ಒಂದು ಮತಗಟ್ಟೆಗೆ ಮತದಾರರ ಸರಾಸರಿ ಸಂಖ್ಯೆ 931 | ಅತಿ ಹೆಚ್ಚು ಮತಗಟ್ಟೆ 1,62,069 ಹೊಂದಿರುವ ರಾಜ್ಯ ಉತ್ತರ ಪ್ರದೇಶ | ಕಡಿಮೆ ಸಂಖ್ಯೆ 55 ಮತಗಟ್ಟೆ ಲಕ್ಷದ್ವೀಪ ಹೊಂದಿದೆ
ನವದೆಹಲಿ: 2024 ರ ಲೋಕಸಭಾ ಚುನಾವಣೆ ಮತ್ತು ಜೊತೆ ಯಲ್ಲಿ ನೆಡೆದ 4 ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಂಕ್ಷಿಪ್ತ ದತ್ತಾಂಶವನ್ನು ಆಯೋಗ ಬಿಡುಗಡೆ ಮಾಡಿದ್ದು, ವಿಶ್ವಾದ್ಯಂತ ಶಿಕ್ಷಣ ತಜ್ಞರು, ಸಂಶೋಧಕರು, ಚುನಾವಣಾ ವೀಕ್ಷಕರು ಸೇರಿ ದಂತೆ ಮತದಾರರಿಗೆ ಇದು ಅನುಕೂಲವಾಗಬಲ್ಲದು ಎಂದು ಆಯೋಗ ತಿಳಿಸಿದೆ.
ಭಾರತದ ಚುನಾವಣಾ ಆಯೋಗವು 2024 ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ 42 ಅಂಕಿ ಅಂಶಗಳ ವರದಿಗಳು ಮತ್ತು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಸೇರಿ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ 14 ಅಂಕಿಅಂಶಗಳ ವರದಿಗಳ ಸಮಗ್ರ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ.
ಆಯೋಗದ ಈ ಸ್ವಯಂ ಪ್ರೇರಿತ ಕಾರ್ಯವು ಭಾರತದ ಚುನಾವಣಾ ವ್ಯವಸ್ಥೆಯ ಆಧಾರವಾಗಿರುವ ಸಾರ್ವಜನಿಕ ನಂಬಿ ಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದು, ವ್ಯಾಪಕವಾದ, ಸವಿವರವಾದ ದತ್ತಾಂಶ ಬಿಡುಗಡೆಯು, ಶೈಕ್ಷಣಿಕ, ಸಂಶೋಧನೆ ಮತ್ತು ಸಾರ್ವಜನಿಕರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಚುನಾವಣೆಗೆ ಸಂಬಂಧಿಸಿದ ದತ್ತಾಂಶದ ಪ್ರತಿ ವಿವರಗಳನ್ನು ಬಹಿರಂಗಪಡಿಸುವಿಕೆಯ ಮೂಲಕ ಹೆಚ್ಚಿನ ಪಾರದರ್ಶಕತೆ ಕಾಪಾಡಿಕೊಳ್ಳುವುದು ಆಯೋಗದ ನೀತಿಯ ಮುಂದುವರಿ ಕೆಯಾಗಿದೆ.
ಈ ದತ್ತಾಂಶ ವಿವರಗಳು ವಿವಿಧ ರೀತಿಯ ಮಾಹಿತಿಗಳನ್ನು ಒಳ ಗೊಂಡಿವೆ, ಉದಾಹರಣೆಗೆ ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ, ರಾಜ್ಯವಾರು ಮತದಾರರ ವಿವರಗಳು, ಮತದಾನ ಕೇಂದ್ರ ಗಳ ಸಂಖ್ಯೆ ರಾಜ್ಯ, ಲೋಕಸಭಾ ಕ್ಷೇತ್ರವಾರು ಮತದಾರರ ಮತದಾನ, ಪಕ್ಷವಾರು ಮತ ಹಂಚಿಕೆ, ಲಿಂಗ ಆಧಾರಿತ ಮತದಾನದ ನಡವಳಿಕೆ, ರಾಜ್ಯವಾರು ಮಹಿಳಾ ಮತದಾರರ ಭಾಗವಹಿಸುವಿಕೆ, ಪ್ರಾದೇಶಿಕ ವ್ಯತ್ಯಾಸಗಳು, ಕ್ಷೇತ್ರವಾರು ದತ್ತಾಂಶ ಸಾರಾಂಶ ವರದಿ, ರಾಷ್ಟ್ರೀಯ, ರಾಜ್ಯ ಪಕ್ಷಗಳು, ಆರ್‍ಯುಪಿಪಿಗಳ ಕಾರ್ಯಕ್ಷಮತೆ, ವಿಜೇತ ಅಭ್ಯರ್ಥಿಗಳ ವಿಶ್ಲೇಷಣೆ, ಕ್ಷೇತ್ರವಾರು ಸೇರಿದಂತೆ ವಿವರವಾದ ಫಲಿತಾಂಶಗಳು ಮತ್ತು ಇನ್ನೂ ಅನೇಕ ಆಳವಾದ ಒಳನೋಟಗಳು ಮತ್ತು ವಿಶ್ಲೇಷಣೆಗಳನ್ನು ನಡೆಸಲು ಸಿದ್ಧಪಡಿಸಲಾಗಿದೆ.
