ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ, ಸ್ತ್ರೀ ಬದುಕಿನ ಸವಾಲುಗಳು ಹಾಗೂ ಅವುಗಳನ್ನು ಎದುರಿಸುವ ವಿಧಾನಗಳು ವಿಶೇಷ ಕಾರ್ಯಾಗಾರ

ಯಾದಗಿರಿ: ಮಹಿಳೆಯರು ಜೀವನದಲ್ಲಿ ಎದುರಾಗುವ ಸಮಸ್ಯೆ ಗಳನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಹೇಳಿದರು.

ಲಯನ್ಸ್ ಕ್ಲಬ್ ಯಾದಗಿರಿ ಹಾಗೂ ಆಶೀರ್ವಾದ ಆಸ್ಪತ್ರೆ ಯಾದಗಿರಿ ಇವುಗಳ ಸಹಯೋಗದೊಂದಿಗೆ ನಗರದ ಎನ್.ವಿ.ಎಂ.ಹೋಟೆಲ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ, ಸ್ತ್ರೀ ಬದುಕಿನ ಸವಾಲುಗಳು ಹಾಗೂ ಅವುಗಳನ್ನು ಎದುರಿಸುವ ವಿಧಾನಗಳು ಎಂಬ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಕೌಟುಂಬಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ಸಕಾರಾತ್ಮಕವಾಗಿ ಬದಲಾ ಯಿಸಿಕೊಳ್ಳುವ ಮೂಲಕ ತಮ್ಮ ಬೆಳವಣಿಗೆಗೆ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ಯಶಸ್ವಿ ಜೀವನ ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಸ್ವಾಮಿ ವಿವೇಕಾನಂದ ಯುವ ಜಾಗೃತಿ ಕೇಂದ್ರದ ನಿರ್ದೇಶಕ, ವ್ಯಕ್ತಿತ್ವ ವಿಕಸನ ತರಬೇತುದಾರ, ರಮೇಶ ಉಮರಾಣಿ ಮಾತನಾಡಿ, ಸ್ತ್ರೀ ಶಕ್ತಿ ಸ್ವರೂಪಿಣಿಯಾಗಿದ್ದು, ಅವಳು ಪುರುಷರ ಸಮಾನಳಲ್ಲ ಬದಲಾಗಿ ಅವನಿಗಿಂತ ಎತ್ತರದ ಸ್ಥಾನದಲ್ಲಿ ಇರುವವಳು.

ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ, ಸ್ನೇಹಿತೆ ಯಾಗಿ ಹಲವು ಪಾತ್ರಗಳನ್ನು ನಿರ್ವಹಿಸುವ ಸ್ತ್ರೀ ದಿನನಿತ್ಯದ ಜೀವನದಲ್ಲಿ ಹಲವಾರು ಜವಾಬ್ದಾರಿಗಳನ್ನು ಹೊರುವ ಸಾಮ ರ್ಥ್ಯವನ್ನು ಸಹಜವಾಗಿ ಬೆಳೆಸಿಕೊಂಡಿರುತ್ತಾಳೆ.ಅದು ಅವಳಿಗೆ ದೈವದತ್ತವಾಗಿ ಬಂದಿರುವ ವರವಾಗಿದೆ ಎಂದರು.

ಮಹಿಳೆಯರ ಸಾಮರ್ಥ್ಯಕ್ಕೆ ಸ್ವಲ್ಪ ಮಟ್ಟಿಗೆ ಜ್ಞಾನದ ಸಾಣೆ ಹಿಡಿ ದರೆ ಅವಳು ಜಗತ್ತೇ ನಿಬ್ಬೆರಗಾಗುವ ಸಾಧನೆ ಮಾಡಬಲ್ಲಳು. ಸಮಾಜ ಮಹಳೆಯರ ಬಗ್ಗೆ ಅನುಕಂಪ ತೋರದೇ ಅವಕಾಶ ಗಳನ್ನು ಒದಗಿಸಬೇಕು ಎಂದರು.

ಪಾಶ್ಚಾತ್ಯ ದೇಶಗಳಲ್ಲಿ ಹೆಣ್ಣು ಭೋಗದ ವಸ್ತುವೆಂದು ಕಂಡರೆ ಭಾರತೀಯ ಪರಂಪರೆಯಲ್ಲಿ ಹೆಣ್ಣನ್ನು ದೈವಿಶಕ್ತಿಯ ಸ್ವರೂಪ ದಲ್ಲಿ ಪೂಜಿಸುವ,ಆರಾಧಿಸುವ,ಗೌರವಿಸುವ ಪದ್ಧತಿಯಿದೆ. ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸುವ ಗುರುತರ ಹೊಣೆಗಾರಿಕೆ ಮಹಿಳೆಯರ ಮೇಲಿದೆ ಎಂದರು.

ಹಿರಿಯ ವೈದ್ಯರಾದ ನೀಲಮ್ಮ ಎಸ್ ರೆಡ್ಡಿ ಯಲ್ಹೇರಿ ಮಾತನಾಡಿ ಮುಂಬರುವ ದಿನಗಳಲ್ಲಿ ಯಾದಗಿರಿಯ ಅಭಿವೃದ್ಧಿಗೆ ಶ್ರಮಿಸುವ ಪ್ರಜ್ಞಾವಂತ ಮಹಿಳೆಯರ ತಂಡ ಕಟ್ಟುವ ಯೋಚನೆಯಿದ್ದು, ಮಹಿಳೆಯರು ಸಹಕರಿಸಲು ಮನವಿ ಮಾಡಿದರು.

ಆಶೀರ್ವಾದ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎಂ.ಪಾಟೀಲ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವೇದಿಕೆಯ ಮೇಲೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹನುಮಾನದಾಸ ಮುಂದಡಾ,ಕೋಶಾಧ್ಯಕ್ಷ ಮಲ್ಲಣ್ಣಗೌಡ ಹಳಿಮನಿ ಕೌಳೂರ ಇದ್ದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಸಿದ್ಧರಾಜರೆಡ್ಡಿ ಸ್ವಾಗತಿಸಿ ವಂದಿಸಿದರು. ಸಮಾರಂಭದಲ್ಲಿ ಅನ್ನಪೂರ್ಣ ಪಾಟೀಲ, ಅರುಣಾ ಎಸ್.ರೆಡ್ಡಿ, ಶಶಿಕಲಾ ಕ್ಯಾತ್ನಾಳ, ಡಾ.ಜಯಲಕ್ಷ್ಮಿ ಮುದ್ನಾಳ, ಭೀಮಾವತಿ ಚನ್ನಾರೆಡ್ಡಿ ತುನ್ನೂರ, ಭ್ರಮಾ ಗೋಸಾಮಿ, ಸೋಮನಾಥ ಜೈನ್, ಡಾ.ಶಿವಪುತ್ರರೆಡ್ಡಿ ಚಟ್ನಳ್ಳಿ, ಸಿದ್ರಾಮರೆಡ್ಡಿ ತಿಪ್ಪರೆಡ್ಡಿ, ವೆಂಕಟರೆಡ್ಡಿ ತಂಗಡಗಿ, ಶರಣರೆಡ್ಡಿ ಹತ್ತಿಕುಣಿ, ಬಸನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!