ತಿಂಥಣಿ ಮೌನೇಶ್ವರ ದೇವಸ್ಥಾನದ ಜಾತ್ರೆ | ಅವಶ್ಯಕ ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ. ಸೂಚನೆ
ಯಾದಗಿರಿ: ಫೆಬ್ರುವರಿ 8 ರಿಂದ 13 ರವರೆಗೆ ನಡೆಯಲಿರುವ ತಿಂಥನಿ ಶ್ರೀ ಮೌನೇಶ್ವರ ದೇವಸ್ಥಾನ ಇದರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಿಂಥನಿ ಮೌನೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಿದ್ಧತೆಗಳ ಕುರಿತಂತೆ ಪರಿಶೀಲನಾ ಸಭೆ ನಡೆಸಿದ ಅವರು, ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಸುರಕ್ಷತಾ ಕ್ರಮಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಸೂಚನೆ ನೀಡಿದರು.
ನದಿ ದಂಡೆ ಯಲ್ಲಿ ನ ರಸ್ತೆ ದುರಸ್ತಿಗೆ ಸಂಬಂಧಿಸಿ ದಂತೆ ಅಂದಾ ಜು ಪಟ್ಟಿ ತಕ್ಷಣ ಸಲ್ಲಿಸಬೇಕು. ನದಿ ವ್ಯಾಪ್ತಿ ಯಿಂದ 100 ಮೀಟರ್ ದೂರದವರೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನದಿಯಲ್ಲಿ ಕಸ,ಬಟ್ಟೆ ಚೆಲ್ಲದಂತೆ ನಿಗಾವಹಿ ಸಬೇಕು. ಜಾತ್ರೆಯ ಸಂದರ್ಭದಲ್ಲಿ ಮದ್ಯ,ಮಾಂಸ ಮಾರಾಟ ನಿಷೇಧ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಾತ್ರೆಯ ಸಂದರ್ಭದಲ್ಲಿ ನಿರಂತರ ಸ್ವಚ್ಛತಾ ಕಾರ್ಯ ನಡೆಯ ಬೇಕು. ವಾರಕ್ಕೆರಡು ಬಾರಿ ಕಸ ವಿಲೆವಾರಿ ಆಗುವ ಜೊತೆಗೆ ಸ್ವಚ್ಛತೆಯ ಮತ್ತು ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಿದರು.
ದೇವಸ್ಥಾನದ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಆಗಬೇಕು. ಕಮುನಿಟಿ ಸಾನಿಟರಿ ಸಂಕೀರ್ಣ ದುರಸ್ತಿ ,ಯಾತ್ರಿ ನಿವಾಸ ದುರಸ್ತಿ, ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿ ಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಆರ್.ಓ ಪ್ಲಾಂಟ್ ದುರಸ್ತಿಗೆ, ದೇವಸ್ಥಾನ ಮತ್ತು ಸುತ್ತಮುತ್ತ ಲಿನ ಜಲ ಸಂಪನ್ಮೂಲ ವನ್ನು ಕುಡಿಯಲು ಯೋಗ್ಯವಾಗಿದೆ ಯೇ ಎಂಬುದರ ಬಗ್ಗೆ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ವಿಶೇಷವಾಗಿ ತಿಂಥಣಿ ಗ್ರಾಮದ ವ್ಯಾಪ್ತಿಯಲ್ಲಿಯೂ ಕೊಳವೆ ಬಾವಿಗಳ ನೀರಿನ ಪರೀಕ್ಷೆ, ನದಿ ನೀರಿನ ಪರೀಕ್ಷೆ ಮಾಡುವಂತೆ ಸೂಚನೆ ನೀಡಿದರು.
ತಹಶೀಲ್ದಾರರು ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು, ಸೂಕ್ತ ಮೇಲ್ವಿಚಾರಣೆ ನಡೆಸಬೇಕು. ಪಿಡಿಓ ಗಳ ಮೇಲೆ ಅವಲಂಬನೆ ಆಗದೆ ಖುದ್ದಾಗಿ ಎಚ್ಚರಿಕೆ ವಹಿಸಬೇಕು. ನೀರು ಯೋಗ್ಯ ಇಲ್ಲದಿದ್ದಲ್ಲಿ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಅವಶ್ಯಕ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಸೂಚನೆ ನೀಡಿದ ಅವರು ಜಾತ್ರೆಯ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಸಮರ್ಪಕವಾಗಿ ಔಷದಿ ಇಟ್ಟುಕೊಳ್ಳಬೇಕು. ಅಂಬ್ಯುಲೆನ್ಸ್ ಸೌಲಭ್ಯ ಇರಬೇಕು. ಸಾರ್ವಜನಿಕರಿಗೆ ಸಮರ್ಪಕ ಬಸ್ ಗಳ ವ್ಯವಸ್ಥೆ , ಅಗ್ನಿಶಾಮಕ ಇಲಾಖೆ ವಾಹನ ವ್ಯವಸ್ಥೆ , ಸಿ.ಸಿ .ಟಿ.ವಿ ಗಳ ವ್ಯವಸ್ಥೆ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇರಬೇಕು ಎಂದು ಸೂಚಿಸಿ ದೇವಸ್ಥಾನ ಸಮಿತಿ ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಭಕ್ತಾದಿಗಳಿಗೆ ನೆರವಾಗುವಂತೆ ತಿಳಿಸಿ, ಹಿಂದೂ- ಮುಸ್ಲಿಂ ಭಾವೈಕ್ಯತೆಯ ದೇವಸ್ಥಾನ ಇದಾಗಿರುವುದರಿಂದ ಸಕಲ ಕ್ರಮಗಳನ್ನು ಕೈಗೊಳ್ಳ ಲು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ್, ಸುರಪುರ ಡಿವೈಎಸ್ಪಿ ಜಾವೇದ್, ಧರ್ಮದತ್ತಿ ಇಲಾಖೆ ತಹಶೀಲ್ದಾರ್ ಪಿ.ಶಾಂತಮ್ಮ, ಜಿ.ಪಂ. ಯೋಜನಾ ನಿರ್ದೇಶಕರು ದೇವರಮನಿ ಉಪಸ್ಥಿತರಿದ್ದರು.