ರೈತರ ಹಬ್ಬ | ಹೊಸ ಉಡುಪು ಧರಿಸಿ ಸಂತಸ| ಭೂಮಿ ತಾಯಿಗೆ ವಿಶೇಷ ಪೂಜೆ | ಸಾಂಪ್ರದಾಯಿಕ ಸಿಹಿ ತಿನಿಸುಗಳ ಘಮ
ಯಾದಗಿರಿ: ಗಡಿ ಜಿಲ್ಲೆಯಲ್ಲಿ ರೈತರು ಎಳ್ಳ ಅಮವಾಸ್ಯೆಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ತಾಲೂಕಿನ ಮುದ್ನಾಳ ಉಮಲಾ ನಾಯಕ, ಗುರುಮಠಕಲ್ ಸೇರಿದಂತೆ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ರೈತರು ಜಮೀನಿನಲ್ಲಿ ಸರಗ ಚೆಲ್ಲಿ ಸಡಗರದಿಂದ ಎಳ್ಳ ಅಮವಾಸ್ಯೆ ಹಬ್ಬವನ್ನು ಆಚರಿಸಲಾಯಿತು.
ಪೂಜೆ ಸಲ್ಲಿಸಿ ಸರಗ ಚೆಲ್ಲಿದ ನಂತರ ಮಾತನಾಡಿದ ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಘೂ ಸಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ, ಇದು ಅಪ್ಪಟ ದೇಸಿ ಆಹಾರ ಸಂಸ್ಕೃತಿಯ ಅಮವಾಸೆಯಾ ಗಿದ್ದು, ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಮಾಡಿ ಕೊಂಡು ಬಂದ ಸಂಪ್ರದಾಯಿಕ ಹಬ್ಬವನ್ನು ಮುಂದುವರೆಸಿ ಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ.
ರೈತರು ತನ್ನ ಜಮೀನಿನಲ್ಲಿ ಬೆಳೆದ ಬೆಳೆಗೆ ಸರಗ ಚೆಲ್ಲುವ ಮೂಲ ಕ ಭೂಮಿ ತಾಯಿಗೆ ಸ್ಮರಿಸುವ ವಿಶಿಷ್ಟವಾದ ಈ ಹಬ್ಬದಿಂ ದಾಗಿ ರೈತರು ನೋವಿನಲ್ಲೂ ಸಂತಸ ಹರ್ಷ ಪಡುತ್ತಾರೆ ಎಂದು ನುಡಿದರು.
ಈ ಹಬ್ಬದಂದು ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೇವಲ ಒಂದೇ ಬಾರಿ ಮಳೆ ಬಂದರೂ ಸಾಕು ಕೇವಲ ಇಬ್ಬನಿಗೆ ಬೆಳೆದು ನಿಲ್ಲುವ ಬೆಳೆ ಜೋಳದ ಬೆಳೆಯಾಗಿದೆ ಈ ಬೆಳೆ ಬೆಳೆಯು ವುದರಿಂದ ಜೋಳದಿಂದ ರೈತರಿಗೆ ಹೊಟ್ಟೆ ತುಂಬುತ್ತದೆ.
ವರ್ಷಪೂರ್ತಿ ರೈತರ ಮಿತ್ರರಾದ ಎತ್ತು ದನಕರುಗಳಿಗೆ ಸೊಪ್ಪೆ ಲಭಿಸುತ್ತದೆ. ಆದರೆ ಇತ್ತಿಚಿಗೆ ರೈತರು ಕೇವಲ ದುಡ್ಡಿನ ಬೆಳೆಗೆ ಒತ್ತು ಕೊಡುತ್ತಿರುವುದು ಸಾಮಾನ್ಯವಾಗಿದೆ.
ಹತ್ತಿ, ಸೂರ್ಯಪಾನ ಮುಂತಾದ ವಾಣಿಜ್ಯ ಬೆಳೆಗಳಿಗೆ ಮುಂದಾದ ಸಂದರ್ಭದಲ್ಲಿ ಈದೀಗ ಅತಿವೃಷ್ಟಿಯಲ್ಲಿ ಜೋಳ ಹೆಚ್ಚಿಗೆ ಬೆಳೆದಿರುವುದು ಕಂಡು ಬರುತ್ತಿದೆ. ಜೋಳ ಅತಿವೃಷ್ಟಿ ಯಲ್ಲಿ ರೈತನ ಕೈ ಹಿಡಿದು ರೈತನಿಗೆ ಹಬ್ಬದ ಸಂಭ್ರಮ ತಂದು ಕೊಡುವ ಬೆಳೆಯಾಗಿದೆ ಎಂದರು.
ಈ ಹಬ್ಬ ಬಂದರೆ ಸಾಕು ರೈತರು ತಮ್ಮ ಮನೆಯನ್ನು ಸ್ವಚ್ಛಗೊಳಿಸಿ ಎತ್ತು ಬಂಡಿಗಳನ್ನು ಸಿಂಗರಿಸಿ ಹೊಲಕ್ಕೆ ಹೋಗಿ ಸಂಭ್ರಮದಿಂದ ಸರಗ ಚೆಲ್ಲಿ ಭೂಮಿ ತಾಯಿಗೆ ಎಲ್ಲ ಮೂಲೆಗಳಿಗೆ ಅನ್ನದ ತುತ್ತು ಗಳನ್ನು ಚರಗ ಚೆಲ್ಲಿ ಬೆಳೆ ಸಮೃದ್ಧಿಯಾಗಿ ಬೆಳೆಯಿಲಿ ಎಂದು ಪ್ರಾರ್ಥಿಸುತ್ತಾರೆ. ತದನಂತರ ಎತ್ತುಗಳಿಗೆ ಅನ್ನದ ತುತ್ತುಗಳನ್ನು ತಿನ್ನಿಸಿ ಸಾಮೂಹಿಕ ವನಭೋಜನ ಮಾಡುತ್ತಾರೆ.
ಈ ಸಂದರ್ಭದಲ್ಲಿ ಗೋಪಾಲ, ಜೈರಾಮ, ಚಾಂಧಿ ಬಾಯಿ, ಹೆಮಲಿ ಬಾಯಿ, ಗನ್ನಿ ಬಾಯಿ, ಶಾಂತಿ ಬಾಯಿ ಪೂರಿ ಬಾಯಿ, ದೇವಿ ಬಾಯಿ, ಜಮಲಿ ಬಾಯಿ, ಚಂದ್ರು, ರಾಜು, ಸೋನಿ ಬಾಯಿ, ಕರಿ ಬಾಯಿ, ಚಾಂದಿ ಬಾಯಿ, ಗಂಗಿ ಬಾಯಿ, ಸೇರಿ ಅನೇಕರು ರೈತರು ಮಕ್ಕಳು ಉಪಸ್ಥಿತರಿದ್ದರು.