ಸೇಡಂ ತಾಲೂಕಿನ 400 ಆಸ್ತಿಗಳಿಗೆ ವಕ್ಫ್ ನೋಟಿಸ್; ವಕ್ಫ್ ಹಟಾವೋ, ಕಿಸಾನ್ ಬಚಾವೋ ಘೋಷಿಸಿದ ಬಿಜೆಪಿ
ಸೇಡಂ: ತಾಲೂಕಿನ ಸುಮಾರು 400 ಆಸ್ತಿಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿದ್ದು ಇದರಿಂದ ರೈತರು, ಮಠ ಮಾನ್ಯಗಳ ಜಮೀನುಗಳನ್ನು ಕಬಳಿಸುವ ಹುನ್ನಾರ ಅಡಗಿದೆ ಎಂದು ಬಿಜೆಪಿ ಮುಖಂಡ,ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸೋಮವಾರ ಸೇಡಂ ಪಟ್ಟಣದಲ್ಲಿ ಭಾಜಪಾ ವತಿಯಿಂದ ಹಮ್ಮಿಕೊಂಡಿದ್ದ ರೈತರ ಹಾಗೂ ಸಾರ್ಜವನಿಕರ ಜಮೀನು ಉಳಿವಿಗಾಗಿ ವಕ್ಫ್ ಹಠಾವೋ, ಕಿಸಾನ್ ಬಚಾವೋ ಎಂಬ ಬೃಹತ್ ಹೋರಾಟದ ನೇತೃತ್ವವಹಿಸಿ ಮಾತನಾಡಿದರು.
ಕೊತ್ತಲ ಬಸವೇಶ್ವರ ದೇವಾಲಯದಿಂದ ತಹಸೀಲ್ದಾರ ಕಚೇರಿವರೆಗೆ ಕಾಲ್ನಡಿಗೆ ಮುಖಾಂತರ ತೆರಳಿ ಸಹಾಯಕ ಆಯುಕ್ತರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ವಕ್ಫ್ ನೋಟಿಸ್ ನೀಡಿದ್ದು ಅವೆಲ್ಲವನ್ನೂ ಹಿಂಪಡೆಯಬೇಕು ಅದೆ ರೀತಿ ಪುರಾತನ ದೇವಾಲಯ, ಸಾಲು ಮಂಟಪ ಗಣಪತಿ ದೇವಾಲಯ ಹಾಗೂ ತೋಟ್ನಳ್ಳಿ ಗ್ರಾಮದ ತ್ರೀಮೂತಿ೯ ಮಠದ ಜಮೀನಿನ ಪಹಣಿಯಲ್ಲಿ ನಮೂದಿಸಿದ ವಕ್ಫ ಮಂಡಳಿ ಎನ್ನುವುದನ್ನು ಎರಡು ದಿನದಲ್ಲಿ ತೆಗೆದು ಹಾಕಬೆಕು ಇಲ್ಲವಾದರೆ ಸೇಡಂ ಬಂದ್ ಮಾಡಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು,ನಗರ ಅಧ್ಯಕ್ಷರು, ಪಕ್ಷದ ಮುಖಂಡರು ಸಹಸ್ರಾರು ಸಂಖ್ಯೆಯಲ್ಲಿ ಕಾಯ೯ಕತ್ರರು ಉಪಸ್ಥಿತರಿದ್ದರು.
ಚಿಂಚೋಳಿಯಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ರೈತರ ಧರಣಿ: ಇನ್ನೊಂದೆಡೆ ಚಿಂಚೋಳಿಯ ಅಂಬೇಡ್ಕರ್ ವೃತ್ತದಲ್ಲಿ ಚಿಂಚೋಳಿ, ಕಾಳಗಿ, ಚಿತ್ತಾಪುರ, ಸೇಡಂ, ಕಮಲಾಪುರ ಹಾಗೂ ಹುಮನಾಬಾದ್ ತಾಲೂಕಿನ ರೈತರು ಧರಣಿ ಆರಂಭಿಸಿದ್ದು ವಿವಿಧ ಮಠಾಧೀಶರ ರೈತರಿಗೆ ಬೆನ್ನೆಲುಬಾಗಿ ಹೋರಾಟದಲ್ಲಿ ಭಾಗವಹಿಸಿದ್ದರು.