ತೆಲಂಗಾಣ ಗಡಿಯ ಕುಂಟಿಮರಿ ಚೆಕ್ ಪೋಸ್ಟ್ ನಲ್ಲಿ ಕರವೇಯಿಂದ ರಾಜ್ಯೋತ್ಸವ : ಪಲ್ಲಿಗಳು ಶೀಘ್ರ ಹಳ್ಳಿ ಗಳಾಗಿಸಲು ಜಿಲ್ಲಾಡಳಿತಕ್ಕೆ ಭೀಮುನಾಯಕ ಒತ್ತಾಯ
ಗುರುಮಠಕಲ್: ಕರ್ನಾಟಕ-ತೆಲಂಗಾಣ ಗಡಿ ಗುರುಮಠಕಲ್ ತಾಲೂಕಿನ ಕುಂಟಿಮರಿ ಚೆಕ್ ಪೋಸ್ಟ್ ವೃತ್ತಕ್ಕೆ ಇಷ್ಟು ವರ್ಷಗಳಿಂದ ತೆಲಂಗಾಣದ ಜಿಲಾಲಪುರ್ ಚೆಕ್ ಪೋಸ್ಟ್ ಎಂದು ಕರೆಯುತ್ತಿದ್ದರು, ಕರ್ನಾಟಕದ ಗಡಿಭಾಗ ನಮಗೆ ಸೇರಿದ್ದು,ಕರ್ನಾಟಕದ ಬಾವುಟವನ್ನು ಹಾರಿಸ್ಬೇಕು ಎಂದು ನಿರ್ಧಾರ ಮಾಡಿ ಬೃಹತ್ ಮಟ್ಟದ ಸುಮಾರು 60 ಅಡಿ ಎತ್ತರದ ಧ್ವಜ ಸ್ಥoಬ ನಿರ್ಮಾಣ ಮಾಡಿ ಕನ್ನಡ ಬಾವುಟವನ್ನು ಹಾರಿಸಲಾಯಿತು. ವೃತ್ತಕ್ಕೆ ಕರ್ನಾಟಕ ಬಾವುಟದ ಹಳದಿ ಮತ್ತು ಕೆಂಪು ಬಣ್ಣದಿಂದ ಅಲಂಕರಿಸಿ ತೋರಣಗಳಿಂದ ಶೃಂಗರಿಸಲಾಗಿತ್ತು.
ಗುರುಮಠಕಲ್ ಖಾಸಾಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳ ಅಮೃತ ಹಸ್ತದಿಂದ ಧ್ವಜಾರೋಹಣ ನೆರವೇರಿಸಲಾಯಿತು. ಈ ವೇಳೆ ಮಾತನಾಡಿದ ಶ್ರೀಗಳು, ಕರ್ನಾಟಕ ರಕ್ಷಣಾ ವೇದಿಕೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಇನ್ನು ಹಲವಾರು ಕಾರ್ಯಗಳು ಕನ್ನಡ ಭಾಷೆ ,ನೆಲ ,ಜಲ ಉಳಿಸಲು ನಿಮ್ಮ ಹೋರಾಟ ಹೀಗೆ ಸಾಗಲಿ, ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಆಶೀರ್ವದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಯಾದಗಿರಿ ನಗರ ಸಭೆ ಅಧ್ಯಕ್ಷೆ ಕುಮಾರಿ ಲಲಿತಾ ಅನಪೂರ ಮಾತನಾಡಿ, ಕರವೇ ಕುಟುಂಬ ನನ್ನ ಕುಟುಂಬ. ನಾನು ಸದಾ ಕರವೇ ಜೊತೆಗೆ ಇರುತ್ತೇನೆ. ಈ ಭಾಗದಲ್ಲಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅತೀ ಹೆಚ್ಚು ತೆಲುಗು ಭಾಷೆಯಲ್ಲಿ ಮಾತನಾಡುತ್ತಾರೆ ಅದನ್ನು ನಿಲ್ಲಿಸಿ ನಮ್ಮ ಭಾಷೆಯಾದ ಕನ್ನಡವನ್ನು ಹೆಚ್ಚು ಬಳಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷರಾದ ಟಿ. ಎನ್.ಭೀಮುನಾಯ ಮಾತನಾಡಿ, ಗಡಿ ಭಾಗದಲ್ಲಿ ನಮ್ಮ ಕನ್ನಡ ಬಾವುಟ ಹಾರಿಸಿರಿವುದು ಅತೀ ಹೆಚ್ಚು ಸಂತೋಷ ತಂದಿದೆ. ಈ ಭಾಗದಲ್ಲಿ ತೆಲುಗು ಪ್ರಭಾವ ಹೆಚ್ಚು ಇರುವುದರಿಂದ ಕನ್ನಡ ಕಟ್ಟುವ ಕೆಲಸ ಆಗಬೇಕು, ಪ್ರತಿ ಗ್ರಾಮದಲ್ಲಿ ಗ್ರಾಮ ಘಟಕ ಆಗಬೇಕು.
