ಶಾಸಕ ಶರಣಗೌಡ ಕಂದಕೂರ ಉದ್ಘಾಟನೆ |ಗಡಿಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ

ಗುರುಮಠಕಲ್: ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯಪಟ್ಟರು.

ಪಟ್ಟಣದ ಹೊರವಲಯದ ಎಸ್ ಎಲ್ ಟಿ ಪಬ್ಲಿಕ್ ಸ್ಕೂಲ್ ನಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ವಸ್ತು ಪ್ರದರ್ಶನ ಮಕ್ಕಳ ಮುಂದಿನ ಓದಿಗೆ ಅನುಕೂಲ ವಾಗಲಿದೆ ಎಂದರು. ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಾರ್ಯ ಶಿಕ್ಷಣ ಸಂಸ್ಥೆಗಳ ಮೂಲಕ ಆಗಲಿ ಎಂದರು.

ಬಳಿಕ ಅಗ್ನಿ 3 ಉಪಗ್ರಹ ಉಡಾವಣೆ ಮಾದರಿಯನ್ನು ವೀಕ್ಷಿಸಿ ವಿವರಣೆ ಪಡೆದು ಮಕ್ಕಳ ವಿವರಣೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಹಲವು ಮಾದರಿಗಳನ್ನು ಗಣ್ಯರೊಟ್ಟಿಗೆ ವೀಕ್ಷಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಗೌಡ ಪಾಟೀಲ್ ಮಾತನಾಡಿ, ಪಠ್ಯ ಚಟುವಟಿಕೆಗಳಷ್ಟು ಇತರೆ ಚಟುವಟಿಕೆಗಳಿಗೆ ಮಹತ್ವ ಕೊಡಬೇಕು ಎಂದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ವಸ್ತು ಪ್ರದರ್ಶನ ಅಗತ್ಯವಾಗಿದೆ ಎಂದರು. ವಿಜ್ಞಾನದ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಎಸ್ ಎಲ್ ಟಿ ಸಮೂಹ ಸಂಸ್ಥೆಯ ಸಂಸ್ಥಾಪಕ ನರೇಂದ್ರ ರಾಠೋಡ, ಬಸರೆಡ್ಡಿ ಎಂ.ಟಿ.ಪಲ್ಲಿ, ರವೀಂದ್ರ ಚವಾಣ, ಮಹಾತ್ಮ ಗಾಂಧಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ನಜೀಮ್ ಅಹ್ಮದ್ , ತಹೇರಾ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಶೈಖ್ ಅನ್ವರ್, ಸಿಇಓ ರವೀಂದ್ರ ಚವಾಣ, ಸಿಆರ್ಪಿ ಬಾಲಪ್ಪ ಸಿರಿಗೆಂ, ನಾರಾಯಣ ರೆಡ್ಡಿ, ನದೀಮ್ ಅಹ್ಮದ್,ತೌಫೀಕ್ ಅಹ್ಮದ್, ಆಸೀಫಾ, ಪ್ರಾಂಶುಪಾಲ ಭೀಮಪ್ಪ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!