2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆ ದತ್ತಾಂಶಗಳ ಸವಿವರವಾದ ವರದಿ ಮತ್ತು ಅಂಕಿ-ಅಂಶಗಳನ್ನು ಭಾರತ ಚುನಾವಣಾ ಆಯೋಗದ ವೆಬ್ ಸೈಟ್ https://www.ect.gov.in/statistical-reports ಮೂಲಕ ಪಡೆದುಕೊಳ್ಳಬಹುದು.
ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಸಂಬಂಧ ಕೆಲವು ಮುಖ್ಯ ಅಂಶಗಳು
ಮತದಾರರ ವಿವರ: ಲೋಕಸಭೆ ಚುನಾವಣೆ 2019 ರಲ್ಲಿ 91,19,50,734 ಕ್ಕೆ ಹೊಲಿಸಿದರೆ, 2024 ರಲ್ಲಿ 97,97,51,847 ನೋಂದಾಯಿತ ಮತದಾರರಿದ್ದಾರೆ. 2019 ಕ್ಕಿಂತ 2024 ರಲ್ಲಿ ಒಟ್ಟು ಮತದಾರರಲ್ಲಿ ಶೇ. 7.43 ರಷ್ಟು ಹೆಚ್ಚಳವಾಗಿದೆ. 2024 ರಲ್ಲಿ 64.64 ಕೋಟಿ ಮತಗಳು ಚಲಾವ ಣೆಯಾಗಿವೆ. ಆದರೆ 2019 ರಲ್ಲಿ 61.4 ಕೋಟಿ ಮತ ಗಳು ಚಲಾವಣೆಯಾಗಿದ್ದವು. ಇವಿಎಂ ಮತ್ತು ಅಂಚೆ ಮತ ಗಳು ಸೇರಿ 64,64,20,869 ಮತಗಳು ಚಲಾವಣೆಯಾಗಿದ್ದವು ಇದರಲ್ಲಿ 64,21,39,275 ಇವಿಎಂ ಮತಗಳು ಇದರಲ್ಲಿ 32,93,61,948 ಪುರುಷರು ಮತ್ತು 31,27,64,269 ಮಹಿಳೆ ಯರು ಮತ್ತು 13,058 ತೃತೀಯ ಲಿಂಗ ಮತದಾರರು ಮತ ಚಾಲಿಯಿಸಿದ್ದಾರೆ. 42,81,594 ಅಂಚೆ ಮತ ಪತ್ರಗಳು ಬಂದಿವೆ.
ಆಸ್ಸಾಂ ರಾಜ್ಯದ ಧುಬ್ರಿ ಲೋಕಸಭಾ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಶೇ. 92.3 ರಷ್ಟು ಮತದಾನವಾಗಿದೆ. ಹಾಗೂ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಲೋಕಸಭಾ ಮತಕ್ಷೇತ್ರದಲ್ಲಿ ಅತಿ ಕಡಿಮೆ ಶೇ. 38.7 ರಷ್ಟು ಮತದಾನವಾಗಿದೆ. ಇಲ್ಲಿ 2019 ರ ಲೋಕ ಸಭಾ ಚುನಾವಣೆಯಲ್ಲಿ ಶೇ. 14.4 ರಷ್ಟು ಮತದಾನವಾಗಿತ್ತು. ದೇಶದಲ್ಲಿ 11 ಲೋಕಸಭಾ ಮತಕ್ಷೇತ್ರದಲ್ಲಿ ಶೇ. 50 ಕ್ಕಿಂತ ಕಡಿಮೆ ಮತದಾನವಾಗಿದೆ.
