ಬಸವಕಲ್ಯಾಣ ತಾಲೂಕಿನ ನಾರಾಯಣಪುರನ ಜವಾಹರ್ ನವೋದಯ ವಿದ್ಯಾಲಯದ ಸಭಾಂಗಣ ದಲ್ಲಿ | 10 ನೇ ಬ್ಯಾಚ್ ಹಳೆ ವಿದ್ಯಾರ್ಥಿಗಳಿಂದ ನೆನಪಿನಂಗಳ ಕಾರ್ಯಕ್ರಮ | ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ಮುಕುಲ್ ಜೈನ್ ಅಭಿಪ್ರಾಯ
ಬೀದರ: ಶಿಕ್ಷಕರು ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಬಸವಕಲ್ಯಾಣ ಉಪವಿಭಾಗದ ಸಹಾಯಕ ಆಯುಕ್ತ ಮುಕುಲ್ ಜೈನ್ ಅವರು ಹೇಳಿದರು.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರನ ಜವಾಹರ್ ನವೋದಯ ವಿದ್ಯಾಲಯದ ಸಭಾಂಗಣ ದಲ್ಲಿ ನವೋದಯ ವಿದ್ಯಾಲಯದ 10 ನೇ ಬ್ಯಾಚ್ ನ ಹಳೆ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡ ಹಳೆಯ ವಿದ್ಯಾರ್ಥಿಗಳ ಮಿಲನ ನೆನಪಿನಂಗಳ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರಿಂದಲೇ ಭವಿಷ್ಯದ ಬದಲಾವಣೆ ಕಾಣಬಹುದಾಗಿದೆ. ಶಿಕ್ಷಣದ ಮೂಲಕವೇ ವಿದ್ಯಾರ್ಥಿಗಳು ಉನ್ನತ ಗುರಿ ಸಾಧಿಸಿ ಉತ್ತಮ ಬದುಕು ಕಟ್ಟಿಕೊಳ್ಳಬಹುದಾಗಿದೆ. ಉತ್ತಮ ಶಿಕ್ಷಣ ಪಡೆದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು. ನವೋದಯ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಗಳ ನೆನಪಿನಂಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮೆಚ್ಚುವಂತಾಗಿದೆ ಎಂದರು.
ಈ ವೇಳೆ ತಹಶೀಲ್ದಾರ ದತ್ತಾತ್ರೇಯ ಜೆ.ಗಾದಾ ಅವರು ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳಾಗಿದ್ದಾರೆ.
ಎಲ್ಲಾ ವರ್ಗದವರನ್ನು ರೂಪಿಸುವ ರೂವಾರಿಗಳಾ ಗಿದ್ದಾರೆ. ಶಿಕ್ಷಕರು ವಿಜ್ಞಾನಿ,ಇಂಜಿನಿಯರ್, ಶಿಕ್ಷಕ, ಡಾಕ್ಟರ್ ಸೇರಿ ಎಲ್ಲಾ ವರ್ಗದವರನ್ನು ತೈಯಾರಿ ಮಾಡುವ ಶಿಲ್ಪಿಗಳಾಗಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಶಿಕ್ಷಕರು ಶಿಕ್ಷಣ ನೀಡುತ್ತಾರೆ. ನಾವೆಲ್ಲರೂ ಶಿಕ್ಷಕರಿಂದಲೇ ಉನ್ನತ ಸಾಧನೆ ಮಾಡಿದ್ದು, ನವೋದಯ ಶಾಲೆಯಲ್ಲಿ ದೊರೆತ ಗುಣಮಟ್ಟದ ಶಿಕ್ಷಣ ದಿಂದಲೇ ಉನ್ನತ ಗುರಿಸಾಧಿಸಲು ಸಾಧ್ಯವಾಯಿತು. ಪಠ್ಯದ ಜೊತೆ ಪಠ್ಯೇತರ ಚಟುವಟಿ ಕೆಗಳಲ್ಲಿ ಭಾಗವಹಿಸಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಹೈದ್ರಾ ಬಾದ್ ಪ್ರಾದೇಶಿಕ ಕೇಂದ್ರ ನವೋದಯ ವಿದ್ಯಾಲಯ ಸಮಿತಿ ಸಹಾಯಕ ಆಯುಕ್ತೆ ಕೆ.ಸಾಗರಿಕಾ ಅವರು ಮಾತನಾಡಿ, ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯ ಬದಲಾವಣೆ ಸಾಧ್ಯವಿದೆ. ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಬೇಕಿದೆ. ಆರೋಗ್ಯದ ಕಾಳಜಿ ಜೊತೆ ಉನ್ನತ ಶಿಕ್ಷಣ ಪಡೆದು ಗುರಿ ತಲುಪಿ ಪೋಷಕರ ಕನಸು ಸಾಕಾರಗೊಳಿಸಬೇಕು.
ನೆನಪಿನಂಗಳ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹಳೆ ವಿದ್ಯಾರ್ಥಿಗಳು, ಹಳೆ ಶಿಕ್ಷಕರ ನೆನಪಿಸುವ ಈ ಕಾರ್ಯಕ್ರಮ ಮೆಚ್ಚುವಂತಾಗಿದೆ. ಎಷ್ಟೆ ಉನ್ನತ ಗುರಿ ಸಾಧಿಸಿದರು ತಾನು ಓದಿದ ಶಾಲೆ,ಶಿಕ್ಷಕರು ಹಾಗೂ ಬಾಲ್ಯದ ಸ್ಮರಣೆ ಮಾಡುವುದು ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಪ್ರಾಂಶುಪಾಲರಾದ ಪಿ.ಅರವಿಂದ, ಉಪ ಪ್ರಾಂಶುಪಾಲರಾದ ಎಸ್. ಭಾವನಾ, ಡಾ.ರಮೇಶ್, ಡಾ.ಪೃಥ್ವಿರಾಜ್ ಕಾಂಬಳೆ, ಡಾ.ಮಹೇಶ್ ಕುಮಾರ್, ಅಂಜಲಿ ರೆಡ್ಡಿ, ಡಾ.ಜ್ಯೋತಿ ಆರ್.ಸಿ, ಜ್ಯೋತಿ ಎಸ್ ಬಿ, ವೈಶಾಲಿ, ಜಯಶ್ರೀ ಬಿ,ಮುರುಳಿಧರ, ಗೌರೀಶ್, ಸತೀಶ್ ಪಿ.ಕೆ.ಬಸವ ಕುಮಾರ್, ಶಿವಾನಂದ, ವಿಜಯಕುಮಾರ್ ಎನ್ ಎಮ್. ವಿಜಯ ಕುಮಾರ್ ಆರ್.ಯು, ಡಾ.ನಾಗನಾಥ, ಶ್ರೀಮತಿ ಕಿರಣ್ ಪಾಟೀಲ ಇದ್ದರು. ನಾಗಶೇನ ಸ್ವಾಗತಿಸಿದರು, ಮುರುಳಿ ನಿರೂಪಿಸಿದರು. ಸೋಮನಾಥ ವಂದಿಸಿದರು.