ಯಾದಗಿರಿ : ಅಕ್ಟೋಬರ್ 30 ರ ಬುಧವಾರ ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ಚೈತನ್ಯ ಇಂಡಿಯಾ ಫಿನ್ ಕ್ರೇಡಿಟ್ ಪ್ರೈ.ಲಿ ಯಾದಗಿರಿ ಬ್ರಾöಚ್‌ನಲ್ಲಿ ನೇರ ಸಂದರ್ಶನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಆಯೋಜಿಸಲಾಗಿದೆ ಎಂದು ಉದ್ಯೋಗಾಧಿಕಾರಿ ಪ್ರಭಾಕರ್ ತಿಳಿಸಿದ್ದಾರೆ.

ಚೈತನ್ಯ ಇಂಡಿಯಾ ಫೀನ್ ಕ್ರೇಡಿಟ್ ಪ್ರೈ.ಲಿ ಯಾದಗಿರಿ ಕಸ್ಟಮರ್ ರಿಲೇಷನ್‌ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗೆ 50 ಹುದ್ದೆಗಳು ಖಾಲಿ ಇದ್ದು, ಹುದ್ದೆಗೆ ಅರ್ಹತೆ ಪಿಯುಸಿ ಅಥವಾ ಮೇಲ್ಪಟ್ಟು ಇರಬೇಕು.

ಯಾದಗಿರಿ, ಶಹಾಪೂರು, ಸುರಪೂರ, ಗುರುಮಠಕಲ್, ಸೈದಾಪೂರ, ಕೆಂಭಾವಿ, ಜೇವರ್ಗಿ. ಯಡ್ರಾಮಿ, ಹುಣಸಗಿ, ದೇವದುರ್ಗ ಉದ್ಯೋಗ ಸ್ಥಳವಾಗಿದೆ. ಪುರುಷ ಅಭ್ಯರ್ಥಿಗಳು ಮಾತ್ರ ಭಾಗವಹಿಸಬಹುದು.

ಹುದ್ದೆಗಳಿಗೆ 18 ರಿಂದ 30 ವರ್ಷ ಒಳಗಿನ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ವ್ಯಕ್ತಿ ಪರಿಚಯ ರಿಸ್ಯೂಮ್ ದೊಂದಿಗೆ ಹಾಜರಾಗಬೇಕು, ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲ್ಲ.

ನೇರ ಸಂದರ್ಶನ ನಡೆಯುವ ಸ್ಥಳ ಚೈತನ್ಯ ಇಂಡಿಯಾ ಫೀನ್ ಕ್ರೇಡಿಟ್ ಪ್ರೈವೇಟ್ ಲಿಮಿಟೆಡ್, ಗಂಜ್ ಏರಿಯಾ ಮುಖ್ಯ ರಸ್ತೆ ರಾಯಲ್ ಎನ್ಪೀಲ್ಡ್ ಶೋರೂಂ 2ನೇ ಮಹಡಿ ಯಾದಗಿರಿ. ದೂ.ಸಂ.08473253718 ಮೊ.ನಂ.8050970267, 9448566765. ಕಛೇರಿ ಸಮಯದಲ್ಲಿ ಸಂಪರ್ಕಿಸಿ.

ಹೆಚ್ಚಿನ ಮಾಹಿತಿಗಾಗಿ ಚಿತ್ತಾಪೂರು ರೋಡ್ ಮಿನಿ ವಿಧಾನ ಸೌಧ ಜಿಲ್ಲಾಡಳಿತ ಭವನ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬಿ ಬ್ಲಾಕ್ ರೂ.ನಂ.ಬಿ1, ಬಿ2, 2ನೇ ಮಹಡಿ ಯಾದಗಿರಿ ಮೊ.ನಂ.9448566765 ಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!