ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಜನ್ಮ ದಿನ | ಅಭಿಮಾನಿ ಬಳಗದಿಂದ ಸಾಮಾಜಿಕ ಕಾರ್ಯ | 105 ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ವಿತರಣೆ

ಗುರುಮಠಕಲ್: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು 58 ನೇ ಜನ್ಮ ದಿನದ ಹಿನ್ನೆಲೆಯಲ್ಲಿ  ಅಭಿಮಾನಿಗಳ ಬಳಗದ ಅಧ್ಯಕ್ಷ ನರಸಿಂಹಲು ಗಂಗನೋಳ್ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷಾ ಪ್ಯಾಡ್ ವಿತರಣೆ ಮಾಡಲಾಯಿತು.

ಇಲ್ಲಿನ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ) ವಿಭಾಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕ ಭೀಮಶಪ್ಪ ಮನ್ನೆ ಮಾತನಾಡಿ, ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲವಾಗಲು ಪ್ಯಾಡ್ ವಿತರಣೆ ಕಾರ್ಯ ಶ್ಲಾಘಿಸಿದರು.

ಸಾಕಷ್ಟು ಜನರಲ್ಲಿ ಸಾಕಷ್ಟು ಇದೆ. ಆದರೆ ಕೊಡುವ ಮನಸ್ಸು ದೊಡ್ಡದು. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.

ಉಪನ್ಯಾಸಕ ನವಾಜರೆಡ್ಡಿ ಮಾತನಾಡಿ, ಒಳ್ಳೆ ಕೆಲಸ ಮಾಡುವ ಮನಸ್ಸು ಇರಬೇಕು. ಸಮಾಜ, ದೇಶ ಸೇವೆ ಮಾಡಿದವರ ಹೆಸರು ಇತಿಹಾಸ ಪುಟದಲ್ಲಿರುತ್ತದೆ. ಇಂತಹ ಆದರ್ಶ ಯುವ ಮುಖಂಡರಿಗೆ ನಾವೆಲ್ಲ ಪ್ರೋತ್ಸಾಹ ನೀಡಬೇಕು. ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಯಾದಗಿರಿಧ್ವನಿ.ಕಾಮ್ ಸಂಪಾದಕ ಅನೀಲ ಎನ್. ಬಸೂದೆ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ ಗುರುಗಳು ಕೆಲವೊಮ್ಮೆ ಬೈದು ಹೇಳಬಹುದು ಹಾಗಾಗಿ ಅನ್ಯಥಾ ಭಾವಿಸಬಾರದು.

ತಪ್ಪು ತಿದ್ದಿಕೊಂಡು ಉತ್ತಮ ವ್ಯಾಸಾಂಗ ಮಾಡಿ ಪಾಲಕರು, ಶಾಲೆಗೆ ಕೀರ್ತಿ ತರಬೇಕು. ತಂತ್ರಜ್ಞಾನವನ್ನು ಶೈಕ್ಷಣಿಕವಾಗಿ ಯಶಸ್ಸು ಸಾಧಿಸಲು ಬಳಕೆ ಮಾಡಿಕೊಂಡು ಸಫಲರಾಗಲು ಸಲಹೆ ನೀಡಿದರು.

ಜನಾರ್ಧನ ರೆಡ್ಡಿ ಅಭಿಮಾನಿಗಳ ಸಂಘದ ಅಧ್ಯಕ್ಷ ನರಸಿಂಹಲು ಗಂಗನೋಳ್ ಮಾತನಾಡಿ, ಕಲಿಕ ಸಲಕರಣೆಗಳು ಉಪಯೋಗ ಪಡಿಸಿಕೊಂಡು, ಕೀರ್ತಿ ತರಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ತೇರ್ಗಡೆಯಾದವರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದರು.

ಅಧ್ಯಕ್ಷತೆವಹಿಸಿದ್ದ ಪ್ರ.ಪ್ರಾಂಶುಪಾಲರಾದ ಈರಮ್ಮ ಮಾತನಾಡಿ, ಒಬ್ಬೊಬ್ಬರಲ್ಲಿ ಒಂದೊಂದು ಪ್ರತಿಭೆ ಅಡಗಿದೆ. ಇಂದು ಶಿಷ್ಯರ ಜೊತೆ ವೇದಿಕೆ ಹಂಚಿಕೊಂಡಿದ್ದು, ತಮ್ಮ ಕೈಯಲ್ಲಿ ಕಲಿತವರು ಸಮಾಜದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆ ಪಡುವ ಸಂಗತಿ. ಮಕ್ಕಳು ಜೀವನದಲ್ಲಿ ಗುರಿ ಸಾಧಿಸಲು ಶ್ರಮಿಸಲು ಕರೆ ನೀಡಿದರು. ಚನಬಸರೆಡ್ಡಿ ವೇದಿಕೆಯಲ್ಲಿದ್ದರು.

ಶಿಕ್ಷಕ ಲಿಂಗಾನಂದ ಗೋಗಿ ನಿರೂಪಿಸಿದರು. ಶರಣಪ್ಪ ಚಿಂತಕುಂಟಾ, ಆಂಜನೇಯ, ಭಾಗ್ಯಲಕ್ಷ್ಮೀ, ಹೇಮಲತಾ, ರಾಮಲಿಂಗಮ್ಮ, ಬಾಲಮಣಿ, ಅಲಿ ಮೌಲಾನಾ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!