2024 ರಲ್ಲಿ 63,71,839 (ಶೇ.0.99) ನೋಟಾ ಮತಗಳಾಗಿವೆ. ಇದು 2019 ರಲ್ಲಿ ಶೇ. 1.06 ರಷ್ಟಿತ್ತು. ಶೇ. 27.09 ರಷ್ಟು ಲಿಂಗ ಪರಿವರ್ತಿತ ಮತದಾರರು ಮತದಾನ ಮಾಡಿದ್ದಾರೆ.
ಮತದಾನ ಕೇಂದ್ರಗಳು: 2019 ರಲ್ಲಿ 10,37,848 ಕ್ಕೆ ಹೋಲಿಸಿದರೆ 2024 ರಲ್ಲಿ 10,52,664 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 40 ಮತಗಟ್ಟೆಗಳಲ್ಲಿ ಮಾತ್ರ ಮರುಮತದಾನ ಮಾಡಲಾಗಿದೆ. ಒಂದು ಮತಗಟ್ಟೆಗೆ ಮತದಾರರ ಸರಾಸರಿ ಸಂಖ್ಯೆ, 931 ಆಗಿದೆ. ಅತಿ ಹೆಚ್ಚು ಮತಗಟ್ಟೆ 1,62,069 ಹೊಂದಿರುವ ರಾಜ್ಯ ಉತ್ತರ ಪ್ರದೇಶವಾಗಿದ್ದು, ಕಡಿಮೆ ಸಂಖ್ಯೆ 55 ಮತಗಟ್ಟೆ ಹೊಂದಿರುವ ಲಕ್ಷದ್ವೀಪ ಕೇಂದ್ರಾ ಡಳಿತ ಪ್ರದೇಶವಾಗಿದೆ.
1000 ಗಿಂತ ಕಡಿಮೆ ಮತಗಟ್ಟೆ ಇರುವ ಸಂಸದೀಯ ಕ್ಷೇತ್ರಗಳ ಸಂಖ್ಯೆ, 11 ಆಗಿದೆ. 3000 ಗಿಂತ ಹೆಚ್ಚಿನ ಮತಗಟ್ಟೆ ಇರುವ ಸಂಸದೀಯ ಕ್ಷೇತ್ರಗಳ ಸಂಖ್ಯೆ, 3 ಆಗಿದ್ದು, 2019 ಕ್ಕೆ ಹೋಲಿಸಿ ದರೆ 2024 ರಲ್ಲಿ ಅತಿ ಹೆಚ್ಚು ಹೊಸ ಮತದಾನ ಕೇಂದ್ರಗಳನ್ನು ಹೊಂದಿರುವ ಬಿಹಾರ (4739) ಮತ್ತು ಪಶ್ಚಿಮ ಬಂಗಾಳ ರಾಜ್ಯ (1731) ಗಳಾಗಿವೆ.
