ಕೋಟಗೇರಾ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಯುವಕರ ದಿನ | ಮಕ್ಕಳ ಕವನ ಸಂಕಲನ ಬಿಡುಗಡೆ ಸಮಾರಂಭ

ಗುರುಮಠಕಲ್: ಯಾದಗಿರಿ ತಾಲೂಕಿನ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಕೋಟಗೇರಾದಲ್ಲಿ ಆಧ್ಯಾತ್ಮಿಕ ದಿವ್ಯಪುರುಷ ವಿಶ್ವಚೇತನ ವಿವೇಕಾನಂದರವರ ಜನ್ಮ ದಿನಾಚರಣೆಯನ್ನು ಹಾಗೂ ಐದು, ಆರು ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಸ್ವತ ರಚನೆ ಮಾಡಿರುವ ಸಾಹಿತ್ಯ ಸಂಭ್ರಮ 2 ಎಂಬ ಕವನ ಸಂಕಲನವನ್ನು ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಹನುಮಾ ನಾಯಕ್ ಅವರು ವಹಿಸಿ ಮಾತನಾಡಿ, ಸ್ವತ ಮಕ್ಕಳು ರಚನೆ ಮಾಡಿರುವ ಕವನಗಳನ್ನು ನೋಡಿ ಅವರ ಹಾಗೂ ಅಪಾರವಾದ ಪಾಂಡಿತ್ಯವನ್ನು ನೋಡಿ ಹರ್ಷವನ್ನು ವ್ಯಕ್ತಪಡಿಸಿ ದರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕವನಗಳನ್ನ ಬರೆಯಲು ಮಕ್ಕಳಿಗೆ ಪ್ರೋತ್ಸಾದಾಯಕ ಮಾತುಗಳಾಡಿದರು.

ಮುಖ್ಯ ಅತಿಥಿಗಳ ಸ್ಥಾನವನ್ನು ರಾಮಪೂರ ಜಿ ಶಾಲೆಯ ಪ್ರಭಾರಿ ಮುಖ್ಯ ಗುರು ಹಾಗೂ ಯುವ ಸಾಹಿತಿ ಮಲ್ಲಿಕಾರ್ಜುನ್ ವಹಿಸಿ ಮಾತನಾಡಿ, 19 ಜನ ಬಾಲ ಸಾಹಿತಿಗಳು ರಚನೆ ಮಾಡಿರುವ ಪ್ರತಿಯೊಬ್ಬರ ಒಂದೊಂದು ಕವನಗಳನ್ನು ವಿಶ್ಲೇಷಿಸಿ ಕವನಗಳ ನ್ನು ರಚನೆ ಮಾಡುವ ಸರಳ ಮಾರ್ಗಗಳನ್ನು ತೋರಿಸಿದರು.

ಕವನಗಳು ಹೇಗೆ ಹುಟ್ಟುತ್ತವೆ ಕವನಗಳಲ್ಲಿ ಅಡಗಿರುವ ಭಾವನೆ ಗಳು ಹಾಗೂ ಕವನಗಳನ್ನು ರಚನೆ ಮಾಡುವ ಬಗೆಯನ್ನು ದಾರಾ ಬೇಂದ್ರೆಯವರ ನೀ ಹಿಂಗ ನೋಡಬೇಡ ನನ್ನ ಎಂಬ ಕವನ ವನ್ನು ಪ್ರಸ್ತಾಪ ಮಾಡುವುದರ ಮೂಲಕ ಅರ್ಥೈಸಿದರು.

ಶ್ರೀಮತಿ ಶರಣಮ್ಮ  ಮಾತನಾಡಿ, ವಿವೇಕಾನಂದರ ಜೀವನದಲ್ಲಿ ನಡೆದ ಹಲವಾರು ಘಟನೆಗಳನ್ನು ಸವಿಸ್ತಾರವಾಗಿ ವಿವರಿಸಿ ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಶಿಕ್ಷಕಿ ಕುಮಾರಿ ದೇವೇಂದ್ರಮ್ಮ, ತಾವು ಸ್ವತಹ ರಚಿಸಿರುವ ಕವನ ಗಳ ಮೂಲಕ ಯುವಕರ ದಿನವನ್ನು ಉದ್ದೇಶಿಸಿ ಮಾತನಾಡಿ ದರು. ಮುದ್ದಪ್ಪ ಸರ್ ಅವರು ಇಂಗ್ಲೀಷ್ ಭಾಷೆಯಲ್ಲಿ ಯುವ ದಿನವನ್ನು ಕುರಿತು ಮಾತನಾಡಿದರು.

ಶಿಕ್ಷಕ ಈರಪ್ಪ ಅವರು, ವಿವೇಕಾನಂದರ ಜೀವನದ ಬಗ್ಗೆ ಮಾತನಾಡಿದರು. ಸಹ ಶಿಕ್ಷಕರಾದ ಮಲ್ಲಿಕಾರ್ಜುನ್  ನಿರೂಪಿಸಿ ದರು. ಸುನಿಲ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಶಾಂತಕುಮಾರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಸಮಾಧಾನ,ಕುಮಾರಿ ಗೌರಮ್ಮ, ಕುಮಾರಿ ಹೊನ್ನಮ್ಮ, ಶ್ರೀಮತಿ ಆಫ್ರಿನ್ ಬೇಗಂ ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!