ಹುಬ್ಬಳ್ಳಿಯಲ್ಲಿ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೆಹರ ವಾಡೆ ನೇತೃತ್ವ |ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನ್ನು ಭೇಟಿಯಾದ ನಿಯೋಗ
ಹಿಂದುಳಿದ ಸಮಾಜಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಕಲ್ಪಿಸುವ ಚಿಗುರೊಡೆದ ಭರವಸೆ…
ಬೆಂಗಳೂರು / ಹುಬ್ಬಳ್ಳಿ: ವಿಮಾನ ನಿಲ್ದಾಣ ದ ವಿಶೇಷ ಕೊಠಡಿಯಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಮತ್ತು ಧಾರವಾಡ ಜಿಲ್ಲಾ ಉಸ್ತವಾರಿ ಸಚಿವ ಶ್ರೀ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿ SSK ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆಗೆ ರಾಜ್ಯಾಧ್ಯಕ್ಷರ ನೇತೃತ್ವದ ನಿಯೋಗ ಮನವಿ ಮಾಡಿದೆ.
ಮನವಿ ಸ್ವೀಕರಿಸಿದ ಮುಖ್ಯ ಮಂತ್ರಿಗಳು ಹಾಗು ಉಪ ಮುಖ್ಯ ಮಂತ್ರಿಗಳು ಈ ಬಗ್ಗೆ ಸಕಾರತ್ಮ ವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಸತೀಶ್ ಮೇಹರವಾಡೆ ರಾಜ್ಯ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು ಹುಬ್ಬಳ್ಳಿ ಧಾರವಾಡ ಕೇಂದ್ರ ಪಂಚಾಯತ್, ನೀಲಕಂಠ ಸಾ ಜಡಿ, ಮಾಜಿ ಧರ್ಮದರ್ಶಿ, ಭಾಸ್ಕರ್ ಜಿತೂರಿ, ಕೇಂದ್ರ ಪಂಚಾಯತ್ ಉಪಾಧ್ಯಕ್ಷ, ಎನ್ ಎನ್ ಖೋಡೆ, ಕೇಂದ್ರ ಪಂಚಾಯತ್ ಗೌರವ ಕಾರ್ಯದರ್ಶಿ, ಕೆ ಪಿ ಪೂಜಾರಿ ಉಪಾಧ್ಯಕ್ಷರು ಕೇಂದ್ರ ಪಂಚಾಯತ್, ಗೋಪಾಲ್ ಬದ್ದಿ ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಜು ಧರ್ಮದಾಸ್ ಕೇಂದ್ರ ಪಂಚಾಯತ್ ಸದಸ್ಯರು, ಕಿಶೋರ್ ಧರ್ಮದಾಸ, ಗಣೇಶ್ ಪೇಟ್ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರಿಗೆ ಮನವಿ: ಯಲಬುರ್ಗಾ ಎಸ್.ಎಸ್.ಕೆ.ಸಮಾಜದ ಮತ್ತು ಹೋರಾಟ ಸಮಿತಿಯ ವತಿಯಿಂದ ಶಾಸಕರು ಮತ್ತು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು ಶ್ರೀ ಬಸವರಾಜ ರಾಯರೆಡ್ಡಿ ಅವರನ್ನು ಭೇಟಿಯಾಗಿ ಬೆಳಗಾವಿ ಅಧಿವೇಶನದಲ್ಲಿ ಎಸ್.ಎಸ್.ಕೆ ಸಮಾಜದ ಅಭಿವೃದ್ಧಿ ನಿಗಮ ಮತ್ತು ಹಿಂದುಳಿದ ಪಟ್ಟಿಯಿಂದ ಎಸ್ಟಿ ವರ್ಗಕ್ಕೆ ಸೇರಿಸಿ ಸಮಾಜಕ್ಕೆ ನ್ಯಾಯ ಒದಗಿಸಲು ಮನವಿ ಮಾಡಿದರು.
ಸಹಸ್ರಾರ್ಜುನ ಮಹಾರಾಜರ ಜಯಂತಿ ಸರಕಾರದ ವತಿಯಿಂದ ಮಾಡುವುದು ಮತ್ತು ಅಧಿವೇಶನದಲ್ಲಿ ನಮ್ಮ ಸಮಾಜದ ಪರವಾಗಿ ಧ್ವನಿ ಎತ್ತ ಬೇಕು ಎಂದು ಒತ್ತಾಯಿಸಿ ಮನವಿ ನೀಡಲಾಯಿತು. ಸಮಾಜದ ಮುಖಂಡರು. ಪ್ರಮುಖರು ಇದ್ದರು.
ಅಧಿವೇಶನದಲ್ಲಿ ಧ್ವನಿ ಎತ್ತಲು ಸಮಾಜದಿಂದ ಶಾಸಕರಿಗೆ ಮನವಿ: ಕರ್ನಾಟಕ ರಾಜ್ಯ ಸೋಮವಂಶೀಯ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಆಶ್ರಯದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಅಭಿವೃದ್ದಿ ಹೋರಾಟ ಸಮಿತಿಯಿಂದ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ, ಪಶ್ಚಿಮ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರನ್ನು ಭೇಟಿಯಾಗಿ SSK ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ವಿಷಯವಾಗಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸದನದಲ್ಲಿ ಮಾತನಾಡಿ, ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಅಶೋಕ ಕಾಟವೆ, ವಿಠ್ಠಲ ಲದವಾ, ನಾರಾಯಣಸಾ ನಿರಂಜನ, ನಾರಾಯಣಸಾ ಜರತಾರಘರ, ಹನುಮಂತಸಾ ನಿರಂಜನ, ರಾಜು ವ್ಹಿ ಜರತಾರಘರ, ಪ್ರಕಾಶ ಬುರಬುರೆ, ದೇವದಾಸ್ ಹಬೀಬ್, ಪ್ರವೀಣ ಪವಾರ್, ವಿನಾಯಕ ಲದವಾ, ವೆಂಕಟೇಶ್ ಕಾಟವೆ, ಮಿಥುನ್ ಚೌಹಾಣ್, ದೀಪಕ್ ಜಿತೂರಿ, ನಾಗರಾಜ ಪಟ್ಟಣ, ಸಾಯಿ ದಲಬಂಜನ, ಮಂಜು ಮಿಸ್ಕಿನ, ಕುಶಾಲ್ ಪವಾರ ಹಾಗೂ ಸಮಾಜ ಬಾಂಧವರು ಇದ್ದರು.