ಕಂದಾಯ ಇಲಾಖೆ ನೌಕರರ ಕ್ರೀಡಾಕೂಟಕ್ಕೆ ಚಾಲನೆ | ಸರ್ಕಾರಿ ನೌಕರರು ಒತ್ತಡ ನಿವಾರಣೆಗೆ ವಾಕಿಂಗ್, ಯೋಗ, ಸಂಗೀತ ಇತ್ಯಾದಿ ಮಾನಸಿಕ ಉಲ್ಲಾಸ ನೀಡುವ ಕ್ರಿಯೆ ರೂಡಿಸಿಕೊಳ್ಳಿ
ಯಾದಗಿರಿ: ಇಲ್ಲಿನ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳಿಗೂ ಕ್ರೀಡಾಕೂಟದ ವ್ಯವಸ್ಥೆ ಮಾಡಬೇಕೆನ್ನುವ ಆಸ್ತಕಿ ತಮಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ರೇಖಾ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ನೌಕರರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ನೌಕರರು ಒತ್ತಡ ನಿವಾರಣೆಗೆ ವಾಕಿಂಗ್, ಯೋಗ, ಸಂಗೀತ ಇತ್ಯಾದಿ ಮಾನಸಿಕ ಉಲ್ಲಾಸ ನೀಡುವ ಕ್ರಿಯೆಗಳನ್ನು ರೂಡಿ ಮಾಡಿಕೊಳ್ಳಬೇಕೆಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಲವೀಶ್ ಒರಡಿಯಾ ಮಾತನಾಡಿ, ಕಂದಾಯ ಇಲಾಖೆ ಸಿಬ್ಬಂದಿಗಳು ಹೆಚ್ಷು ಒತ್ತಡದಲ್ಲಿ ಕೆಲಸ ಮಾಡುವ ಇಲಾಖೆ ಯಾಗಿದ್ದು, ಕ್ರೀಡಾ ಕೂಟದಲ್ಲಿ ಭಾಗವಹಿಸಿ ನಿವಾರಣೆ ಮಾಡಿಕೊಳ್ಳಿ. ಹಾಗೂ ಪ್ರತಿದಿನ ಸ್ವಲ್ಪ ಸಮಯ ವಾಕಿಂಗ್ ಹಾಗೂ ಯೋಗಕ್ಕೆ ಸಮಯ ನೀಡಬೇಕು ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್ ಮಾತನಾಡಿ, ಸರ್ಕಾರಿ ನೌಕರರು ಹೆಚ್ಚು ಸಮಯ ಕಛೇರಿಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಬೆಳಿಗ್ಗೆ ದಿನಾಲು ಸುಮಾರು 45 ನಿಮಿಷಗಳ ಕಾಲ ವ್ಯಾಯ್ಯಾಮ, ಯೋಗ ಮಾಡುವ ಮೂಲಕ ನಮ್ಮ ಆರೋಗ್ಯ ಕಾಪಾಡಬೇಕು. ಇಂದಿನ ದಿನಗಳಲ್ಲಿ ಬಹಳ ಜನರು ಅಸಹಜ ಸಾವಿನಿಂದ ಸಾವನ್ನಪ್ಪುತ್ತಿದ್ದಾರೆ. ಕಾರಣ ಎಲ್ಲರೂ ದೈನಂದಿನ ಜೀವನದಲ್ಲಿ ದೈಹಿಕ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಮಾತನಾಡಿ, ರಾಜ್ಯದಲ್ಲಿ ಯಾದಗಿರಿ ಜಿಲ್ಲೆಗೆ ಹಿಂದುಳಿದ ಪಟ್ಟಿ ಕಟ್ಟಿದ್ದಾರೆ. ಆದರೆ ಕಂದಾಯ ಇಲಾಖೆ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಎಲ್ಲಾ ಅಂಶಗಳಲ್ಲಿ ಪ್ರಗತಿಸಿ ಸಾದಿಸಿರುವುದು ಹೆಮ್ಮೆಯ ವಿಷಯ ಎಂದರು.
