ಯಾದಗಿರಿ: ಮಾನ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಕರ್ನಾಟಕ, ಬೆಂಗಳೂರು ರವರು 2024-25ನೇ ಸಾಲಿನ ರಾಜ್ಯಮಟ್ಟದ *ಅತ್ಯುತ್ತಮ ಜಿಲ್ಲಾ ಚುನಾವಣಾ ಅಧಿಕಾರಿಗಳ* ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಸುಶೀಲ.ಬಿ ಅವರನ್ನು ಆಯ್ಕೆ ಮಾಡಿರುತ್ತಾರೆ.
ಈ ಪ್ರಶಸ್ತಿಗೆ ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು/ ತಹಸಿಲ್ದಾರರು / ಕಾರ್ಯನಿರ್ವಾಹಕ ಅಧಿಕಾರಿಗಳು / ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರು ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ ಪರಿಶ್ರಮದಿಂದ ಜಿಲ್ಲೆಗೆ ಪ್ರಶಸ್ತಿ ದೊರೆತಿದೆ ಎಂದು *ಡಾ. ಸುಶೀಲಾ. ಬಿ ಭಾ.ಆ.ಸೇ ಮಾನ್ಯ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಯಾದಗಿರಿ* ಪ್ರಕಟಣೆಯಲ್ಲಿ ತಿಳಿಸುವ ಜೊತೆಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಈ ಪ್ರಶಸ್ತಿಯನ್ನು ಜನೆವರಿ 25 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮತದಾರರ ದಿನಾಚರಣೆಯಲ್ಲಿ ವಿತರಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ದ ಮುಖ್ಯ ಚುನಾವಣಾಧಿಕಾರಿ ಗಳು ತಿಳಿಸಿದ್ದಾರೆ.