸ ಬಾಕಿಯಿದೆ.
ರೋಡ ಪಕ್ಕದಲ್ಲಿ ಹಾಕಿರುವ ಮೇನ್ ಪೈಪ್ ಆಳ ಕೇವಲ ಒಂದು ಆಡಿ ಇರುವದು ಮೆಲೆ ಕಾಣುತ್ತಿದೆ. ಕೆಲಸ ಪೂರ್ಣಗೊಂಡಿಲ್ಲ ಆಗಲೆ ಪೈಪ ಮೇಲೆ ತೆಲಿರುತ್ತವೆ. ಇವೆಲ್ಲವು ಜೆಇ “ಯವರಿಗೆ ಕಂಡರೂ ಬಿಲ್ ಪಾಸ ಮಾಡಲು ಯಾವರ ಆಕ್ಷೇಪಣೆ ಮಾಡದ ರುಜು ಮಾಡಿರುತ್ತಾರೆ ಎಂದು ದೂರಿದ್ದಾರೆ.
ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿ ಗುತ್ತಿಗೆದಾರರಿಗೆ ಮತ್ತು ಜೆಇಯವರಿಗೆ ತಾಕೀತು ಮಾಡಿ ಅರ್ದಂಬರ್ವವಾದ ಕಮಗಾರಿ ಪೂರ್ಣಗೊಳಿಸಿ ಕಳಪೆ ಕಾಮಗಾರಿಯನ್ನು 15 ದಿನದಲ್ಲಿ ಸರಿಪಡಿಸಿ ಕೊಡಲು ಆದೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಶೀಘ್ರ ಕ್ರಮಕೈಗೊಳ್ಳದಿದ್ದರೇ ಕಚೇರಿ ಎದುರು ಗ್ರಾಮಸ್ಥರು ಧರಣಿ ನಡೆಸುವುದಾಗಿ ಅಪ್ಪಣ್ಣ ಆಲೂರ, ಹಣಮಂತ, ಹೊನ್ನಪ್ಪ ಒತಿನಮರಡಿ, ರಂಗಣ್ಣ ಮಲ್ಲಪ್ಪ ಜಿರ್ಲೆ, ದೇವು ತಂಗಲಬಾವಿ, ನಿಂಗಪ್ಪ ಬಸ್ಸಪ್ಪ ಬಂಗಾರಿ, ಶಿವಮಾನಪ್ಪ ಮಲ್ದಾರ ಇತರರು ಹೇಳಿದ್ದಾರೆ.