ಪತ್ರಿಕೋದ್ಯಮದ 3 ದಿಗ್ಗಜರು ಒಂದೇ ವೇದಿಕೆಯಲ್ಲಿ |ಮೊನಚಾದ ಬರಹಗಾರ ಕಿಲಾರಿ ಗಿರಿನಾಡಿನವರು
ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಜನವರಿ 25 ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ಬೆಳಿಗ್ಗೆ 10.30 ಕ್ಕೆ ಜಿಲ್ಲಾ ಪತ್ರಿಕಾ ಭವನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಅಭಿನಂದನಾ ಸಮಾರಂಭವನ್ನು ಹಿರಿಯ ಸಿವಿಲ್ ನ್ಯಾಯಾಧೀ ಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಅವರು ಉದ್ಘಾಟಿಸಲಿದ್ದಾರೆ. ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಆಗಮಿಸಲಿದ್ದಾರೆ.
ಸಂಘದ ರಾಜ್ಯ ಪರಿಷತ್ತಿನ ಸದಸ್ಯ ರಾಘವೇಂದ್ರ ಕಾಟಮನಟಗಿ ಪ್ರಾಸ್ತಾವಿಕ ಮಾತನಾಡುವರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಕಲಾಲ್ ಅತಿಥಿಯಾಗಿ ಭಾಗವಹಿಸಲಿ ದ್ದಾರೆ ಎಂದು ಹೇಳಿದರು.
ರಾಜ್ಯ ಸರಕಾರದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃ ತರಾದ ದೇವಯ್ಯ ಗುತ್ತೇದಾರ್, ಕೆಯುಡಬ್ಲ್ಯೂಜೆಯ ಖಾದಿ ಶಾಮಣ್ಣ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಅಪ್ಪಾರಾವ್ ಸೌದಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೋಮ ಶೇಖರ ಕಿಲಾರಿ, ಕರ್ನಾಟಕ ಮಾಧ್ಯಮ ಮಾನತಾ ಸಮಿತಿಯ ನೂತನ ಸದಸ್ಯ ಗುರುರಾಜ ಕುಲಕರ್ಣಿ, ಕೆಯುಡಬ್ಲ್ಯೂಜೆಯ ರಾಜ್ಯಮಟ್ಟದ ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ ಪುರಸ್ಕೃತ ನಾಮದೇವ ವಾಟ್ಕರ್, ಕೆಯುಡಬ್ಲ್ಯೂಜೆಯ ಯಜಮಾನ್ ಟಿ. ನಾರಾಯಣಪ್ಪ ಪ್ರಶಸ್ತಿ ಪುರಸ್ಕೃತ ವಿಜಯಭಾಸ್ಕರ ರೆಡ್ಡಿ, ಜಿಲ್ಲಾಡಳಿತದಿಂದ ಮಾಧ್ಯಮ ಕ್ಷೇತ್ರದಿಂದ ಪ್ರಶಸ್ತಿ ಪುರಸ್ಕೃತ ವಿಶಾಲಕುಮಾರ ಶಿಂಧೆ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಒಂದೇ ವೇದಿಕೆಯಲ್ಲಿ ಮೂವರು ದಿಗ್ಗಜರು…
ವಿಜಯ ಕರ್ನಾಟಕ ಪತ್ರಿಕೆಯ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್, ಕನ್ನಡಪ್ರಭ ಪತ್ರಿಕೆಯ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕರಾದ ಅಪ್ಪಾರಾವ್ ಸೌದಿ ಮತ್ತು ವಿಜಯವಾಣಿ ಪತ್ರಿಕೆಯ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕರಾದ ಬಾಬುರಾವ್ ಯಡ್ರಾಮಿ ಸೇರಿ ಈ ಮೂವರು ಕಲ್ಯಾಣ ಕರ್ನಾಟಕದ ಪತ್ರಿಕೋದ್ಯಮ ದಿಗ್ಗಜರು ಆಗಿದ್ದಾರೆ. ಪ್ರಖರ ಬರವಣಿಗೆ ಮೂಲಕ ಅಗ್ರ ಪಂಕ್ತಿಯಲ್ಲಿ ಇದ್ದಾರೆ. ಮೂವರು ಒಂದೇ ವೇದಿಕೆ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಅವರ ಪತ್ರಿಕೋದ್ಯಮದ ಕೃಷಿ ಆಲಿಸಲು ಅವಕಾಶ ಸಿಕ್ಕಿರುವುದು ಸುದೈವಾಗಿದೆ.
ಮೊನಚಾದ ಬರಹಗಾರ ಕಿಲಾರಿ ನಮ್ಮ ಜಿಲ್ಲೆಯವರು…
ಬೆಂಗಳೂರಿನ ವಿಜಯ ಕರ್ನಾಟಕ ಪತ್ರಿಕೆಯ ಕಿರಿಯ ಸಹಾಯಕ ಸಂಪಾದಕ ಆಗಿರುವ ಮೋನಚಾದ ಬರಹಗಾರ ಸೋಮಶೇಖರ್ ಕಿಲಾರಿ ಅವರು ಮೂಲತ: ಶಹಾಪುರ ತಾಲ್ಲೂಕಿನ ಹುಲಕಲ್ ಗ್ರಾಮದವರು ಆಗಿದ್ದಾರೆ. ಅವರಿಗೂ ಸಹ ಈ ಬಾರಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅಭೂತ ಪೂರ್ವ ಸೇವೆ ಸಲ್ಲಿಸಿದ್ದಾರೆ. ಇವರು ನಮ್ಮ ಜಿಲ್ಲೆಯವರು ಎಂಬುದು ನಮಗೂ ಹೆಮ್ಮೆಯ ಸಂಗತಿಯಾಗಿದೆ.