ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿ :ಸಿದ್ದಪ್ಪ ಹೊಟ್ಟಿ
ಯಾದಗಿರಿ : ನಗರದ ಹೃದಯ ಭಾಗದಲ್ಲಿರುವ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಅತ್ಯಂತ ತೀವ್ರಗತಿಯಲ್ಲಿ ಸಾಗಿದ್ದು, ಭಕ್ತರು, ಉದ್ಯಮಿಗಳು, ಗಣ್ಯರು ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ನಾಪೆಡ್ ಸಂಸ್ಥೆ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಸಿದ್ದಪ್ಪ ಹೊಟ್ಟಿಯವರು ಹೇಳಿದರು.
ಇಲ್ಲಿನ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನ ಆಡಳಿತ ಮಂಡಳಿವತಿಯಿಂದ ನಡೆದ ಸಭೆಯಲ್ಲಿ ಜಾತ್ರೆಯ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮ ನಗರದಲ್ಲಿ ಪ್ರಮುಖ ದೇವಸ್ಥಾನಗಳಲ್ಲೊಂದಾದ ಶ್ರೀ ಮೌನೇಶ್ವರ ದೇವಸ್ಥಾನ ಜಾತ್ರೆಯ ಅಂಗವಾಗಿ ಡಿ.13, 14, ಹಾಗೂ 15ರಂದು ಹಲವು ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯಲಿದ್ದು, ನಗರದ ಪ್ರತಿಯೊಬ್ಬರೂ ದೇವರ ದರ್ಶನ ಪಡೆದು ಪುನಿತರಾಗಬೇಕು ಎಂದು ಹೇಳಿದರು.
ಯಾದಗಿರಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ ಕಲಾಲ ಮಾತನಾಡಿ, ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸರ್ವರೂ ಕೈಜೋಡಿಸಬೇಕಿದೆ. ನಗರದಲ್ಲಿ ಇರುವ ಪ್ರಮುಖ ದೇವಸ್ಥಾನ ಇದಾಗಿದ್ದು, ಇಲ್ಲಿಯವರೆಗೆ ಗಣ್ಯರನೇಕರು ತನುಮನ-ಧನದಿಂದ ಸಹಕಾರ ನೀಡಿದ್ದು, ಮುಂದೇ ಇದೇ ರೀತಿ ಪ್ರತಿಯೊಬ್ಬರೂ ಕೈಜೋಡಿಸಿದರೆ ದೇವಸ್ಥಾನ ಸಮಿತಿಯಿಂದ ಇನ್ನೂ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಲಿದೆ ಎಂದರು.
ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ರಾಜು ಹೆಂದೆ ಅವರು ಅಧ್ಯಕ್ಷರಾದ ಮೇಲೆ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಪ್ರಾರಂಭಿಸಲಾಗಿದ್ದು, ಒಂದು ಒಳ್ಳೆಯ ದೇವಸ್ಥಾನ ಮಂದಿರ ನಿರ್ಮಾಣ ಮಾಡಲಾಗುತ್ತಿದ್ದು, ಪ್ರತಿಯೊಬ್ಬ ಭಕ್ತರ ಸಹಾಯ ಸಹಕಾರ ಅತ್ಯವಶ್ಯವಾಗಿದೆ ಎಂದು ಹೇಳಿದರು.
