ಪಾಠ, ಆಟ ಎರಡಲ್ಲಿಯೂ ಪ್ರತಿಭೆ ಮೆರೆಯಲಿ : ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್

ಯಾದಗಿರಿ: ಇಂದು ಪಠ್ಯದಷ್ಠೆ ಪ್ರಾಮುಖ್ಯತೆ ಕ್ರೀಡೆಗೂ ಇದೆ, ಕಾರಣ ವಿದ್ಯಾರ್ಥಿಗಳು ಓದು ಮತ್ತು ಆಟ ಎರಡು ಸಮ,ಸಮವಾಗಿ ಸ್ವೀಕರಿಸಿ ಭಾಗವಹಿಸಬೇಕೆಂದು ಶಾಸಕ‌ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

ನಗರದ ಡಾನ್ ಬೋಸ್ಕೋ ಪದವಿ ಪೂರ್ವ ಕಾಲೇಜು ಆವರಣ ದಲ್ಲಿ ಶನಿವಾರ ಸಂಜೆ ನಡೆದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು, ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಯಾದಗಿರಿ ಜಿಲ್ಲೆ ಮತ್ತು ಜಿಲ್ಲಾ ಪ್ರಾಚಾರ್ಯರ ಸಂಘ ಮತ್ತು ಜಿಲ್ಲಾ ಉಪನ್ಯಾಸಕರ ಸಂಘ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಯಾದಗಿರಿ (ರಿ) ಮತ್ತು ಡಾನ್ ಬಾಸ್ಕೋ ಪದವಿ ಪೂರ್ವ ಕಾಲೇಜು, ಯಾದಗಿರಿ ಇವರ ಸಂಯುಕ್ತಾಶ್ರ ಯದಲ್ಲಿ 2024-25 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಟೆನ್ನಿಕಾಯ್ಡ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ಸಿಯಾದರೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬಹುದು ಮತ್ತು ದೇಶದ ವಿವಿಧ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ನೌಕರಿ ಪಡೆಯಬಹು ದು. ಕಾರಣ ಮಕ್ಕಳನ್ನು ಕಡ್ಡಾಯವಾಗಿ ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹಿಸಬೇಕೆಂದು ಪಾಲಕರಿಗೆ ಮತ್ತು ಶಿಕ್ಷಕರಿಗೆ ಶಾಸಕರು‌ ಕಿವಿ ಮಾತು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪ ನಿರ್ದೇಶಕರಾದ ಚನಬಸಪ್ಪ ಕುಳಗೇರಿ ಮಾತನಾಡಿ, ಹಿಂದುಳಿದ ಜಿಲ್ಲೆಯಲ್ಲಿ ಅನೇಕ ಕ್ರೀಡಾಪ್ರತಿಭೆಗಳಿವೆ. ಅವುಗಳಿಗೆ ಅವಕಾಶ ಬೇಕು. ಅದನ್ನು ನಾವು ಅಂದರೇ ಶಿಕ್ಷಣ ಇಲಾಖೆಯವರು ಮಾಡಬೇಕೆಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವಿನಾಯಕ ಪಾಟೀಲ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯ ಕುಮಾರ್ , ಪ್ರಾಂಶುಪಾಲ ಸಂಘದ ಜಿಲ್ಲಾಧ್ಯಕ್ಷ ರುದ್ರಗೌಡ ಪಾಟೀಲ್, ರಾಜ್ಯ ಉಪಾನಾಸ್ಯಸಕ ಸಂಘದ ಅಧ್ಯಕ್ಷ ಮಹಾಮತೇಶ ಕಲಾಲ್, ಪ್ರಾಂಶುಪಾಲ ಸಂಘದ ರಾಜ್ಯ ಉಪಾಧ್ಯಕ್ಷ ಸಂಕರೆಡ್ಡಿ, ಮಹ್ಮದ್ ಗೌಸ್, ಕೋಚ್ ರಾಧಾ ಕೃಷ್ಣ ಸುಭ್ರಮಂಣ್ಯ, ಪ್ರಾಂಶುಪಾಲ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ರಾಹುಲ್, ಪ್ರಾಂಶುಪಾಲ ಮಲ್ಲಿಕಾರ್ಜುನ ಹೊಸಮನಿ, ಜಿಲ್ಲಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ರಾಘವೇಂದ್ರ ರೆಡ್ಡಿ ಪಾಟೀಲ್, ಉಪಾನಾಸ್ಯಸಕ ಬಿಸಲಪ್ಪ ಕಟ್ಟಿಮನಿ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!