ಬಯಲಾಟದ ಮಹಿಷಾಸುರ ಮರ್ಧಿನಿ ದೇವಿ ಪಾತ್ರ ಮಾಡಿ ಗಮನ ಸೆಳೆದ ಗ್ರಾಮ ಸಹಾಯಕ ದೊಡ್ಡ ಮಾನಪ್ಪ ನಾಟೇಕರ್
ಯಾದಗಿರಿ: ನಮ್ಮ ಭಾರತದ ಇತಿಹಾಸ ನೋಡಿದರೆ ಕಲೆ, ಸಾಹಿತ್ಯ, ಸಂಗೀತ, ಜಾನಪದ ಗಳಂತಹ ಕಲೆಗಳಿಂದಲೇ ಅತ್ಯಂತ ಶ್ರೀಮಂತವಾಗಿದೆ.
ಇನ್ನು ಕರ್ನಾಟಕವಂತೂ ಕಲಾ ಪ್ರಕಾರಗಳ ಶ್ರೀಮಂತ ಮತ್ತು ರೋಮಾಂಚಕ ಸಂಗ್ರಹಕ್ಕೆ ನೆಲೆಯಾಗಿದೆ. ಅವುಗಳಲ್ಲಿ ಹೆಚ್ಚಿನವು ಗ್ರಾಮೀಣ ಪ್ರದೇಶದ ಜಾನಪದ ಕಲೆಗಳಾಗಿವೆ. ಅದರಲ್ಲಿ ಬಯಲಾಟವು ಪ್ರಮುಕ ಕಲೆಯಾಗಿ.
ಕೆಲವು ದಿನಗಳಿಂದ ನಡೆದ ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ 2024ನೇ ಸಾಲಿನ ಕಂದಾಯ ಇಲಾಖೆಯ ಕ್ರೀಡಾಕೂಟದ ಸಮಾರೋಪ ಸಮಾರಂಭವು ಭಾನುವಾರ ಸಂಜೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜರುಗಿತು.
ಕಾರ್ಯಕ್ರಮದಲ್ಲಿ ವಡಗೇರಾ ತಾಲ್ಲೂಕಿನ ಹುಲ್ಕಲ್ (ಜೆ) ಗ್ರಾಮ ಸಹಾಯ ಡೊಡ್ಡ ಮಾನಪ್ಪ ನಾಟೇಕರ್ ಅವರು ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷ ಗಳಿಂದ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು ಅವರು ಬಾಲ್ಯ ದಿಂದಲೂ ಬಯಲಾಟದ ಹಲವಾರು ಪಾತ್ರಗಳನ್ನು ಮಾಡಿ ಸೈ ಎನಿಸಿ ಕೊಂಡ ಕಲಾವಿದರಾಗಿದ್ದು ವಡಗೇರಾ ತಹಸೀಲ್ದಾರರ ಪ್ರೊತ್ಸಾಹದಿಂದ ಮಾನಪ್ಪರವರು ಮೈಹಿಷಾಸುರ ಮರ್ಧಿನಿ ನಾಟಕದ ಮುಖ್ಯಪಾತ್ರವಾದ ದೇವಿ ಪಾತ್ರದ ಏಕಾಭಿನಯ ಪಾತ್ರ ಮಾಡಿ ತಮಗೆ ಸಿಕ್ಕ ಅವಕಾಶವನ್ನು ಅದ್ಬುತವಾಗಿ ಉಪಯೋಗಿ ಕೊಂಡು, ನಟಿಸಿ ನೆರೆದಿದ್ದ ಎಲ್ಲ ಪ್ರೇಕ್ಷಕರ ಹಾಗೂ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಈ ಪಾತ್ರ ಅತ್ಯಂತ ವಿಶೇಷವಾಗಿದ್ದುದು ಕಂಡು ಬಂತು. ಕಾರ್ಯಕ್ರಮದಲ್ಲಿ ಭಜನಾ ಕಲಾವಿದರಿಂದ ಮತ್ತು ಹಲವು ಕಲಾ ತಂಡದಿಂದ ಕಲಾ ಪ್ರದರ್ಶನ ನಡೆದವು. ಕಾರ್ಯಕ್ರಮಕ್ಕೆ ಗ್ರಾಮದ, ಸುತ್ತಮುತ್ತ ಹಳ್ಳಿಯ ನೂರಾರು ಜನ ಮಹಿಳೆಯರು, ಹಿರಿಯರು, ಯುವಕರು ಭಾಗವಹಿಸಿ ಸಾತ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ, ಅಪರ ಜಿಲ್ಲಾಧಿಕಾರಿ ಶರಣಪ್ಪ ಕೊಟೆಪ್ಪಗೊಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಚುನಾವಣಾ ತಹಸೀಲ್ದಾರ ರಾದ ಸಂತೋಷಿರಾಣಿ, ಜಿಲ್ಲಾಧಿಕಾರಿ ಕಛೇರಿ ಸಹಾಯಕ ದುಂಡಪ್ಪ ಕೋಮಾರ, ತಹಸೀಲ್ದಾರರಾದ ಬಸಲಿಂಗಪ್ಪ ನಾಯಕೋಡಿ, ಸುರೇಶ ಅಂಕಲಗಿ, ಶಾಂತಗೌಡ ಬಿರಾದಾರ, ಉಮಾಕಾಂತ ಹಳ್ಳೆ, ಹುಸ್ಸೇನ್ ಸರ್ಕಾವಸ್, ಶ್ರೀನಿವಾಸ ಚಾಪೇಲ್, ವಿಜಯೇಂದ್ರ ಹುಲಿನಾಯಕ, ಅನೀತಾ ರಾಜೇಂದ್ರ ಸಜ್ಜನ್, ಪಿ.ಶಾಂತಾ, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶಭ್ಬೀರ್ ಪಟೇಲ್, ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸೋಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಈಟೆ, ಸುರೇಂದ್ರ ಬಬಲಾದ, ವಿಜಯ ಸಿಂಗ್ ಸೇರಿದಂತೆ ಕಂದಾಯ ನೌಕರರು ಉಪಸ್ಥಿತರಿದ್ದರು.