ಜಗದ್ಗುರು ಮೌನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ರಾಜು ಹೆಂದೆ ಮಾತನಾಡಿ, ನಗರದ ಪ್ರಮುಖ ದೇವಸ್ಥಾನ ಒಂದು ಉತ್ತಮ ಪರಿಸರದಲ್ಲಿ ಇರುವುದರಿಂದ ಇದರ ಮಂದಿರ ಜೀರ್ಣೋದ್ಧಾರ ಕೈಗೊಂಡು ಭಕ್ತರಿಗೆ ದರ್ಶನಕ್ಕಾಗಿ ಉತ್ತಮ ವಾತಾವರಣ ಸೃಷ್ಠಿಸಬೇಕೆನ್ನುವುದು ನನ್ನ ಬಯಕೆಯಾಗಿದ್ದು, ಅದಕ್ಕಾಗಿ ದೇವಸ್ಥಾನ ಸಮಿತಿಯವರೊಂದಿಗೆ ಚರ್ಚಿಸಿ ಜೀರ್ಣೋದ್ಧಾರ ಕಾರ್ಯಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾದ ಚನ್ನಪ್ಪಗೌಡ ಮೋಸಂಬಿ, ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷರಾದ ಮಹೇಂದ್ರ ಅನಪೂರ, ಶಿವಕುಮಾರ ಅಗರವಾಲ್, ಬಸವಂತರಾಯಗೌಡ ನಾಯ್ಕಲ್, ಆನಂದ ಚವ್ಹಾಣ ಮುದ್ನಾಳ, ಅಯ್ಯಣ್ಣ ಹುಂಡೆಕಾರ, ವಿಶ್ವನಾಥ ಶಿರವಾರ, ಶರಣಪ್ಪ ಜಾಕಾ, ಶರಣಪ್ಪ ಗುಳಗಿ, ಗಂಗಪ್ಪ ಸಜ್ಜನ್, ಚಂದಣ್ಣ ಹಾಲಬಾವಿ, ಭದ್ರಯ್ಯಸ್ವಾಮಿ ಮಳಬಗಿಮಠ, ಲಕ್ಷಿö್ಮÃಕಾಂತ ಹೆಂದೆ, ಜಗದೀಶ ಹೆಂದೆ, ಲಕ್ಷಿö್ಮÃಕಾಂತ ಪಾಂಚಾಳ, ಶಿವರಾಜ, ಚನ್ನಪ್ಪ ಸಾಹುಕಾರ ಠಾಣಗುಂದಿ, ಮಹೇಶ್ಚಂದ್ರ ವಾಲಿ, ಬಸವಂತರಾಯಗೌಡ ಮಾಲಿಪಾಟೀಲ, ನಾಗೇಂದ್ರ ಜಾಜಿ, ಶಿವಣ್ಣ ವಿಶ್ವಕರ್ಮ, ಶಿವಾನಂದ ವಿಶ್ವಕರ್ಮ, ರಾಜಶೇಖರ ವಿಶ್ವಕರ್ಮ, ಭೀಮರಡ್ಡಿ ಕರ್ಚಲಕಾಯಿ, ರಮೇಶ ಪಾಸಮಲ್, ಸಾಬಣ್ಣ ತಿಂಥಣಿ, ಶಶಿ ವಿಶ್ವಕರ್ಮ ಸೇರಿದಂತೆ ಇತರರಿದ್ದರು.
ಡಿ.13ರಿಂದ 15ರವರೆಗೆ ಜಗದ್ಗುರು ಮೌನೇಶ್ವರ ಜಾತ್ರೆ: ನಗರದ ಗಂಜ್ ಬಡಾವಣೆಯಲ್ಲಿರುವ ಜಗದ್ಗುರು ಶ್ರೀ ಮೌನೇಶ್ವರ ದೇವರ ಜಾತ್ರಾ ಮಹೋತ್ಸವ ಡಿ.13ರಿಂದ 15ರವರೆಗೆ ನಡೆಯಲಿದೆ ಎಂದು ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ರಾಜು ಹೆಂದೆ ತಿಳಿಸಿದ್ದಾರೆ.
ಡಿ.13ರಂದು ಶುಕ್ರವಾರ ಸಂಜೆ 4 ಗಂಟೆಗೆ ಬಡಿಗೇರ್ ಓಣಿಯ ಶ್ರೀ ಕಾಳಿಕಾದೇವಿ ದೇವಸ್ಥಾನದಿಂದ ಪ್ರಾರಂಭವಾದ ಪಲ್ಲಕ್ಕಿ ಮೆರವಣಿಗೆ ಪುರವಂತರ ಸೇವೆಯೊಂದಿಗೆ ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನ ತಲುಪುವುದು. ಡಿ.14ರಂದು ಶನಿವಾರ ಬೆಳಿಗ್ಗೆ ಗಂಗಾಸ್ನಾನ, ಅಭಿಷೇಕ, ಪೂಜೆಯ ನಂತರ ಮಹಾಪ್ರಸಾದ ಸೇವೆ ಸಂಜೆವರೆಗೆ ನಡೆಯಲಿದ್ದು, ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿ.15ರಂದು ರವಿವಾರ ಸಂಜೆ ಮಹಾ ರುದ್ರಾಭಿಷೇಕ ಮತ್ತು ಗುಹೆ ಪ್ರವೇಶ ವಿಜೃಂಭಣೆಯಿAದ ಜರುಗುಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪುನಿತರಾಗಬೇಕು ಎಂದು ತಿಳಿಸಿದ್ದಾರೆ.