ಮಹರ್ಷಿ ವಾಲ್ಮೀಕಿ ವಿವಿಯ| 30 ವಿದ್ಯಾರ್ಥಿಗಳು ಕೆ- ಸೆಟ್ ಅರ್ಹತೆ
ರಾಯಚೂರು : ಕಳೆದ 2024ರ ನವೆಂಬರ್ ತಿಂಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ (ಕೆ-ಸೆಟ್) ರಾಯಚೂರು ವಿಶ್ವವಿದ್ಯಾಲಯದ ಹಾಲಿ ಮತ್ತು ಹಳೆಯ ವಿದ್ಯಾರ್ಥಿಗಳನ್ನೊಳ ಗೊಂಡಂತೆ ಒಟ್ಟೂ 30 ವಿದ್ಯಾರ್ಥಿಗಳು ಅರ್ಹತೆಯನ್ನು ಗಳಿಸುವ ಮೂಲಕ ಗಮನವನ್ನು ಸೆಳೆದಿದ್ದಾರೆ.
ನೂತನವಾಗಿರುವ ರಾಯಚೂರು ವಿಶ್ವವಿದ್ಯಾಲಯ ಅಧಿಕೃತ ವಾಗಿ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿ ಮೂರು ವರ್ಷ ಗತಿಸಿ ನಾಲ್ಕನೇ ವರ್ಷ ಚಾಲ್ತಿಯಲ್ಲಿದ್ದು, ಈವರೆಗೆ ಎರಡು ಬ್ಯಾಚುಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಹೊರಬಂದಿರುತ್ತಾರೆ.
ವಿಶ್ವವಿದ್ಯಾಲಯದ ಕೃಷ್ಣತುಂಗಾ ಮುಖ್ಯ ಆವರಣದಲ್ಲಿ ನಾಲ್ಕು ವೃತ್ತಿಪರ ಕೋರ್ಸ್‌ಗಳು ಸೇರಿದಂತೆ ಒಟ್ಟೂ 20 ವಿಭಾಗಗಳಿದ್ದು, ಪ್ರಥಮ ಮತ್ತು ದ್ವೀತಿಯ ವರ್ಷದ ಸ್ನಾತಕೋತ್ತರ ಪದವಿಯನ್ನು ಒಳಗೊಂಡಂತೆ ಪ್ರಸ್ತುತ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಕರ್ನಾಟಕ ರಾಜ್ಯದಲ್ಲಿನ ವಿವಿಗಳು ಹಾಗೂ ಪದವಿ/ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹತೆ ಹೊಂದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆ- ಸೆಟ್ ಪರೀಕ್ಷೆ ನಡೆಸುತ್ತದೆ. ಇದನ್ನು ಶೈಕ್ಷಣಿಕ ವಲಯದಲ್ಲಿ ಪ್ರಮುಖ ಪರೀಕ್ಷೆಯಾಗಿ ಪರಿಗಣಿಸಲಾಗುತ್ತದೆ.
ಇಂತಹ ಕಠಿಣ ಪರೀಕ್ಷೆಯಲ್ಲಿ ಕಳೆದ ವರ್ಷ ರಾಯಚೂರು ವಿಶ್ವ ವಿದ್ಯಾಲಯದ ಸುಮಾರು 20 ವಿದ್ಯಾರ್ಥಿಗಳು ಅರ್ಹತೆ ಪಡೆದಿ ದ್ದರು ಮತ್ತು ಈ ವರ್ಷ 30 ವಿದ್ಯಾರ್ಥಿಗಳು ಅರ್ಹತೆ ಗಳಿಸಿರು ವುದು ಹೆಮ್ಮೆಯ ಸಂಗತಿಯಾಗಿದೆ. ಆ ಮೂಲಕ ವಿಶ್ವವಿದ್ಯಾಲ ಯದ ಹುಮ್ಮಸ್ಸನ್ನು ಇಮ್ಮಡಿಯಾಗಿಸಿದಂತಾಗಿದೆ.
ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಭೀಮಮ್ಮ ಕಲ್ಮನಿ, ರಮೇಶ್, ವೀರೇಶ್.ಪಿ. ಎನ್ ಹಾಗೂ ಹಳೆಯ ವಿದ್ಯಾರ್ಥಿಗಳಾದ ಗುರುಬಸಮ್ಮ, ಇಂದ್ರಜಾ, ದಾನಪ್ಪ, ವಿಶ್ವನಾಥ್, ಮಲ್ಲಿಕಾರ್ಜುನ್, ವಿಮಲಾ, ಅನ್ನಪೂರ್ಣಾ, ಇತಿಹಾಸ ಅಧ್ಯಯನ ವಿಭಾಗದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾದ ರವೀಂದ್ರ, ಹಳೆಯ ವಿದ್ಯಾರ್ಥಿಗ ಳಾದ ಚೆನ್ನಪ್ಪ, ರಾಮಕುಮಾರ, ನಾಗರತ್ನ, ಆದಪ್ಪ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳಾದ ಮಂಜುನಾಥ್ ಪಟ್ಟೇದ್, ಸೋಮನಾ ಥ ಭಂಡಾರಿ, ಶಿವಕುಮಾರ್, ರಾಜು, ಸಮಾಜಕಾರ್ಯ ಅಧ್ಯಯನ ವಿಭಾಗದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ರೇಣುಕಾ ಹಾಗೂ ಭೀಮೇಶ್, ಕನ್ನಡ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳಾದ ಮಂಜುನಾಥ.ಬಿ.ಕನಸಾವಿ, ಯಲ್ಲಪ್ಪ.ಎನ್, ಸಸ್ಯಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿ ಪನ್ನಗವೇಣಿ (ಪ್ರಸ್ತುತ ಇದೇ ವಿವಿಯಲ್ಲಿ ಉಪನ್ಯಾಸಕಿ), ಕೇಶವರೆಡ್ಡಿ.ಎಸ್, ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿ ಅಮರೇಶ್ ರಾಥೋಟ್, ರಸಾಯನಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿ ಅನೀಲ್ ಚಂದ್ರ (ಪ್ರಸ್ತುತ ಇದೇ ವಿವಿಯಲ್ಲಿ ಉಪನ್ಯಾಸಕ), ಉರ್ದು ಮತ್ತು ಪರ್ಶಿಯನ್ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿನಿ ಸಾವಿತ್ರಿ ಕಟ್ನಳ್ಳಿ (ಪ್ರಸ್ತುತ ಇದೇ ವಿವಿಯಲ್ಲಿ ಉಪನ್ಯಾಸಕಿ), ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳಾದ ಸಬಾರೆಡ್ಡಿ ಹಾಗೂ ಮಲ್ಲಯ್ಯ ಸ್ವಾಮಿ ಅರ್ಹತೆಯನ್ನು ಗಳಿಸಿದ್ದು, ವಿದ್ಯಾರ್ಥಿಗಳ ಈ ಸಾಧನೆಗೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ (ಹಂಗಾಮಿ) ಡಾ. ಸುಯಮೀಂದ್ರ ಕುಲಕರ್ಣಿ ಸೇರಿದಂತೆ ಕುಲಸಚಿವರಾದ ಡಾ. ಶಂಕರ್ ವಣಿಕ್ಯಾಳ್ (ಕೆಎಎಸ್ ಆಯ್ಕೆ ಶ್ರೇಣಿ), ಮೌಲ್ಯಮಾಪನ ಕುಲಸಚಿವರಾದ ಪ್ರೊ. ಯರಿಸ್ವಾಮಿ.ಎಂ ಅವರು ಸೇರಿದಂತೆ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು ಹಾಗೂ ಬೋಧಕರು ಅಭಿನಂದನೆಗಳನ್ನು ಕೋರಿದ್ದಾರೆ.