ಯಾದಗಿರಿಯಲ್ಲಿ ಡಾ. ಶಿವಕುಮಾರ್ ಮಹಾಸ್ವಾಮಿ ಗಳ 6 ನೇ ಪುಣ್ಯಸ್ಮರಣೆ
ಯಾದಗಿರಿ: ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾ. ಶಿವಕುಮಾರ್ ಮಹಾಸ್ವಾಮಿಗಳು ಬಡಮಕ್ಕಳಿಗೆ ಬದುಕಿಗೆ ಬೆಳಕಾಗಿದ್ದರು.ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸಿಬೇಕಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಸಮಾಜ ಹಾಗೂ ಮಹಾಸಭಾದ ಜಿಲ್ಲಾ ಯುವ ಘಟಕದ ವತಿಯಿಂದ ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡ ಸಿದ್ದಗಂಗಾ ಮಠದ ಡಾ.ಶಿವಕುಮಾರ್ ಮಹಾಸ್ವಾಮಿಗಳ 6 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಶ್ರೀಗಳು ಮಠದಲ್ಲಿ ಲಕ್ಷಾಂತರ ಮಕ್ಕಳಿಗೆ ಅನ್ನ,ಅಕ್ಷರ,ಆಶ್ರಯ ನೀಡಿದರು .ಅನ್ನ,ಅಕ್ಷರ,ದಾಸೋಹ ಮಾರ್ಗದಿಂದ ಲಕ್ಷಾಂತರ ಬದುಕಿಗೆ ಬೆಳಕಾಗಿದ್ದಾರೆ.ಅವರ ಬಡಜನರ ಕಾಳಜಿ ತೋರಿ ಅಕ್ಷರವಂತರನ್ನಾಗಿ ಮಾಡಿದ್ದಾರೆ.ಅವರು ಹಾಕಿಕೊಟ್ಟ ಮಾರ್ಗದ ಲ್ಲಿಯೇ ಮಠದಲ್ಲಿ ಮಕ್ಕಳಿಗೆ ಶಿಕ್ಷಣ ಕಲ್ಪಿಸಲಾಗುತ್ತಿದೆ ಎಂದರು.
ಈ ವೇಳೆ ವೀರಶೈವ ಸಮಾಜದ ನಗರ ಘಟಕದ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ್ ಮಾತನಾಡಿ, ಸಿದ್ದಗಂಗಾ ಶ್ರೀಗಳು ತ್ರಿವಿಧ ದಾಸೋಹ ಮಾರ್ಗದ ಮೂಲಕ ಜ್ಞಾನದ ಬೆಳಕು ಜೊತೆ ಬದುಕಿಗೆ ದಾರಿ ತೋರಿದ್ದಾರೆ.ಸಿದ್ದಗಂಗಾ ಶ್ರೀಗಳ ಬಡವರ ಮೇಲಿದ್ದ ಕಾಳಜಿ ಹಾಗೂ ವಿಶ್ವಗುರು ಬಸವಣ್ಣನವರ ಕಾಯಕ ಮತ್ತು ದಾಸೋದ ಸಿದ್ದಾಂತಗಳು ಅವರನ್ನು ಸಿದ್ದ ಪುರುಷರನ್ನಾಗಿ ಮಾಡಿದವು.ಅವರು ತ್ರಿವಿಧ ದಾಸೋಹದ ತತ್ವದ ಮಾರ್ಗದ ಮೂಲಕ ಸೇವೆ ಮಾಡಿ ಸುದ್ದಿಯಾದರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಬದುಕು ಸಾಗಿಸಬೇಕಿದೆ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಯಾದಗಿರಿ ಡಿಎಚ್ಓ ಡಾ. ಮಹೇ ಶ್ ಬಿರಾದಾರ ಮಾತನಾಡಿ, ರಾಜ್ಯಾದ್ಯಂತ ಇಂದು ದಾಸೋಹ ದಿನವನ್ನಾಗಿ ಅಚರಣೆ ಮಾಡಲಾಗುತ್ತಿದೆ.ಸಿದ್ದಗಂಗಾ ಶ್ರೀಗಳು ತ್ರಿವಿಧ ದಾಸೋಹ ಹಾಗೂ ಬಸವಣ್ಣನವರ ಕಾಯಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದರು. ಕಲಿಯುಗದ ಬಸವಣ್ಣನ ವರಾದ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿಕೊಂಡು ಬರಬೇಕಿದೆ.
ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ್ ಜಾಕಾ, ತಾಲೂಕಾ ಅಧ್ಯಕ್ಷ ರಾಜಶೇಖರಗೌಡ ಚಾಮನಳ್ಳಿ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಅನ್ನಪೂರ್ಣಮ್ಮ ಜವಳಿ, ಶರಣಪ್ಪಗೌಡ ಮಲ್ಹಾರ, ಎಸ್.ಎನ್. ಮಣ್ಣೂರು, ಶೇಖರ ಅರುಣಿ, ಬಸವರಾಜ ಮೊಟ್ನಳ್ಳಿ, ರಮೇಶ್ ದೊಡ್ಡಮನಿ, ಸಿದ್ದು ಅತ್ತುತ್ತಿ, ಶ್ರೀನಾಥ ಜೈನ್, ಶರಣಪ್ಪ ಗುಳಿಗಿ, ಶರಣಪ್ಪ ಜಾಕಾ, ಮೌನೇಶ ಪಾಟೀಲ, ನೂರೆಂದಪ್ಪ ಲೇವಡಿ, ಮಂಜುನಾಥ ಜಡಿ, ಚಂದ್ರಕಾಂತ ಕರದಳ್ಳಿ, ಶರಣು ಇಡ್ಲುರು, ವಿಶ್ವನಾಥ ಕಾಜಗಾರ್, ಚಂದ್ರಶೇಖ ರ ಸೌದರಿ, ಸಂಗಮೇಶ ದೇಸಾಯಿ ಸೇರಿದಂತೆ ಅನೇಕರು ಇದ್ದರು.