ಯಾದಗಿರಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ನೇಮಕಾತಿ

ಯಾದಗಿರಿ : ಯಾದಗಿರಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ಖಾಲಿ ಇರುವ 17 ಅಂಗನವಾಡಿ ಕಾರ್ಯಕರ್ತೆ ಹಾಗೂ 37 ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಕಳೆದ ಆಗಸ್ಟ್ 13 ರಂದು ಅಧಿಸೂಚನೆ ಹೊರಡಿಸಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.

ತಾಂತ್ರಿಕ ಸಮಸ್ಯೆ ಕಾರಣ ಅರ್ಜಿಯ ನಾಲ್ಕು ಹಂತ ಪೂರ್ಣಗೊ ಳಿಸದ ಅಭ್ಯರ್ಥಿಗಳಿಗೆ ಮಾತ್ರ ಸರ್ಕಾರದ ನಿರ್ದೇಶನದಂತೆ ಪೂರ್ಣವಾಗಿ ಅರ್ಜಿಸಲ್ಲಿಸಲು ಇದೀಗ ಅವಕಾಶ ನೀಡಲಾಗಿದೆ ಎಂದು ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷಿ ತಿಳಿಸಿದ್ದಾರೆ.

ಆನ್‌ಲೈನ್ ತಂತ್ರಾಂಶದಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ಭರ್ತಿ, ಭಾವಚಿತ್ರ ಮತ್ತು ಸಹಿ, ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು ಹಾಗೂ ಕೊನೆಯದಾಗಿ ಆಧಾರ ಸಂಖ್ಯೆ ನಮೂದಿಸಿ ಇ-ಹಸ್ತಾಕ್ಷರದೊಂದಿಗೆ ಹೀಗೆ 4 ಹಂತದಲ್ಲಿ ಅರ್ಜಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 231 ಹಾಗೂ ಸಹಾಯಕಿಯರ ಹುದ್ದೆಗೆ 109 ಅಪೂರ್ಣ ಅರ್ಜಿಗಳು ತಾಲೂಕಿನಲ್ಲಿ ಸ್ವೀಕೃತವಾಗಿದ್ದು, ಇಂತಹ ಅಭ್ಯರ್ಥಿಗಳು ಇದೇ ಡಿ.26 ರಿಂದ 2025ರ ಜನವರಿ 5ರ ಸಂಜೆ 5.30 ಗಂಟೆಯೊಳಗೆ https://karnemakaone.kar.nic.in/ abcd/ಪೂರ್ಣ ಅರ್ಜಿಸಲ್ಲಿಸಬೇಕು, ಅಂಗನವಾಡಿ ಕಾರ್ಯಕ ರ್ತೆ ಮತ್ತು ಅಂಗನವಾಡಿ ಸಹಾಯಕಿಯರ ನೇಮಕಾತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 13ಕ್ಕೆ ಕೊನೆಗೊಂಡ ಅರ್ಜಿ ಸಲ್ಲಿಸುವ ಕಾಲಾವಧಿ ಒಳಗೆ ಅರ್ಜಿ ಸಲ್ಲಿಸುವಾಗ ವೆಬ್‌ಸೈಟ್‌ನಲ್ಲಿ ಒಟ್ಟು 4 ಹಂತಗಳ ಪೈಕಿ ಕೆಲವರಿಗೆ ಮೊದಲನೇ ಹಂತದಲ್ಲಿಯೇ “ಅಪ್ಲಿಕೇಶನ್ ಸಕ್ಸಸಫುಲ್ ಅಪ್ಲೋಡೆಡ್” ಎಂಬ ಸಂದೇಶ ಮೊಬೈಲ್‌ಗೆ ಸ್ವೀಕೃತವಾಗಿರುವುದರಿಂದ ಈ ಅರ್ಜಿಗಳು ಪೂರ್ಣವಾಗಿ ಸಲ್ಲಿಕೆಯಾಗಿಲ್ಲ.

ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿ ಕಾರಿಗಳ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!