ಗುರುಮಠಕಲ್ ನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ | ಪತ್ರಿಕಾ ಭವನದಲ್ಲಿ ಸಮಿತಿ ಅಧ್ಯಕ್ಷ ವಿಜಯಕುಮಾರ ನೀರೆಟಿ ಪತ್ರಿಕಾಗೋಷ್ಠಿ
ಗುರುಮಠಕಲ್ : ಜ.21 ರಂದು ಗುರುಮಠಕಲ್ ಕೋಲಿ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ಮಾಡಲಾಗುತ್ತಿದೆ ಎಂದು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ನೀರೆಟಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.21 ರಂದು ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಿಂದ ಮಲ್ಲಯ್ಯಕಟ್ಟ, ನಿರೇಟಿ ಮೊಹಲ್ಲಾ, ವೀರಭದ್ರೇಶ್ವರ ದೇವಸ್ಥಾನ, ನಾಣಾಪುರ ಬಡಾವಣೆಯ ಚೌಡಿ ಕಟ್ಟ, ಪಡೆಗೆಗೇರಿ, ಬಿಡಕಿ ಕಟ್ಟ, ಪೊಲೀಸ ಠಾಣೆ ಮಾರ್ಗವಾಗಿ ಗಂಗಾ ಪರಮೇಶ್ವರಿ ವೃತ್ತದಿಂದ ಗಾಂಧಿ ಮೈದಾನದವರೆಗೆ ವಿವಿಧ ಮಂಗಳ ವಾಧ್ಯ ಗಳು ಮತ್ತು ಪೂರ್ಣಕುಂಬ ಕಳಸಗಳೊಂದಿಗೆ ಭಾವಚಿತ್ರದ ಮರೆವಣಿಗೆ ನಡೆಸಲಾಗುತ್ತದೆ ಎಂದು ಹೇಳಿದರು.
ಗಾಂಧಿ ಮೈದಾನದಲ್ಲಿ ಸಂಜೆ 6 ಗಂಟೆಯಿಂದ ಜಯಂತಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಹಿನ್ನಲೆ ವಿದ್ಯಾರ್ಥಿ ಗಳಿಗೆ ವಿವಿಧ ಪ್ರೌಢ ಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ನೃತ್ಯ ಸ್ಪರ್ಧೆಗಳು ಏರ್ಪಡಿಸಿದ್ದು, ಪ್ರಥಮ ಬಹುಮಾನ 10 ಸಾವಿರ ಮತ್ತು ದ್ವಿತೀಯ ಬಹುಮಾನ 5 ಸಾವಿರ ನಗದು ಬಹುಮಾನ ವಿತರಿಸಲಾಗುವುದು.
ಕಾರ್ಯಕ್ರಮದಲ್ಲಿ ಕಲಬುರಗಿ ನಗರದ ಸುಮಧುರ ಮೆಲೋಡಿ ಸ್ ಗ್ರಾಂಡ್ ಶೋ ಜರುಗಲಿದೆ. ಸುತ್ತಲಿನ ಗ್ರಾಮಗಳಿಂದೆ್ಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಕೋರಿದರು.
ಈ ವೇಳೆ ಭೀಮಾಶಂಕರ ಪಡಿಗೆ, ಭೀಮಪ್ಪ ಕೋರೆಬಾನ್, ಶೇಶಪ್ಪ ಬುರ್ಜು, ಸಂಜು ಬುರಗಪಲ್ಲಿ, ಲಾಲಪ್ಪ ಲಡ್ಡಿ ಸೇರಿದಂತೆ ಇತರರಿದ್ದರು.