ಶಹಾಪುರ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಕೆ | ಅಮಾನವೀಯ ವರ್ತನೆಗೆ ಖಂಡನೆ
ಶಹಾಪುರ: ಜಿಲ್ಲಾ ಕೇಂದ್ರದ ವಿಧಾನಸೌಧದ ಮುಂಭಾಗ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿರಿಯ ಪ್ರಗತಿಪರ ಹೋರಾಟ ಗಾರ ಚೆನ್ನಪ್ಪ ಆನೇಗುಂದಿ ಇವರ ಜೊತೆ ಅಮಾನವೀಯವಾಗಿ ಎಳೆದಾಡಿ ಬಂಧಿಸಿ, ಪ್ರತಿಭಟನೆ ಹಕ್ಕನ್ನು ಕಿತ್ತುಕೊಂಡ ಅಧಿಕಾರಿ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ ತಹಸೀಲ್ದಾರ ಅವರು ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಜಿಲ್ಲೆಯ ಶಹಾಪುರ ತಹಸೀಲ್ದಾರ ಕಚೇರಿಯಲ್ಲಿ ಸಂಘ ಅಧ್ಯಕ್ಷ ಪ್ರದೀಪ ಆಣಬಿ ನೇತೃತ್ವದ ತಂಡ ಮನವಿ ಸಲ್ಲಿಸಿದೆ.
ಜಿಲ್ಲೆಯ ಜಿಲ್ಲಾ ಕೇಂದ್ರ ಕಛೇರಿ ಮಿನಿ ವಿಧಾನಸೌಧ ಮುಂಭಾಗ ದಲ್ಲಿ ಡಿ.17 ರಂದು ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆ ಗೇರಿಸಿ ICDS ಪ್ರತ್ಯೇಕ ನಿರ್ದೇಶನಾಲಯ ಮಾಡಬೇಕೆಂದು ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಪ್ರತಿಭಟ ನೆಯ ಭಾಗಿಯಾಗಿದ್ದ ಹಿರಿಯ ಹೋರಾಟಗಾರ ಆನೆಗುಂದಿ ಅವರನ್ನು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಅವರನ್ನು ಏಕಾಏಕಿ ಎಳೆದಾಡಿ ಬಂಧಿಸಿದ್ದು ಅಮಾನವಿಯ ಕೆಲಸವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಹಿರಿಯ ಹೋರಾಟಗಾರರಿಗೆ ಅವರು ವಯಸ್ಸು ನೋಡದೇ ಈ ರೀತಿಯಲ್ಲಿ ಎಳೆದುಕೊಂಡು ವಾಹನದಲ್ಲಿ ಕೂರಿಸಿದ್ದು, ಪ್ರತಿಭಟ ನೆಯನ್ನು ಹಕ್ಕಿತ್ತುವ ಕೆಲಸ ಎಂದಿದ್ದಾರೆ.
ಪ್ರತಿಭಟನೆ ಮಾಡುವುದೇ ತಪ್ಪಾ ಎನ್ನುವಂತ ಪರಿಸ್ಥಿತಿ. ನಿನ್ನೆ ಘಟನೆಯಿಂದ ತಿಳಿದು ಬರುತ್ತಿದೆ. ಹೀಗಾಗಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷ್ಯ ಕ್ರಮ ಕೈಗೊಂಡು ಮುಂದೆ ಈ ರೀತಿಯಾಗದಂತೆ ಕ್ರಮ ವಹಿಸಲು ಮನವಿ ಮಾಡಿದ್ದಾರೆ.
ಈ ವೇಳೆ ಮೌನೇಶ ಬೀರನೂರ, ಡಿಎಸ್ ಎಸ್ ತಾಲೂಕು ಸಂಚಾಲಕ ಬಸ್ಸು ನಾಟೇಕಾರ, ಸುಭಾಷ ಪೂಜಾರಿ, ಮೊಹ್ಮದ್ ಇಸ್ಮಾಯಿಲ್, ಕೃಷ್ಣ ದೇವಿ ನಗರ, ಭೀಮನಗೌಡ, ಬಿ.ಮುಂಡಾಸ್ ಇತರರು ಇದ್ದರು.