ರಾಯಚೂರು, ಯಾದಗಿರಿ ಜಿಲ್ಲೆಗಳ 30ಕ್ಕೂ ಹೆಚ್ಚು ಕಾಲೇಜುಗಳ 120 ವಿದ್ಯಾರ್ಥಿಗಳು ಭಾಗಿ 

ರಾಯಚೂರು: ಅ‌ಕ್ಟೋಬರ್ 30ರಿಂದ ನವೆಂಬರ್ 4ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ದಕ್ಷಿಣ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ರಾಯಚೂರು ವಿಶ್ವವಿದ್ಯಾಲಯ ದಿಂದ ಇತ್ತೀಚೆಗೆ ವಿವಿ ಮಟ್ಟದ ಕ್ರೀಡಾ ಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ವೇಳೆ ವಿವಿಯ ಕಲಾ ವಿಭಾಗದ ಡೀನ್ ಪ್ರೊ. ಪಾರ್ವತಿ.ಸಿ.ಎಸ್ ಮಾತನಾಡಿ, ಹೊಸದಾಗಿರುವ ರಾಯಚೂರು ವಿಶ್ವವಿದ್ಯಾಲಯದಲ್ಲಿ ಕಳೆದ ಒಂದು ವರ್ಷದಿಂದ ಕ್ರೀಡಾ ಚಟುವಟಿಕೆಗಳು ಗರಿಗೆದರಿದ್ದು, ವಿದ್ಯಾರ್ಥಿಗಳು ಮತ್ತು ಕ್ರೀಡಾ ತರಬೇತುದಾರರ ಆಸಕ್ತಿ, ಪಾಲ್ಗೊಳ್ಳುವಿಕೆ ಯಿಂದಾಗಿ ವಿವಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸುವುದು ಸಾಧ್ಯವಾಗಿದೆ ಎಂದರು.

ಅತ್ಯಂತ ಕಡಿಮೆ ಸಮಯದಲ್ಲಿ ಕ್ರೀಡಾ ಚಟುವಟಿಕೆಗಳು ವೇಗ ಪಡೆದಿರುವುದು ಉತ್ತಮ ಭವಿಷ್ಯದ ಮುನ್ನೋಟವಾಗಿದೆ. ವಿದ್ಯಾರ್ಥಿಗಳು ಇದೇ ಉತ್ಸಾಹದೊಂದಿಗೆ ಉನ್ನತ ಮಟ್ಟದಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಜೊತೆಗೆ ಪದಕಗಳನ್ನು ಗೆದ್ದು ತಮ್ಮ ಕಾಲೇಜು ಮತ್ತು ವಿಶ್ವವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಶುಭ ಹಾರೈಸಿದರು.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 30ಕ್ಕೂ ಹೆಚ್ಚು ಪದವಿ‌ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ಸುಮಾರು 120 ವಿದ್ಯಾರ್ಥಿಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಇಂಗ್ಲೀಷ್ ವಿಭಾಗದ ಉಪನ್ಯಾಸಕ ಅನೀಲ್ ಅಪ್ರಾಳ್ ನಿರೂಪಿಸಿದರು. ಈ ಸಂದರ್ಭದಲ್ಲಿ ರಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಲತಾ, ವಿವಿಯ ಕ್ರೀಡಾ ಸಂಯೋಜಕ ಮಲ್ಲಿಕಾರ್ಜುನ್.ಎನ್, ಆಯ್ಕೆ ಸಮೀತಿಯ ಸದಸ್ಯರಾದ ಸುರಪುರ ಸರ್ಕಾರಿ ಪ್ರಥಮ‌‌‌ ದರ್ಜೆ ಕಾಲೇಜಿನ ಡಾ. ರಮೇಶ್ ಶಾಪೂರಕರ್, ಮಸ್ಕಿ ಸಪ್ರದ ಕಾಲೇಜಿನ ಡಾ.‌ ವೀರೇಶ್ ನಾಯಕ್, ಮಾನ್ವಿ ಸಪ್ರದ ಕಾಲೇಜಿನ ಡಾ.ಧನಂಜಯ‌, ರಂಗಂಪೇಟ್ ಪ್ರಿಯದರ್ಶಿನಿ ಕಾಲೇಜಿನ ಅಮರೇಶ್ ನಾಯಕ್ ಹಾಗೂ‌ ವಿವಿಯ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ. ಶರಣಬಸವರಾಜ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ವಿಜಯ್ ಸರೋದೆ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ನಾಗವೇಣಿ.ವಿ.ಎಸ್ ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

ಸಮಾರೋಪ: ಆಯ್ಕೆ ಪ್ರಕ್ರಿಯೆಯ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಶಂಕರ್.ವಿ‌ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. ಮೌಲ್ಯ ಮಾಪನ ಕುಲಸಚಿವ ಪ್ರೊ. ಯರಿಸ್ವಾಮಿ.ಎಂ, ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ. ರಾಘವೇಂದ್ರ ಫತೇಪುರ್, ಅಭಿಯಂತರ ಪಂಪಾಪತಿ, ಕ್ರೀಡಾ ಮಂಡಳಿಯ ಸದಸ್ಯ ರಾಜಶೇಖರ ಪಾಸೋಡಿ, ರಾಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ್.ಕೆ, ಕುಲಸಪತಿಗಳ ಆಪ್ತ ಕಾರ್ಯದರ್ಶಿ ಡಾ. ಶ್ರೀಮತ್ ಸುಧೀರ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು‌ ಸೇರಿದಂತೆ ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾವಿವಿ ಕ್ರೀಡಾ ಸಂಘದ ವತಿಯಿಂದ ಈ ಸಂದರ್ಭದಲ್ಲಿ ನೂತನ ಕುಲಸಚಿವ ಡಾ. ಶಂಕರ್.ವಿ‌ ಅವರನ್ನು ಸನ್ಮಾನಿಸಲಾಯಿತು.

Spread the love

Leave a Reply

Your email address will not be published. Required fields are marked *

error: Content is protected !!