ರಾಷ್ಟ್ರೀಯ ಜಂತು ಹುಳು ನಿವಾರಣಾ ಜಾಗೃತಿ
ಯಾದಗಿರಿ : ಮಕ್ಕಳಲ್ಲಿ ಜಂತುಹುಳು ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳು ಕಡ್ಡಾಯವಾಗಿ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಸೇವಿಸುವುದು, ಮಕ್ಕಳ ಆರೋಗ್ಯ ಅತಿ ಅವಶ್ಯಕವಾಗಿರುತ್ತದೆ. ಶಾಲಾ, ಕಾಲೇಜು, ಅಂಗನವಾಡಿ ಶಿಕ್ಷಕರು ಜಂತುಹುಳು ಮಾತ್ರೆಯನ್ನು ಸೇವಿಸಲು ಮನವೋಲಿಸಿ ಗುರಿ ಸಾಧಿಸುವಂತೆ ಯಾದಗಿರಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಹಣಮಂತ ರೆಡ್ಡಿ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಹಯೋಗದಲ್ಲಿ ಯಾದಗಿರಿ ಸರಕಾರಿ ಪ್ರೌಢ ಶಾಲೆ ಸ್ಟೇಷನ್ ಬಜಾರ್‌ದಲ್ಲಿ ಜಂತುಹುಳು ಸೋಂಕನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಂತುಹುಳು ನಿವಾರಣೆ ಸಲುವಾಗಿ ಸಮುದಾಯ ಹೋರಾಡಬೆಕಾಗಿದ್ದು ಇದರ ಬಗ್ಗೆ ಎಲ್ಲಾರಿಗೂ ಅರಿವು ಮೂಡಿಸುವುದು ಅವಶ್ಯವಾಗಿದೆ. ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮದ ನಿಮಿತ್ತ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮ ಪ್ರತಿ ವರ್ಷದಲ್ಲಿ ಫೆಬ್ರವರಿ ಮತ್ತು ಆಗಸ್ಟ್ ಮಾಹೆಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
2024ರ ಡಿಸೆಂಬರ್ 9 ರಿಂದ 16ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಯಾದಗಿರಿ ಜಿಲ್ಲೆದ್ಯಾದಂತ 1 ರಿಂದ 19 ವರ್ಷ ಒಳಗಿನವರಿಗೆ ಅಂಗವಾಡಿ ಮಕ್ಕಳು, ಶಾಲೆ ಬಿಟ್ಟ ಮಕ್ಕಳು 151542, ಶಾಲೆ ಮಕ್ಕಳು 324552, ಪದವಿ ಪೂರ್ವ ಕಾಲೇಜು ಮಕ್ಕಳು 37080, ಒಟ್ಟು 513174 ಮಕ್ಕಳ ಗುರಿ ಇರುತ್ತದೆ. ಓಆಆ, ಜಂತುಹುಳು ನಿವಾರಣಾ ಮಾತ್ರೆಗಳನ್ನು ಶಾಲೆ, ಅಂಗನವಾಡಿ, ಪ.ಪು. ಕಾಲೇಜುಗಳಲ್ಲಿ ವಿತರಿಸಲಾಗುತ್ತದೆ. 01 ರಿಂದ 02 ವರ್ಷದ ಮಕ್ಕಳಿಗೆ 1/2 (ಅರ್ಧ) ಮಾತ್ರೆ (ಸ್ಪೂನಿಂದ ಪುಡಿ ಮಾಡಿ ), 02 ರಿಂದ 03 ವರ್ಷದ ಮಕ್ಕಳಿಗೆ 1 ಮಾತ್ರೆ (ಸ್ಪೂನಿಂದ ಪುಡಿ ಮಾಡಿ), 03 ರಿಂದ 19 ವರ್ಷದ ಮಕ್ಕಳಿಗೆ 1 ಮಾತ್ರೆ (ನೇರವಾಗಿ ಚಿಪಿಸುವುದು) ರಂತೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಎಂ ಜಯಾ ಅವರು ಮಾತಾನಾಡಿ, ಎಲ್ಲಾ ಮಕ್ಕಳು ಜಂತುಹುಳು ಸೊಂಕನ್ನು ತಡೆಗಟ್ಟಲು ಮಾತ್ರೆಗಳನ್ನು ತಪ್ಪದೆ ಸೇವಿಸಬೇಕು, ಆರೋಗ್ಯದ ಕಡೆಗೆ ಗಮನ ಹರಿಸುವಂತೆ ತಿಳಿಸಿದರು. ಯಾದಗಿರಿ ತಾಲೂಕ ಬಿ.ಆರ್.ಸಿಗಳಾದ ಶ್ರೀ ಮಲ್ಲಿಕಾರ್ಜುನ್ ಪೂಜಾರಿ ಮಾತನಾಡಿ, ಮಕ್ಕಳು ಜಂತುಹುಳು ಸೋಂಕನ್ನು ತಡೆಗಟ್ಟಲು ಕೈಕಾಲುಗಳನ್ನು ಮೇಲಿಂದ ಮೇಲೆ ಸ್ವಚ್ಚವಾಗಿ ತೊಳೆದುಕೊಳ್ಳಬೇಕು, ಸೇವಿಸುವ ಆಹಾರ ಪದಾರ್ಥ, ಕುಡಿಯುವ ನೀರಿನ ಮೇಲೆ ನೋಣಗಳು ಬಾರದಂತೆ, ದೋಳು ಬೀಳದಂತೆ, ಮುಚ್ಚಿಡಬೇಕು. ಹಸಿರು ತರಕಾರಿ, ಹಣ್ಣು ಹಂಪಲಗಳನ್ನು ತೋಳೆದು ತಿನ್ನಬೇಕು, ವರ್ಷಕ್ಕೆ ಎರಡು ಬಾರಿ ನೀಡುವ ಅಲ್ಬೆಂಡಾಜೋಲ್ ಮಾತ್ರಗಳನ್ನು ಸೇವಿಸಬೇಕು. ಈ ರೀತಿ ಪಾಲಿಸುವುದರಿಂದ ಸೋಂಕನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ಚವ್ಹಾಣ ನಿರೂಪಿಸಿದರು. ಕುಮಾರಿ ತಾಯಮ್ಮು ಪ್ರಾರ್ಥನೆಯನ್ನು ಹಾಡಿದರು. ಅಯ್ಯಮ್ಮ ಸ್ವಾಗತಿಸಿದರು. ಜಿಲ್ಲಾ ಸಂಯೋಜಕ ರಾಣೋಜಿ ನನೇರವೇರಿಸಿದರು.
ಈ ಸಂದರ್ಭದಲ್ಲಿ ನ.ಪ್ರಾ.ಆ.ಕೇಂದ್ರದ ವೈದ್ಯರಾದ ಡಾ.ವಿನೂತಾ, ಅಮೃತಬಾಯಿ, ಯಾದಗಿರಿ ಜಿ.ಪಂ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕನಕಪ್ಪ, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕಿ ಸಹನಾ, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಆಶಾ ಕಾ.ಕರ್ತೆಯರು ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.