ಗುರುಮಠಕಲ್ ತಾಲೂಕಿನ ಅತೀ ಹೆಚ್ಚು ಗ್ರಾಮಗಳು ಇಂದಿಗೂ ಕೂಡ ತೆಲಗು ಭಾಷೆಯ ಪಲ್ಲಿ ಎಂದು ಉಳಿದು ಕೊಂಡಿವೆ ಅದನ್ನು ಹಳ್ಳಿ ಎಂದು ಮರು ನಾಮಕರಣ ತಾಲೂಕ ಮತ್ತು ಜಿಲ್ಲಾಡಳಿತ ಅತೀ ಶೀಘ್ರದಲ್ಲೇ ಮಾಡಬೇಕು ಎಂದು ಆಗ್ರಹಿಸಿದರು.
ಗುರುಮಠಕಲ್ ತಾಲೂಕಿನ ಕರವೇ ಅಧ್ಯಕ್ಷ ಶರಣಬಸ್ಸಪ್ಪ ಎಲ್ಹೇರಿ ಮಾತನಾಡಿ, ಗಡಿ ತಾಲೂಕಿನ ಸುಮಾರು 60% ಹಳ್ಳಿಗಳಲ್ಲಿ ತೆಲುಗು ಪ್ರಭಾವ ಹೆಚ್ಚಿದೆ. ಇಲ್ಲಿ ಕನ್ನಡವನ್ನು ಕಟ್ಟೋ ಕೆಲ್ಸ ನಾನು ಪ್ರಾಮಾಣಿಕತೆಯಿಂದ ಮಾಡುತ್ತೇನೆ. ಇಲ್ಲಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಹೋರಾಟವನ್ನು ಮಾಡುವುದಾಗಿ ಹೇಳಿದರು.
ಈ ಗಡಿ ಭಾಗದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಅತಿ ಹೆಚ್ಚು ಕಾರ್ಯಕ್ರಮ ರೂಪಿಸಿ ಕನ್ನಡ ಭಾಷೆ ಬಗ್ಗೆ ಸ್ವಾಭಿಮಾನ ಹೆಚ್ಚಿಸಬೇಕು ಹಾಗೂ ಗಡಿನಾಡು ಪ್ರಾಧಿಕಾರ ಈ ಭಾಗಕ್ಕೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ , ಸರಕಾರ ಹೆಚ್ಚು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ್ ,ಯುವ ಘಟಕ ಜಿಲ್ಲಾ ಅಧ್ಯಕ್ಷ ವಿಶ್ವರಾಧ್ಯ ದಿಮ್ಮೆ , ಯಾದಗಿರಿ ನಗರ ಘಟಕ ಅಧ್ಯಕ್ಷ ಅಂಬರೀಶ್ ಅತ್ತಿಮನಿ, ವಿದ್ಯಾರ್ಥಿ ಘಟಕ ಜಿಲ್ಲಾ ಅಧ್ಯಕ್ಷ ವಿಶ್ವರಾಜ್ ,ಸಿದ್ರಾಮರೆಡ್ಡಿ ಚಿನ್ನಾಕಾರ್,ಹನಮಂತು ಅಚ್ಚೋಲಾ, ಸಿದ್ದಲಿಂಗರೆಡ್ಡಿ ಮುನುಗಲ್, ಕಸಾಪ ಅಧ್ಯಕ್ಷ ಬಸರೆಡ್ಡಿ ಎಂ. ಟಿ. ಪಲ್ಲಿ ,ಅಬ್ದುಲ್ ರಿಯಾಜ್ , ಗೋಪಾಲಕೃಷ್ಣ ಮೇದಾ, ಲಿಂಗಾರೆಡ್ಡಿ ಪಾಟೀಲ್ ವಡವಟ್ , ಜಗದೀಶ್ ನಸಲವಾಯಿ ,ಪ್ರಕಾಶ್ ಪಾಟೀಲ್ ಜೈಗ್ರಾಮ್ , ವಿಜಯ್ ತೋರಣತಿಪ್ಪ , ಬಸ್ಸುನಾಯಕ್ ಸೈದಾಪುರ್ , ಸುರೇಶ್ ಬೆಳಗುಂದಿ ಇತರರಿದ್ದರು.