ಗುತ್ತಿಗೆದಾರ ಸಚಿನ್ ಪ್ರಕರಣ : ಗುರುಮಠಕಲ್ ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿ
ಗುರುಮಠಕಲ್ : ವಿನಾ ಕಾರಣ ಪ್ರಿಯಾಂಕ್ ಖರ್ಗೆ ಅವರ ಹೆಸರು ತಂದು ಬಿಜೆಪಿ ಅವರು ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಗುತ್ತಿಗೆದಾರ ಸಚಿನ್ ಪ್ರಕರಣಕ್ಕೆ ಸಚಿವರಿಗೆ ಯಾವುದೇ ಸಂಬಂ ಧವಿಲ್ಲ ಎಂದು ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ದಲಿತ ನಾಯಕರು ಮುಂದೆ ಬರಬಾರದು ಎಂದು ಈ ರೀತಿ ಮಾಡುತ್ತಿದ್ದಾರಾ ಗೊತ್ತಾಗುತ್ತಿಲ್ಲ. ಸ್ವತಾ ಸಚಿವ ಪ್ರಿಯಾಂಕ ಖರ್ಗೆ ಅವರೇ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ರಾಜು ಕಪನೂರ ಅವರು ಸಚಿನ್ ಖಾತೆಗೆ ಹಣ ಹಾಕಿದ್ದಾರೆ. ಅವರು ಹಣವನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಅದು ಅವರ ವೈಯಕ್ತಿಕ ಎಂದು ಹೇಳಿದರು.
ಸಚಿವ ಖರ್ಗೆ ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಖರ್ಗೆ ಜೊತೆ ಇಡೀ ದಲಿತ ಸಮುದಾಯಯಿದೆ. ನಮ್ಮ ನಾಯಕರ ಮೇಲೆ ಸುಳ್ಳು ಅಪವಾದ ಮಾಡಿದರೆ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪುರಸಭೆ ಸದಸ್ಯ ಖಾಜಾ ಮೈನೋದ್ದಿನ್ ಮಾತನಾಡಿ, ಯಾವ ಆಧಾರದ ಮೇಲೆ ರಾಜಿನಾಮೆ ಕೇಳುತ್ತಿದ್ದಾರೆ ಗೊತ್ತಿಲ್ಲ. ನಮ್ಮ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಸಹಿಸಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದರು.
ಈ ವೇಳೆ ಕಿಸಾನ್ ಘಟಕ ಅಧ್ಯಕ್ಷ ಆನಂದ ಯದ್ಲಾಪುರ, ಚಾಂದ ಪಾಷಾ, ಮಾಣಿಕ ಮುಕಡಿ, ಸಾಯಬಣ್ಣ ಪೂಜಾರಿ, ಅಬ್ದುಲ್ ಖಾದರ್ ಪುಟಪಾಕ, ಫಯಾಜ್ ಅಹ್ಮದ್, ಭೀಮಶಪ್ಪ ಶನಿವಾರಂ, ಬಾಲಪ್ಪ ಕಾಕಲವಾರ, ರವಿ ಎಂ.ಟಿ.ಪಲ್ಲಿ ಇದ್ದರು.