ನಾಮನಿರ್ದೇಶನಗಳು: 2019 ರಲ್ಲಿ ಸಲ್ಲಿಕೆಯಾಗಿದ್ದ 11,692 ನಾಮಪತ್ರಗಳಿಗೆ ಹೋಲಿಸಿದರೆ 2024 ರಲ್ಲಿ 12,459 ನಾಮಪತ್ರಗಳು ಸಲ್ಲಿಕೆಯಾಗಿವೆ. ದೇಶದಲ್ಲಿಯೇ ಅತಿ ಹೆಚ್ಚು ನಾಮಪತ್ರಗಳನ್ನು ತೆಲಂಗಾಣ ಜಿಲ್ಲೆಯ ಮಲ್ಕಾಜ್‍ಗಿರಿ ಲೋಕ ಸಭಾ ಮತಕ್ಷೇತ್ರದಲ್ಲಿ 114 ನಾಮಪತ್ರಗಳು ಸ್ವೀಕೃತವಾಗಿದ್ದರೆ. ಆಸ್ಸಾಂ ರಾಜ್ಯದ ದಿಬ್ರುಗಡ್ ಲೋಕಸಭಾ ಕ್ಷೇತ್ರದಲ್ಲಿ 3 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮಹಿಳಾ ಶಕ್ತಿ: ನೋಂದಾಯಿತ ಮತದಾರರು: 2024 ರಲ್ಲಿ ಒಟ್ಟು 97,97,51,847 ಮತದಾರರಿದ್ದು, ಇದರಲ್ಲಿ ಮಹಿಳಾ ಮತದಾರರಿದ್ದರು. 2019 ರಲ್ಲಿ ಶೇ. 48.09 (43,85,37,911) ರಷ್ಟು ಇದ್ದ ಒಟ್ಟು ಮಹಿಳಾ ಮತದಾರರಿಗೆ ಹೋಲಿಸಿದರೆ 2024 ರಲ್ಲಿ ಶೇ. 48.62 (47,63,11,240) ಮಹಿಳಾ ಮತದಾರರಿದ್ದರು. 2024 ರಲ್ಲಿ ಅತಿ ಹೆಚ್ಚು ಮಹಿಳಾ ಮತದಾರರನ್ನು ಪುದುಚೇರಿ (53.03%), ಕೇರಳ (51.56%) ರಾಜ್ಯಗಳು ಹೊಂದಿವೆ. 2024 ರಲ್ಲಿ, ಪ್ರತಿ 1000 ಪುರುಷ ಮತದಾರರಿಗೆ ಮಹಿಳಾ ಮತದಾರರ ಸಂಖ್ಯೆ ಗರಿಷ್ಠ ಅಂದರೆ 946 ಆಗಿದ್ದು, ಅದು 2019 ರಲ್ಲಿ ಪ್ರತಿ ಸಾವಿರ ಪುರುಷರಿಗೆ 926 ಮಹಿಳಾ ಮತದಾರರಾಗಿತ್ತು.
ಮಹಿಳಾ ಮತದಾನ: ಶೇ. 65.55 ರಷ್ಟಿರುವ ಪುರುಷ ಮತ ದಾರರಿಗೆ ಹೋಲಿಸಿದರೆ ಶೇ. 65.78 ಮಹಿಳಾ ಮತದಾರರು 2024 ರಲ್ಲಿ (ಸೂರತ್ ಹೊರತುಪಡಿಸಿ) ಮತ ಚಲಾಯಿಸಿದ್ದಾರೆ. 2019 ರಂತೆಯೇ 2024 ರಲ್ಲಿಯೂ ಮಹಿಳೆಯರ ಸಂಖ್ಯೆಯು ಪುರುಷರಿಗಿಂತ ಹೆಚ್ಚಾಗಿದೆ. ಸಾರ್ವತ್ರಿಕ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಇದು ಎರಡನೇ ಬಾರಿ.
ಮಹಿಳಾ ಮತದಾರರಲ್ಲಿ ಅತಿ ಹೆಚ್ಚು ವಿಟಿಆರ್ ಹೊಂದಿರುವ ಸಂಸದೀಯ ಕ್ಷೇತ್ರ ಶೇ. 92.17 ರಷ್ಟು ಮಹಿಳಾ ಮತದಾನ ದೊಂದಿಗೆ ಧುಬಿ (ಅಸ್ಸಾಂ), ಶೇ. 87.57 ರೊಂದಿಗೆ ತಮ್ಮುಕ್ (ಪಶ್ಚಿಮ ಬಂಗಾಳ) ಸ್ಥಾನ ಪಡೆದಿದೆ.
ಮಹಿಳಾ ಅಭ್ಯರ್ಥಿಗಳು: 2019 ರಲ್ಲಿ 726 ಮಹಿಳಾ ಸ್ಪರ್ಧಿ ಅಭ್ಯರ್ಥಿಗಳಿಗೆ ಹೋಲಿಸಿದರೆ, 2024 ರಲ್ಲಿ ಮಹಿಳಾ ಸ್ಪರ್ಧಿ ಅಭ್ಯರ್ಥಿಗಳ ಸಂಖ್ಯೆ 800 ಆಗಿತ್ತು. ಅತಿ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ ಆಗಿತ್ತು.
