ಜಿಲ್ಲೆಯಲ್ಲಿ ತಂಬಾಕು ಸೇವನೆ ಮಾಡುವ ಯುವಕರ ಸಂಖ್ಯೆ ಹೆಚ್ಚಳಕ್ಕೆ ಡಾ. ವಿರೇಶ ಜಾಕಾ ಕಳವಳ
ಯಾದಗಿರಿ: ಯುವ ಪೀಳಿಗೆಯು ತಂಬಾಕು ಸೇವನೆ ಮಾಡು ವದು ಹೆಚ್ಚಾಗಿ ಕಂಡುಬರುತ್ತಿದ್ದು ಇದನ್ನು ಮುಕ್ತ ಮಾಡಲು ಭಾರತೀಯ ವೈದ್ಯಕೀಯ ಸಂಘವು ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ತಂಬಾಕು ಸೇವನೆ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸಲು ಡಿಸೆಂಬರ್ 30 ರಂದು ನಮ್ಮ ನಡೆ ಆರೋಗ್ಯದ ಕಡೆ ಘೋಷ ವ್ಯಾಕ್ಯದೊಂದಿಗೆ ವಾಕಥಾನ್ ಕಾಲ್ನಡಿಗೆ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಡಾ.ಚಂದ್ರಕಾಂತ ಪೂಜಾರಿ ಅವರು ತಿಳಿಸಿದ್ದಾರೆ.
ಯಾದಗಿರಿ ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಕಾಯಿಲೆ ಸೇರಿ ಅನೇಕ ಕಾಯಿಲೆಗೆ ತುತ್ತಾಗುತ್ತಿದ್ದು ತಂಬಾಕು ಮುಕ್ತ ಮಾಡಿ ನಾವೆಲ್ಲರೂ ಆರೋಗ್ಯವಂತಹ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ನಗರಸಭೆ, ಜಿಲ್ಲಾ ಪೊಲೀಸ್ ಇಲಾಖೆ,ವೈದ್ಯಕೀಯ ಕಾಲೇಜು ಹಾಗೂ ಜೆಸ್ಕಾಂ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಭಾರತೀಯ ವೈದ್ಯಕೀಯ ಸಂಘವು ನಮ್ಮ ನಡೆ ಆರೋಗ್ಯದ ಕಡೆ ಕಾಲ್ನಡಿಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಲುಂಬಿನಿ ಗಾರ್ಡನ್ ನಿಂದ 3 ಕಿಮೀ ವರಗೆ ವಾಕಥಾನ್ ಕಾಲ್ನಡಿಗೆ ಡಿಸೆಂಬರ್ 30 ರಂದು ಬೆಳಿಗ್ಗೆ 7 ಗಂಟೆಗೆ ಹಮ್ಮಿಕೊಳ್ಳ ಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ,ಎಸ್ಪಿ ಪೃತ್ವಿಕ್ ಶಂಕರ್, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಚಾಲನೆ ನೀಡಲಿದ್ದಾರೆ.ಆಸಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದರು.
ಈ ವೇಳೆ ಭಾರತೀಯ ವೈದ್ಯಕೀಯ ಸಂಘದ ಜಂಟಿ ಕಾರ್ಯ ದರ್ಶಿ ಡಾ.ವಿರೇಶ್ ಜಾಕಾ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ತಂಬಾಕು ಸೇವನೆ ಮಾಡುವ ಯುವಕರ ಸಂಖ್ಯೆ ಹೆಚ್ಚಾಗುತ್ತಿರು ವದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.
ಆರೋಗ್ಯವಂತಹ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯವಿದೆ.ತಂಬಾಕು ಸೇವನೆಯಿಂದ ಆಗುವ ದುಷ್ಪ ರಿಣಾಮ ಕುರಿತು ವಾಕಥಾನ್ ಮೂಲಕ ಜಾಗೃತಿ ಅಭಿಯಾ ನ ಹಮ್ಮಿಕೊಳ್ಳಲಾಗಿದೆ ಎಂದರು.ಹೆಚ್ಚಿನ ಪ್ರಮಾಣದಲ್ಲಿ ಈ ಕಾರ್ಯ ಕ್ರಮಕ್ಕೆ ಆಗಮಿಸಿ ವಾಕಥಾನ್ ನಲ್ಲಿ ಭಾಗವಹಿಸಬೇಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವೈದ್ಯರಾದ ಡಾ.ಭಗವಂತ ಅನ್ವರ್ ಅವರು ಮಾತನಾಡಿ, ತಂಬಾಕು ಸೇವನೆಯಿಂದ ಯುವಕರು ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದು,ಇಂದಿನ ಯುವ ಪೀಳಿಗೆಗೆ ಜಾಗೃತಿ ಮೂಡಿಸಬೇಕಿದೆ.ತಂಬಾಕು ಸೇವನೆಯಿಂದ ದೇಹದ ಎಲ್ಲಾ ಭಾಗದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.ತಂಬಾಕು ಮುಕ್ತ ಮಾಡಲು ಯುವಕರು ಆರೋಗ್ಯದ ಕಾಳಜಿ ವಹಿಸಬೇಕಿದೆ. ಹೀಗಾಗಿ ಈ. ಜಾಗೃತಿ ಅಭಿಯಾನದ ಮೂಲಕ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ಗುರುಬಸಪ್ಪ ಹೊನಗುಂಟಿ, ಡಾ.ಸುರೇಶ್ ರೆಡ್ಡಿ, ಡಾ.ವೈಜನಾಥ, ಡಾ.ರಾಘವೇಂದ್ರ ರೆಡ್ಡಿ, ಡಾ.ಸುನೀಲ್ ಇದ್ದರು.