ಬೆಂಗಳೂರು: ಡಿಸೆಂಬರ್ 25 ಯೇಸುಕ್ರಿಸ್ತನ ಜನನ ದಿನದ ಅಂಗವಾಗಿ ರಾಜ್ಯಾದ್ಯಂತ ನಗರ ಸೇರಿದಂತೆ ವಿವಿಧೆಡೆ ಕ್ರೈಸ್ತರ ಮನೆ, ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ಭರ್ಜರಿ ಸಿದ್ಧತೆ ನಡೆದಿದೆ.

ಕ್ರಿಸ್‌ಮಸ್‌ ಆಚರಣೆಗೆ ಕೇವಲ ಒಂದು ದಿನ ಬಾಕಿ ಉಳಿದಿದ್ದು, ಈ ತಿಂಗಳ ಆರಂಭದಿಂದಲೇ ವಿಶೇಷ ಆರಾಧನೆ ಕೂಟಗಳು ನಡೆದಿವೆ.

ಕ್ರೈಸ್ತರ ಮನೆಗಳ ಮೇಲೆ ನಕ್ಷತ್ರ ಮಾದರಿಯ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಇನ್ನೂ ಯಾದಗಿರಿ ನಗರ ಸೇರಿದಂತೆ ವಿವಿಢೆಡೆ ಚರ್ಚ್‌ಗಳಲ್ಲಿ ವಿದ್ಯುತ್‌ ದೀಪಾಲಂಕಾರ ಜಗಮಗಿಸುತ್ತಿದೆ.

ಚರ್ಚ್‌ಗಳಲ್ಲಿ ವಿಶೇಷ ಅಲಂಕಾರ: ಹಬ್ಬದ ಸಂಭ್ರಮ ಹೆಚ್ಚಿಸುವ ಕ್ಯಾರಲ್‌ ಗಾಯನ ಆರಂಭಗೊಂಡು ಡಿ.22ಕ್ಕೆ ಮುಕ್ತಾಯವಾಗಿದ್ದು, ಹಳ್ಳಿಗಳಲ್ಲಿ 24ರಂದು ರಾತ್ರಿ ಕ್ರಿಸ್‌ಮಸ್‌ ಕ್ಯಾರಲ್‌ ಗಾಯನ ನಡೆಯಲಿದೆ.

ಯಾದಗಿರಿಯ ಕೇಂದ್ರ ಮೆಥೋಡಿಸ್ಟ್‌ ದೇವಾಲಯ, ತಾತಾ ಸಿಮಂಡ್ಸ್‌ ಮೆಮೊರೀಯಲ್‌ ಚರ್ಚ್‌ನಲ್ಲಿ ಬ‌ಗೆಬಗೆಯ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ದೊಡ್ಡದಾದ ನಕ್ಷತ್ರವನ್ನು ದೀಪಗಳಿಂದ ನಿರ್ಮಿಸಲಾಗಿದ್ದು, ಸಂಜೆ ವೇಳೆ ಜಗಮಗಸುತ್ತದೆ. ಚರ್ಚ್‌ಗಳಿಗೆ ವಿವಿಧ ಬಣ್ಣದ ದೀಪಗಳನ್ನು ಅಳವಡಿಸಿದ್ದು, ದಾರಿಹೋಕರನ್ನು ಕಣ್ಮನ ಸೆಳೆಯುತ್ತವೆ. ವಿವಿಧ ಚಿತ್ತಾರಗಳನ್ನು ದೀಪದಲ್ಲಿ ಅಲಂಕರಿಸಲಾಗಿದೆ.

ಚರ್ಚ್‌ನ ಒಳಗಡೆ ಬಣ್ಣ ಬಣ್ಣದ ಕಾಗದ, ಬಲೂನ್‌ ಸೇರಿ ಸಿಂಗಾರಗೊಳಿಸಲಾಗಿದೆ. ಮೆಮೊರೀಯಲ್‌ ಚರ್ಚ್‌ ಆವರಣದಲ್ಲಿ ಗೋದಲಿ ನಿರ್ಮಾಣ ಮಾಡಿ ಅದರಲ್ಲಿ ಯೇಸು ಕ್ರಿಸ್ತನ ಜನನಕ್ಕೆ ಸಂಬಂಧಿಸಿದ ಗೊಂಬೆಗಳನ್ನು ಇಡಲಾಗಿದೆ. ಸಂಜೆ ವೇಳೆ ಹಲವರು ಬಂದು ನೋಡಿ ಸಂತಸ ಪಟ್ಟು ತೆರಳುತ್ತಿದ್ದಾರೆ.

ಕೆಲ ಮನೆಗಳಲ್ಲಿ ವಾರದಿಂದಲೇ ಹಬ್ಬದ ತಿನಿಸುಗಳ ಸಿದ್ಧತೆ ಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರೈಸ್ತರಿಗೆ ಕ್ರಿಸ್‌ಮಸ್‌ ಹಬ್ಬ ದೊಡ್ಡ ಹಬ್ಬ. ಹೀಗಾಗಿ ಎಲ್ಲರೂ ಹೊಸ ಬಟ್ಟೆ ಖರೀದಿಸುವು ದರಲ್ಲಿಯೂ ಬ್ಯುಸಿ ಆಗಿದ್ದಾರೆ. ಯುವಕರು ಹೊಸ ಬಟ್ಟೆ ಖರೀದಿಯಲ್ಲಿ  ಕ್ರೈಸ್ತರು ತೊಡಗಿಸಿಕೊಂಡಿದ್ದಾರೆ. ಕ್ರಿಸ್‌ಮಸ್‌ಗೆ ಹೆಣ್ಣುಮಕ್ಕಳನ್ನು ತವರು ಮನೆಗೆ ಕರೆಸಿ ಸಂಭ್ರಮ ಪಡುತ್ತಾರೆ.

ಕ್ರಿಸ್‌ಮಸ್‌ ಟ್ರೀ, ಅಲಂಕಾರ: ಗ್ರಾಮೀಣ ಭಾಗಗಳಲ್ಲಿ , ನಗರ ಸೇರಿದಂತೆ ಹಳ್ಳಿಗಳಲ್ಲಿ ಕ್ರೈಸ್ತರ ಮನೆಗಳ ಮುಂದೆ ಕ್ರಿಸ್‌ಮಸ್‌ ಟ್ರೀ, ಬಣ್ಣದ ಅಲಂಕಾರಿಕ ವಸ್ತುಗಳಿಂದ ಮನೆಗಳಲ್ಲೂ ಸಿಂಗರಿಸಿಕೊಂಡಿದ್ದಾರೆ.

ಡಿ.1ರಂದು ಮನೆ ಮುಂದೆ ನಕ್ಷತ್ರ ಮಾದರಿಯ ನಕ್ಷತ್ರ ಮಾದರಿಯ ತೂಗು ದೀಪ ಹಾಕಿದ್ದಾರೆ. ಇನ್ನೂ ಕೆಲವರು ಮನೆ ಆವರಣ, ಗಿಡ, ಮರಗಳಿಗೆ ವಿವಿಧ ದೀಪಾಂಲಕಾರ ಮಾಡಿ ದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರ ಮನೆಗಳನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಝಗಮಗಿಸುತ್ತಿವೆ.

Spread the love

Leave a Reply

Your email address will not be published. Required fields are marked *

error: Content is protected !!