ಎಲ್ಲರನ್ನೂ ಒಳಗೊಳ್ಳುವ ಚುನಾವಣೆಗಳು: 2019 ರಲ್ಲಿ 39,075 ರಷ್ಟಿದ್ದ ತೃತೀಯ ಲಿಂಗ ಮತದಾರರನ್ನು 2024 ರಲ್ಲಿ 48,272 ಹೊಸದಾಗಿ ತೃತೀಯ ಲಿಂಗ ಮತದಾರರನ್ನು ನೋಂದಾಯಿಸಲಾಗಿದೆ. ಐದು ವರ್ಷಗಳ ಅವಧಿಯಲ್ಲಿ ಶೇ. 23.5 ರಷ್ಟು ಹೆಚ್ಚಳವಾಗಿದೆ. ಅತಿ ಹೆಚ್ಚು ನೋಂದಾಯಿತ ತೃತೀಯ ಲಿಂಗ ಮತದಾರರನ್ನು (8,467) ಹೊಂದಿರುವ ರಾಜ್ಯ ತಮಿಳುನಾಡು ಆಗಿದೆ.
2019 ರಲ್ಲಿ 61,67,482 ಇದ್ದ ನೋಂದಾಯಿತ ದಿವ್ಯಾಂಗ ಮತದಾರರ ಸಂಖ್ಯೆ 2024 ರಲ್ಲಿ 90,28,696 ಕ್ಕೆ ಆಗಿದೆ. 2019 ರಲ್ಲಿದ್ದ ಶೇ. 14.64 ಕ್ಕೆ ಹೋಲಿಸಿದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಶೇ. 27.09 ತೃತೀಯ ಲಿಂಗ ಮತದಾರರು ಮತ ಚಲಾಯಿಸಿದ್ದಾರೆ. ಇದು ಬಹುತೇಕ ದ್ವಿಗುಣವಾಗಿದೆ. 2019 ರಲ್ಲಿ 99,844 ನೋಂದಾಯಿತ ಸಾಗರೋತ್ತರ ಮತ ದಾರರಿಗೆ ಹೋಲಿಸಿದರೆ 2024 ರಲ್ಲಿ 1,19,374 (ಪುರುಷ: 1,06,411; ಮಹಿಳೆ: 12,950; ತೃತೀಯ ಲಿಂಗ:13) ನೋಂದಾಯಿತ ಸಾಗರೋತ್ತರ ಮತದಾರರು ಆಗಿದ್ದಾರೆ.
ಫಲಿತಾಂಶಗಳು: 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಒಟ್ಟು 6 ರಾಷ್ಟ್ರೀಯ ಪಕ್ಷಗಳು ಭಾಗವಹಿಸಿದ್ದವು. ಈ 6 ಪಕ್ಷಗಳ ಒಟ್ಟು ಮತ ಹಂಚಿಕೆಯು ಒಟ್ಟು ಮಾನ್ಯ ಮತಗಳ ಶೇ. 63.35 ರಷ್ಟು ಆಗಿತ್ತು. 2019 ರಲ್ಲಿ 6,923 ಅಭ್ಯರ್ಥಿಗಳಿಗೆ ಹೋಲಿಸಿದರೆ 2024 ರ ಚುನಾವಣೆಯಲ್ಲಿ 7,190 ಅಭ್ಯರ್ಥಿಗಳು ಠೇವಣಿಗಳನ್ನು ಕಳೆದುಕೊಂಡಿದ್ದಾರೆ. ಮತ್ತು ಗುಜರಾತ್ ರಾಜ್ಯದ ಸೂರತ್ (ಒಂದು) ಲೋಕಸಭಾ ಕ್ಷೇತ್ರಕ್ಕೆ ಅವಿರೋಧ ಆಯ್ಕೆಯಾಗಿತ್ತು.
3,921 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 7 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. ಅದರಲ್ಲಿ 3,905 ಸ್ವತಂತ್ರ ಅಭ್ಯರ್ಥಿಗಳು ಠೇವಣಿ ಕಳದುಕೊಂಡಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತ ಹಂಚಿಕೆ ಒಟ್ಟು ಮಾನ್ಯ ಮತಗಳಲ್ಲಿ ಶೇ. 2.79 ಆಗಿತ್ತು. ಇದರಲ್ಲಿ 279 ಸ್ವತಂತ್ರ ಮಹಿಳಾ ಅಭ್ಯರ್ಥಿಗಳಿದ್ದರು ಎನ್ನುವ ಮಾಹಿತಿಯನ್ನು ಆಯೋಗ ಪ್ರಕಟಿಸಿದೆ.