ಕೇಂದ್ರ ಗೃಹ ಸಚಿವರ ರಾಜೀನಾಮೆಗೆ ಆಗ್ರಹ |  ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ

ಗುರುಮಠಕಲ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡುತ್ತಾ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೀಳು ಅಭಿರುಚಿಯ ಮಾತನಾಡಿ ಅವಮಾನ ಪಡೆಸಿದ್ದಾರೆ. ಹಾಗಾಗಿ ಅವರು ರಾಜೀನಾಮೆಗೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಇಲ್ಲಿನ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿ, ಅಮಿತ್ ಶಾ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ಮಂತ್ರಿಯಾಗಿ , ಸಂವಿಧಾನ ಪಿತಾ ಪರಮ ಪೂಜ್ಯ ಬಾಬಾಸಾಹೇಬ್ ಅವರ ಬಗ್ಗೆ ನಗಣ್ಯ ರೀತಿಯಲ್ಲಿ ವ್ಯಾಖ್ಯಾನಿಸಿ ಮಾತನಾಡಿರುವುದರಿಂದ ಜಗತ್ತಿನ ಎಲ್ಲಾ ಪ್ರಜಾಪ್ರಭುತ್ವ ವಾದಿ ಗಳು ಮತ್ತು ಅಂಬೇಡ್ಕರ್ ಅಭಿಮಾನಿಗಳಿಗೆ ಮಾನಸಿಕ ವಾಗಿ ಬಹಳ ನೋವುಂಟು ಮಾಡಿದ್ದಾರೆ.

ಅಲ್ಲದೇ ಇವರ ಹೇಳಿಕೆಯು ಡಾ.ಅಂಬೇಡ್ಕರ್ ವಿರೋಧಿಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಅಮಿತ್ ಶಾ ತಾನೊಬ್ಬ ಮೇಲ್ ಜಾತಿ ಅವರೆಂಬ ದುರಹಂಕಾರದಿಂದ ಇಂಥ ಹೇಳಿಕೆ ಕೊಡಲು ಸಾಧ್ಯವಾಗಿದೆ.

ಆದುದರಿಂದ ಜಗತ್ತಿನ ಎಲ್ಲಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಗೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಗುರುಮಠಕಲ್ ಅಸೆಂಬ್ಲಿ ಘಟಕ ಒತ್ತಾಯಿಸಿದೆ.

ಈ ವೇಳೆ ಮಹಾದೇವಪ್ಪ ಚಪೇಟ್ಲಾ ಅಧ್ಯಕ್ಷ ಗುರುಮಠಕಲ್ ವಿಧಾನಸಭಾ ಮತ ಕ್ಷೇತ್ರ,  ಪ್ರಕಾಶ್ ಮೌರ್ಯ ಅಸೆಂಬ್ಲಿ ಸಂಯೋಜಕ, ಸುರೇಶ್ ಬೂದೂರ್ ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ, ಕರಿಯಪ್ಪ ಯದಲಪುರ್ ಅಸೆಂಬ್ಲಿ ಕಾರ್ಯ ದರ್ಶಿ, ಶ್ರೀನಿವಾಸ್ ಚಂಡರಿಕಿ ಇನ್ನಿತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!