ಯಾದಗಿರಿ ಚಿತ್ತಾಪೂರ ರಸ್ತೆಯಿಂದ ಗುರಸುಣಗಿ ಕ್ರಾಸ್ (ಭೀಮಾ ಬ್ಯಾರೇಜ್) ರಸ್ತೆ ಮುಖಾಂತರ ವಾಹನ ಸಂಚಾರಕ್ಕೆ ಸೂಚನೆ
ಯಾದಗಿರಿ : ನಗರದ ವನಮಾರಪಲ್ಲಿ ರಾಯಚೂರು (ಎಸ್.ಎಚ್-15) ರಾಜ್ಯ ಹೆದ್ದಾರಿಯ ಕಿ.ಮೀ 214.00ರಲ್ಲಿ ಕುಸಿದಿರುವ ರೈಲ್ವೇ ಮೇಲ್ ಸೇತುವೆಯ ಅಪ್ರೂಚ್ ರಸ್ತೆ ಕಾಮಗಾರಿ, 215.00ರ (ಭೀಮಾ ಸೇತುವೆ) ರಿಪೇರಿ ಕಾಮಗಾರಿಯ ನಿರ್ವಹಣೆ ಹಿನ್ನೆಲೆ ಜನವರಿ 23 ರಿಂದ ಫೆಬ್ರವರಿ 28ರ ವರೆಗೆ ರಸ್ತೆ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸ ಲಾಗಿದೆ ಎಂದು ಯಾದಗಿರಿ ಲೋಕೋಪ ಯೋಗಿ ಇಲಾಖೆ ವಿಭಾಗ ಕಾರ್ಯನಿರ್ವಾಹಕ ಇಂಜಿನೀಯರ ಅಭಿಮನ್ಯು ತಿಳಿಸಿದ್ದಾರೆ.
2024-25ನೇ ಸಾಲಿನ ಅಪೆಂಡಿಕ್ಷ-ಇ ಯೋಜನೆ ಯಡಿಯಲ್ಲಿ ಮಂಜೂರಾದ ಕಾಮಗಾರಿಯಾದ ಯಾದಗಿರಿ ನಗರದ ವನಮಾರಪಲ್ಲಿ ರಾಯಚೂರು (ಎಸ್.ಎಚ್-15) ರಾಜ್ಯ ಹೆದ್ದಾರಿ ಯ ಕಿ.ಮೀ 214.00ರಲ್ಲಿ ಕುಸಿದಿರುವ ರೈಲ್ವೇ ಮೇಲ್ ಸೇತುವೆ ಯ ಅಪ್ರೂಚ್ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಈ ಸ್ಥಳದಲ್ಲಿನ ರೈಲ್ವೇ ಮೇಲ್ ಸೇತುವೆ ತಡೆಗೋಡೆಯ ತೀವ್ರವಾಗಿ ಬಿರುಕು ಬಿಟ್ಟಿದ್ದು ಯಾವುದೇ ಸಮಯದಲ್ಲಿ ಕುಸಿಯುವ ಹಂತದಲ್ಲಿರುತ್ತದೆ, ಮತ್ತು 215.00ರ (ಭೀಮಾ ಸೇತುವೆ) ರಿಪೇರಿ ಕಾಮಗಾರಿಯು ಕೂಡ ಪ್ರಾರಂಭಿಸಬೇಕಾಗಿರುವುದ ರಿಂದ ಈ ರಸ್ತೆಯ ಮೇಲಿನ ವಾಹನ ಸಂಚಾರವನ್ನು ಯಾದಗಿರಿ ಚಿತ್ತಾಪೂರ ರಸ್ತೆಯಿಂದ ಗುರಸುಣಗಿ ಕ್ರಾಸ್ (ಭೀಮಾ ಬ್ಯಾರೇಜ್) ರಸ್ತೆ ಮುಖಾಂತರ ಜನವರಿ 23 ರಿಂದ ಫೆಬ್ರವರಿ 28ರ ವರೆಗೆ ಮಾರ್ಗವಾಗಿ ಸಂಚಾರ ಮಾಡಲು ಸಾರ್ವಜನಿ ಕರಲ್ಲಿ ವಿನಂತಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.