ರಾಜ್ಯದ ಹಿಂದುಳಿದ ವರ್ಗದ ಸೋಮವಂಶೀಯ ಸಹಸ್ತ್ರಾರ್ಜುನ ಕ್ಷತ್ರಿಯ ಸಮಾಜ | ನ್ಯಾಯ ಒದಗಿಸ ಲು ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ವಿಧಾನಸಭಾ ಶಾಸಕರಿಂದ ಅಧಿವೇಶನದಲ್ಲಿ ಧ್ವನಿ…!
ಬೆಳಗಾವಿ: ರಾಜ್ಯದ ಹಿಂದುಳಿದ ವರ್ಗಗಳ 2 ಎ ಪಟ್ಟಿಯಲ್ಲಿರುವ ಸೋಮವಂಶೀಯ ಸಹಸ್ತ್ರಾರ್ಜುನ ಕ್ಷತ್ರಿಯ ಸಮಾಜದ ನಿಗಮ ಮಂಡಳಿ ಸ್ಥಾಪನೆಗೆ ಸರ್ಕಾರ ಮುಂದಾಗ ಬೇಕು ಎಂದು ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ವಿಧಾನಸಭಾ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ.
ರಾಜ್ಯದಲ್ಲಿ ಈ ಸಮಾಜ ಅತಿ ಹಿಂದುಳಿದ್ದು, ಇತರೆ ಜಾತಿಗಳಿಗೆ ಸ್ಥಾಪಿಸಿದಂತೆ ಇವರಿಗೂ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಿ 200 ಕೋಟಿ ಅನುದಾನ ಮೀಸಲಿಡಬೇಕು ಎಂದು ವಿಷಯ ಪ್ರಸ್ತಾಪಿಸಿ, ಸರ್ಕಾರಕ್ಕೆ ಮನವಿ ಮಾಡಿದರು.
ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಗದಗ, ಬಳ್ಳಾರಿ, ಕಲಬುರಗಿ, ಹಾವೇರಿ, ಬಾಗಲಕೋಟೆ, ಮೈಸೂರು, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಮಾಜದವರು ವಾಸವಾಗಿದ್ದಾರೆ. ಐತಿಹಾಸಿಕ ಹಿನ್ನೆಲೆಯುಳ್ಳ ರಾಜರಾಜೇಶ್ವರ ಮಹಾರಾಜರ ವಂಶಸ್ಥರರಾದ ಸಮುದಾಯ ಆಳುವ ಸರ್ಕಾರಗಳಿಂದ ಸದಾ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ.
ಈ ಹಿಂದೆಯೂ ಸಮಾಜ ತಹಸೀಲ್ದಾರರು, ಜಿಲ್ಲಾಧಿಕಾರಿಗಳ ಮುಖಾಂತರ ಮಹಾರಾಜರ ಜಯಂತಿ ಸರ್ಕಾರದಿಂದ ಆಚರಿಸುವುದು, ನಿಗಮ ಮಂಡಳಿ ಸ್ಥಾಪನೆ ಕುರಿತು ಹಲವು ಬಾರಿ ಮನವಿಯೂ ಸಲ್ಲಿಸಲಾಗಿತ್ತು ಎನ್ನುವುದು ಸ್ಮರಣೀಯ.
ಒಟ್ಟಿನಲ್ಲಿ ನ್ಯಾಯಕ್ಕಾಗಿ ಎಸ್ ಎಸ್ ಕೆ ಸಮಾಜದ ಧ್ವನಿಯಾಗಿ ಅಧಿವೇಶನದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಗಮನ ಸೆಳೆದಿರುವುದಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
19 ರಂದು ಬೆಳಗಾವಿ ಚಲೋ: ರಾಜ್ಯ ಎಸ್ ಎಸ್ ಕೆ ಸಮಾಜ ಹಾಗೂ ಎಸ್ ಎಸ್ ಕೆ ಅಭಿವೃದ್ಧಿ ಸಮಿತಿಯಿಂದ ಸಮಾಜದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಲು ತೀರ್ಮಾನಿಸ ಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸಮಾಜದ ಮುಖಂಡರು, ಯುವಕರು ಪಾಲ್ಗೊಂಡು ಸರ್ಕಾರದ ಗಮನ ಸೆಳೆಯಲಿದ್ದಾರೆ.