ಗುರುಮಠಕಲ್ ನಲ್ಲಿ ಭೂ ಸುರಕ್ಷಾ ಯೋಜನೆ ಲೋಕಾರ್ಪಣೆ | ಕೈ ಗುರುತು ಬಳಕೆಗೆ ಶಾಸಕ ಶರಣಗೌಡ ಕಂದಕೂರ ತೀವ್ರ ಖಂಡನೆ

ಗುರುಮಠಕಲ್ : ತಾಲ್ಲೂಕ ತಹಸೀಲ್ದಾರ್ ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯ ಡಿಜಿಟಲೀಕರಣ ಕೇಂದ್ರವನ್ನು ಗುರುವಾರ ಶಾಸಕ ಶರಣಗೌಡ ಕಂದಕೂರ ಲೋಕಾರ್ಪಣೆ ಮಾಡಿದರು.

ಭೂ ಸುರಕ್ಷಾ ಯೋಜನೆ ಜಾರಿಯಾಗಿದ್ದು ರೈತರಿಗೆ ಅನುಕೂಲ ವಾಗಿರುವುದಕ್ಕೆ ಕಂದಾಯ ಸಚಿವ ರಾದ ಕೃಷ್ಣ ಭೈರವ ಗೌಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಯೋಜನೆಯ ಪೋಸ್ಟರ್ ಗಳಲ್ಲಿ ಪಕ್ಷದ ‘ಹಸ್ತ’ ಗುರುತು ಬಳಸಿದಕ್ಕೆ ನನ್ನ ವಿರೋಧವಿದ್ದು ಖಂಡಿಸುವುದಾಗಿ ಅವರು ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆ ಗೆ ಚಾಲನೆ ನೀಡಿ ಮಾತನಾಡಿ, ಉತ್ತಮ ಯೋಜನೆಗೆ ಪಕ್ಷ ಚಿಹ್ನೆ ಬಳಸಿರುವ ಪೋಸ್ಟ ರ್ ಗಳನ್ನು ಎಲ್ಲಿಯೂ ಅಂಟಿಸಬಾರದು ಮತ್ತು ಯಾರಿಗೂ ಕೊಡಬಾರದು ಎಂದು ತಹಸೀಲ್ದಾರ್ ಅವರಿಗೆ ತಾಕೀತು ಮಾಡಿದರು.

ಪೋಸ್ಟರ್ ಗಳಲ್ಲಿ ಪಕ್ಷದ ಚಿಹ್ನೆ ಬಳಸಿರುವುದು ಇದರ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ವೇದಿಕೆ ಮೇಲಿಂದಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಭೂ ಸುರಕ್ಷಾ ಯೋಜನೆ ಗೆ ಬೇರೆ ಪಕ್ಷ ದ ಚಿಹ್ನೆ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇದರ ಕುರಿತು ಲಿಖಿತ ವಾಗಿ ದೂರು ನೀಡುತ್ತೇನೆ, ನಿಮ್ಮ ಹಂತದಲ್ಲಿಯೂ ಸರಕಾರ ಗಮನ ಹರಿಸುವಂತೆ ಪ್ರಯತ್ನಿಸಬೇಕು ಎಂದು ಶಾಸಕ ಕಂದಕೂರ್ ಒತ್ತಾಯಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯು ಭೂ ಸುರಕ್ಷಾ ಯೋಜನೆ ಆಗಿದೆ. ಇಂದು ರಾಜ್ಯದಾದ್ಯಂತ ಭೂ ಸುರಕ್ಷಾ ಯೋಜನೆ ಲೋಕಾರ್ಪಣೆ ಆಗಿದೆ. ತಾಲ್ಲೂಕುಗಳ ಭೂ ದಾಖಲೆಗಳು ಡಿಜಿಟಲೀಕರಣ ಮಾಡಲಾಗುತ್ತದೆ. ಹಳೆಯ ದುಸ್ಥಿತಿಯಲ್ಲಿ ಇರುವ ಭೂ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸರಿಪಡಿಸುವುದೇ ಭೂ ಸುರಕ್ಷಾ ಯೋಜನೆ ಆಗಿದೆ. ದಾಖಲೆಗಳ ಕೊಠಡಿಯಲ್ಲಿ ಜನರಿಗೆ ಭೂ ದಾಖಲೆಗಳ ನ್ನು ವಿತರಣೆ ಮಾಡುವ ಕೆಲಸ ಮಾಡಲಾಗುವುದು. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭೂ ದಾಖಲೆಗಳು ಸಹ ಡಿಜಿಟಲೀಕರಣ ಮಾಡಿ ರಕ್ಷಿಸಲಾಗಿದೆ ಎಂದರು.

ಭೂ ದಾಖಲೆ ಪಡೆಯಲು ಜನರು ಕಚೇರಿಗೆ ಅಲೆಯುವಂತಿಲ್ಲ. ನೇರವಾಗಿ ಜನರಿಗೆ ಸಿಗುತ್ತದೆ. ಜನರನ್ನು ವಿನಾಃಕಾರಣ ಕಚೇರಿಗೆ ಅಲೆದಾಡಿಸುವುದನ್ನು ಅಧಿಕಾರಿಗಳು, ಸಿಬ್ಬಂದಿ ತಪ್ಪಿಸಬೇಕು. ಅಗತ್ಯ ಭೂ ದಾಖಲೆಗಳು ಜನರಿಗೆ ವಿತರಣೆ ಮಾಡಬೇಕು ಎಂದರು.

ತಹಸೀಲ್ದಾರ್ ಕಚೇರಿಗೆ ಜನರು ಕಷ್ಟದಲ್ಲಿ ಬರುತ್ತಾರೆ. ಅವರು ಸುಲಭವಾಗಿ ಹಾಗು ತ್ವರಿತವಾಗಿ ಕೆಲಸ ಮಾಡಿಕೊಡಬೇಕು. ಭ್ರಷ್ಟಾಚಾರ ದಲ್ಲಿ ಸಿಬ್ಬಂದಿಗಳು ತೋಡಗಬಾರದು ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ತಹಸೀಲ್ದಾರ್ ಶರಣು ಬಿರಾದಾರ್, ಗ್ರೇಡ್ 2  ತಹಸೀಲ್ದಾರ್ ನರಸಿಂಹ ಸ್ವಾಮಿ, ಹಿರಿಯ ಮುಖಂಡರಾದ ಜಿ. ತಮ್ಮಣ್ಣ, ಬಸಣ್ಣ ದೇವರಲ್ಲಿ, ನವಾಜ್ ರೆಡ್ಡಿ, ಜ್ಞಾನೇಶ್ವರ ರೆಡ್ಡಿ, ಮಲ್ಲಿಕಾರ್ಜುನ ಅರುಣಿ, ಎಲ್ಲಪ್ಪ ಭೂತಾ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!