ರಜಪೂತ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ
ಕಲಬುರಗಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ. ಅಜಯಸಿಂಗ್ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ರವರ ಧರ್ಮ ಪತ್ನಿ ಪದ್ಮಾವತಿ ಧರ್ಮಸಿಂಗ್ ಅವರ ಅಮೃತಹಸ್ತದಿಂದ 2025ರ ವರ್ಷದ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಅವರು ಮಂಗಳವಾರ ಶ್ರೀ ವೀರ ಶಿರೋಮಣಿ ರಜಪೂತ ಸರ್ಕಾರಿ ಮತ್ತು ಅರೆ ಸರಕಾರಿ ನೌಕರರ ಸಂಘ ಕಲಬುರಗಿ ವತಿಯಿಂದ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರ ನಿವಾಸದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಕಲಬುರಗಿ ರಜಪೂತ ಮಹಿಳಾ ಆದ್ಯಕ್ಷೆ ಶ್ರೀಮತಿ ಅನಿತಾ ಸದ್ಧಿವಲ್, ಶ್ರೀ ವೀರ್ ಶಿರೋಮಣಿ ರಜಪೂತ ಸರ್ಕಾರಿ ಮತ್ತು ಅರೆ ಸರಕಾರಿ ನೌಕರರ ಸಂಘ ಕಲಬುರ್ಗಿ ಜಿಲ್ಲಾಧ್ಯಕ್ಷ ಶ್ರೀ ಶಿವರಾಜ್ ತಿವಾರಿ, ಸಂಘದ ಗೌರವಾಧ್ಯಕ್ಷ ಡಾ. ಸಂತೋಷ್ ಸಿಂಗ್ ಬಯಾಸ್, ಸಮಾಜದ ಉಪಾಧ್ಯಕ್ಷರಾದ ಶ್ರೀ ಬಿರ್ಬಲ್ ಸಿಂಗ್, ಸಂಘದ ಖಜಾಚಿ ಶ್ರೀಮತಿ ಅನಪೂರ್ಣ ಅ. ತಿವಾರಿ ಸೇರಿದಂತೆ ಸಂಘದ ಸದಸ್ಯರು, ಪದಾಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.