ಕಂದಾಯ ಇಲಾಖೆಯಲ್ಲಿ ಸುಮಾರು ಒಂದು ವರ್ಷದಿಂದ ಹೊಸ ಆ್ಯಪ್ ಜಾರಿಗೆ ತರಲಾಗಿದೆ. ಅದರಲ್ಲಿ ಮುಖ್ಯವಾಗಿ ರೈತರ ಎಲ್ಲಾ ಪಹಣಿಗಳು ಆದಾರಗೆ ಜೊಡಣೆ ಮಾಡುವುದು. ಈ ರೀತಿ ಮಾಡುವಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿ 5 ಸ್ಥಾನದಲ್ಲಿದೆ. ಸುಮಾರು 6 ಲಕ್ಷ ಪಹಣಿಗಳಿದ್ದು, ಅದರಲ್ಲಿ 5ಲಕ್ಷ 56 ಸಾವಿರದಷ್ಟು ರೈತರ ಪಹಣಿಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ 91ಶೇ. ರಷ್ಟು ಸಾಧನೆ ನಮ್ಮ ಕಂದಾಯ ಇಲಾಖೆ ಮಾಡಿದೆ ಎಂದರು.
ನಮ್ಮ ಜಿಲ್ಲೆಯಲ್ಲಿರುವ ಸರ್ಕಾರಿ ಜಮೀನು ರಕ್ಷಣೆ ಮಾಡಲು ಲ್ಯಾಂಡ್ ಬೀಟ್ ಆ್ಯಪ್ ಜಾರಿಗೆ ತರಲಾಗಿದೆ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನು ತೆರವು ಮಾಡಲು 21 ಸಾವಿರ ರಷ್ಟು ಸರ್ಕಾರಿ ಜಮೀನ ಸರ್ವೆ ಮಾಡಲಾಗಿದೆ. ಅದರಲ್ಲಿ ಈಗಾಲೇ 20 ಸಾವಿರ ರಷ್ಟು ಲ್ಯಾಂಡ್ ಗಳು ಆಫ್ ಮೂಲಕಬಸರ್ವೆ ಮಾಡಿ. ಅದನ್ನು ಮ್ಯಾಚಿಂಗ್ ಮಾಡುವ ಮೂಲಕ ಸುಮಾರು 97 ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಕಂದಾಹ ಇಲಾಖೆಯಲ್ಲಿ ಸಮನ್ವಯ ರೀತಿಯಲ್ಲಿ ಎಲ್ಲಾ ಇಲಾಖೆಗಳಿಗಿಂತ ಉತ್ತಮ ಸಾಧನೆ ಮಾಡುತ್ತಿದೆ. ಒತ್ತಡ ಬದುಕಿನಲ್ಲಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಮಾನಸಿಕ ವಾಗಿ ಸದೃಡವಾಗಲು ಸಹಾಯವಾಗಲಿದೆ ಎಂದರು.
ಕ್ರೀಡಾ ಕೂಟದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರಾದ ಮರಿಯಪ್ಪ ಅವರು ಕ್ರೀಡಾ ಪಟ್ಟುಗಳಿಗೆ ಕ್ತೀಡಾ ಪ್ರತಿಜ್ಞೆ ಬೋಧಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶರಣಪ್ಪ ಕೊಟೆಪ್ಪಗೊಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಚುನಾವಣಾ ತಹಸೀಲ್ದಾರರಾದ ಸಂತೋಷರಾಣಿ, ಜಿಲ್ಲಾಧಿಕಾರಿ ಕಛೇರಿ ಸಹಾಯಕ ದುಂಡಪ್ಪ ಕೋಮಾರ, ತಹಸೀಲ್ದಾರರಾದ ಬಸಲಿಂಗಪ್ಪ ನಾಯಕೋಡಿ, ಸುರೇಶ ಅಂಕಲಗಿ, ಶಾಂತಗೌಡ ಬಿರಾದಾರ, ಉಮಾಕಾಂತ ಹಳ್ಳೆ, ಹುಸ್ಸೇನ್ ಸರ್ಕಾವಸ್, ಶ್ರೀನಿವಾಸ ಚಾಪೇಲ್, ವಿಜಯೇಂದ್ರ ಹುಲಿನಾಯಕ, ಅನೀತಾ ರಾಜೇಂದ್ರ ಸಜ್ಜನ್, ಪಿ.ಶಾಂತಾ, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶಬ್ಬೀರ್ ಪಟೇಲ್, ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸೋಗಿ, ಜಿಲ್ಲಾ ಪ್ರಧಾನ ಕಾರ್ಯಯ ಮಲ್ಲಿಕಾರ್ಜುನ ಈಟೆ, ಸುರೇಂದ್ರ ಬಬಲಾದ, ವಿಜಯ ಸಿಂಗ್ ಸೇರಿದಂತೆ ಕಂದಾಯ ನೌಕರರು ಇದ್ದರು.