ಜಿಲ್ಲಾಡಳಿತದಿಂದ ವೇಮನ ಜಯಂತಿ| ಶಾಸಕ ಚನ್ನಾರಡ್ಡಿ ಪಾಟೀಲ ಅಭಿಪ್ರಾಯ
ಯಾದಗಿರಿ: ಮಹಾಯೋಗಿ ವೇಮನ ಭಾರತ ಕಂಡ ಖ್ಯಾತ ಸಂತರು, ದಾರ್ಶನಿಕರೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಬಣ್ಣಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಭಾನು ವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಮಹಾಯೊಗಿ ವೇಮನ ಜಯಂ ತ್ಸೋವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯ ದಲ್ಲಿ ಮಹಾಯೋಗಿ ವೇಮನ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೇಮನರು ತಾನು ಕಂಡ, ಅನುಭವಿಸಿದ ಸತ್ಯವನ್ನು ಆಡು ಭಾಷೆಯಲ್ಲಿ ಸಣ್ಣ,ಸಣ್ಣ ಪದ್ಯಗಳ ಮೂಲಕ ಜನತೆಗೆ ತಿಳಿಸಿ, ಜಾಗೃತಿ ಮೂಡಿಸಿದ್ದರು, ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದು ಶಾಸಕರು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಜ್ಯೋತಿಲತಾ ತಡಿಬಿಡಿ, ಮಹಾಯೋಗಿ ವೇಮನರು ಭಾರತೀಯ ದಾರ್ಶನಿಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಂತಕವಿ. ಕ್ರಾಂತಿಕಾರಿ ಚಿಂತಕ, ಮೂಡನಂಬಿಕೆ ವಿರೋಧಿ, ಸಮಾಜ ಸುಧಾರಕ ಎಂದು ಹೇಳಿದರು.
ಯೂಡಾ ಅಧ್ಯಕ್ಷರಾದ ವಿನಾಯಕ ಮಾಲಿ ಪಾಟೀಲ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉತ್ತರಾದೇವಿ ಮಠಪತಿ, ವಕಿಲರಾದ ಬವರಾಜ ಪಾಟೀಲ್ ಕ್ಯಾತನಾಳ, ರೆಡ್ಡಿ ಸಮಾಜದ ಉಪಾಧ್ಯಕ್ಷರಾದ ಶರಣಗೌಡ ಪೊಲೀಸ್ ಪಾಟೀಲ್ ಯಡ್ಡಳ್ಳಿ, ಸಾಹೆಬರೆಡ್ಡಿ ಬಿ ದೇಶಪಾಂಡೆ, ನಿಂಗಾರೆಡ್ಡಿ ಯಡ್ಡಳ್ಳಿ ಇದ್ದರು. ಡಾ. ಸಿದ್ದರಾಜರೆಡ್ಡಿ ಸ್ವಾಗತಿಸಿ ನಿರೂಪಿಸಿದರು.